More

    ಅ.9ರಂದು ಬೆಂಗಳೂರು ಚಲೋ


    ರಾಯಚೂರು: ಎಸ್.ಟಿ, ಎಸ್.ಸಿ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಹಲವು ದಿನಗಳಿಂದ ಹೋರಾಟ ನಡೆಯುತ್ತಿದ್ದು, ವಾಲ್ಮಿಕಿ ಜಯಂತಿಯೊಳಗಾಗಿ ಬೇಡಿಕೆ ಈರೇರಿಸದಿದ್ದಲ್ಲಿ ಅ.9ರಂದು ವಾಲ್ಮೀಕಿ ಸಮುದಾಯದಿಂದ ಬೆಂಗಳೂರು ಚಲೊ ಚಳವಳಿ ಹಮ್ಮಿಕೊಳ್ಲಲಾಗುವುದು ಎಂದು ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ರಘುವೀರ ನಾಯಕ ಹೇಳಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂಬಂಧ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ. ಸೆ.12ರಂದು ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ಶಾಸಕರು ಧ್ವನಿ ಎತ್ತಬೇಕು. ಸೆ.15ರಂದು ಎಲ್ಲ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿ ಜನರಲ್ಲಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ವಾಲ್ಮೀಕಿ ಜಯಂತಿಯೊಳಗಾಗಿ ಮೀಸಲಾತಿ ಹೆಚ್ಚಳದ ಕುರಿತು ಸರ್ಕಾರ ಆದೇಶ ಮಾಡದಿದ್ದರೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

    ಪದಾಧಿಕಾರಿಗಳಾದ ಮಲ್ಲಿಕಾರ್ಜುನ ನಾಯಕ, ರಮೇಶ ನಾಯಕ, ರಾಮು ಜಲ್ಲಿ, ರಾಮಕೃಷ್ಣ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts