More

    ಜಾತಿ ಆಧರಿಸಿ ಕೂಲಿ ಹಣ ಪಾವತಿಸದಿರಲು ಡಿಸಿಗೆ ಕರ್ನಾಟಕ ಜನಸೈನ್ಯ ಸಂಘಟನೆ ಒತ್ತಾಯ

    ರಾಯಚೂರು: ತಾಲೂಕಿನ ಗ್ರಾಪಂಗಳಲ್ಲಿ ನರೇಗಾದಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಜಾತಿ ಆಧಾರದಲ್ಲಿ ಕೂಲಿ ಹಣ ಪಾವತಿಸುವ ಆದೇಶ ರದ್ದು ಮಾಡಿ ಏಕಕಾಲಕ್ಕೆ ಕೂಲಿ ನೀಡಲು ಒತ್ತಾಯಿಸಿ ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಕರ್ನಾಟಕ ಜನಸೈನ್ಯ ಸಂಘಟನೆ ಕಾರ್ಯಕರ್ತರು ಮಂಗಳವಾರ ಮನವಿ ಸಲ್ಲಿಸಿದರು.

    ತಾಲೂಕಿನ 34 ಗ್ರಾಪಂಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಕೂಲಿ ಕಾರ್ಮಿಕರು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಜಾತಿ ಆಧಾರದಲ್ಲಿ ಮೊದಲ ಹಂತದಲ್ಲಿ ಎಸ್‌ಸಿ, ಎಸ್‌ಟಿಗೆ ಕೂಲಿ ಹಣ ಬಿಡುಗಡೆ ಮಾಡಿ 2ನೇ ಹಂತದಲ್ಲಿ ಒಬಿಸಿ ಕೂಲಿ ಕಾರ್ಮಿಕರಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ನರೇಗಾದಡಿ ದುಡಿಯುವ ಎಲ್ಲ ಕೂಲಿಕಾರರು ಬಡವರಿದ್ದು, ವೇತನ ನೀಡುವಾಗ ತಾರತಮ್ಯ ಸರಿಯಲ್ಲ. ಇದರಿಂದ ಕೂಲಿಕಾರರಲ್ಲಿ ವೈಮನಸ್ಸು ಮೂಡುತ್ತಿದೆ ಎಂದು ದೂರಿದರು.

    ಕೂಡಲೇ ಆದೇಶ ಹಿಂಪಡೆದು ಸರ್ವರಿಗೆ ಸಮಾನವಾಗಿ ಒಂದೇ ದಿನದಲ್ಲಿ ವೇತನ ಪಾವತಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಬೇಕು. ನರೇಗಾ ಯೋಜನೆ ಸಮರ್ಪಕವಾಗಿ ಜಾರಿಗೆ ತರಬೇಕು. ಕೆಲಸ ಮಾಡಿದ ತಕ್ಷಣವೇ ಕೂಲಿ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎ.ರಮೇಶ್ ವಾಡವಾಟಿ, ವೆಂಕಟೇಶ್ ಅರಗೋಲ, ವೆಂಕಟಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts