More

  ರಾಯಚೂರಿನಲ್ಲಿ ಮನೆ-ಮನೆಗೆ ಭೇಟಿ ನೀಡಿ ಸಿಎಎ ಜಾಗೃತಿ ಕರಪತ್ರ ಹಂಚಿಕೆ

  ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ನಾಗರಿಕ ನೋಂದಣಿ ಕುರಿತು ಬಿಜೆಪಿ ಮುಖಂಡರು, ಕಾರ್ಯಕರ್ತರು ಮನೆ, ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.

  ನಗರದ ಎನ್‌ಜಿಒ ಕಾಲನಿಯ ನೀಲಂಕಂಠೇಶ್ವರ ದೇವಸ್ಥಾನದಲ್ಲಿ ಭಾನುವಾರ ಮನೆ, ಮನೆ ಭೇಟಿ ಅಭಿಯಾನಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಶಾಸಕ ಡಾ. ಶಿವರಾಜ ಪಾಟೀಲ್ ಚಾಲನೆ ನೀಡಿದರು. ಕೇಂದ್ರ ಸರ್ಕಾರ ದೇಶದ ಭದ್ರತೆ ದೃಷ್ಟಿಯಿಂದ ಕಾಯ್ದೆ ಜಾರಿಗೊಳಿಸಿದ್ದು, ಯಾರಿಗೂ ತೊಂದರೆ ನೀಡುವುದಕ್ಕಲ್ಲ. ಯಾರಿಗೂ ಸಮಸ್ಯೆಯಾಗದು. ಇದು ಯಾವುದೇ ಪಕ್ಷ, ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಇಡೀ ದೇಶದ ಭದ್ರತೆಗಾಗಿ ರೂಪಿಸಿದ ಕಾಯ್ದೆಯಾಗಿದೆ. ಕೆಲ ಮುಸ್ಲಿಂ ದೇಶಗಳಲ್ಲಿ ವಾಸಿಸುತ್ತಿರುವ ಹಿಂದುಗಳಿಗೆ ಸೂಕ್ತ ಭದ್ರತೆ ಇಲ್ಲ. ಅಲ್ಲಿ ಅವರಿಗೆ ಸಾಕಷ್ಟು ಸಮಸ್ಯೆ ನೀಡಲಾಗುತ್ತಿದೆ. ಅಂಥವರಿಗೆ ಆಶ್ರಯ ಬಯಸಿ ಬಂದರೆ ನಮ್ಮ ದೇಶದಲ್ಲಿ ಪೌರತ್ವ ನೀಡಲಾಗುತ್ತದೆ. ಹಾಗಂತ ಮುಸ್ಲಿಮರಿಗೆ ನೀಡುವುದಿಲ್ಲ ಎಂದಲ್ಲ. ಹಿನ್ನೆಲೆ ಚೆನ್ನಾಗಿದ್ದರೆ ಬೇರೆ ದೇಶದ ಮುಸ್ಲಿಮರಿಗೂ ಪೌರತ್ವ ನೀಡಲಾಗುವುದು ಎಂದು ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮನವರಿಕೆ ಮಾಡಿ ಕರಪತ್ರಗಳನ್ನು ಹಂಚಲಾಯಿತು.

  ಮಾಜಿ ಶಾಸಕ ತಿಪ್ಪರಾಜ್ ಹವಲ್ದಾರ್ ನೇತೃತ್ವದಲ್ಲೂ ತಾಲೂಕಿನ ಗಿಲ್ಲೆಸೂಗೂರಲ್ಲಿ ಮನೆಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.

  ನಗರದಲ್ಲಿ ಮುಖಂಡರಾದ ಕಡಗೋಲು ಆಂಜನೇಯ, ಅಶೋಕ ಗಸ್ತಿ, ದೊಡ್ಡ ಮಲ್ಲೇಶ, ನಗರಸಭೆ ಸದಸ್ಯ ನಾಗರಾಜ, ಶಶಿಧರ ಮಸ್ಕಿ, ಜಲ್ದಾರ್, ಮಹಿಳಾ ಘಟಕದ ವಿಜಯ ರಾಜೇಶ್ವರಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts