More

    ಕರೊನಾ ಎರಡನೇ ಅಲೆಗೆ ಮೋದಿ ಕಾರಣ; ರಾಹುಲ್ ಗಾಂಧಿ ವಾಗ್ದಾಳಿ

    ನವದೆಹಲಿ; ಕರೊನಾ ನಿರ್ವಹಣೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರೊನಾ ಸಮಸ್ಯೆಯನ್ನು ಒಂದು ಪ್ರಧಾನಿಯವರಾದರೂ ಅರ್ಥ ಮಾಡಿಕೊಳ್ಳಬೇಕು ಅವರಿಗೆ ಅರ್ಥ ಆಗದಿದ್ದರೇ ಕೇಂದ್ರ ಸರ್ಕಾರವಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

    ಶುಕ್ರವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಬಗ್ಗೆ ನಾನು ಸೇರಿದಂತೆ ಅನೇಕರು ಮೋದಿಯವರಿಗೆ ಹಾಗೂ ಸರ್ಕಾರಕ್ಕೆ ಅನೇಕ ಎಚ್ಚರಿಕೆ ನೀಡಿದರೂ ನಮ್ಮನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ ನಮ್ಮನ್ನು ಅಣಕ ಮಾಡಲಾಯಿತು. ಈಗ ನೋಡಿದರೆ ಕರೊನಾದಿಂದ ದೇಶದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ಅವೈಜ್ಞಾನಿಕ ಲಾಕ್ಡೌನ್ ನಿಂದಾಗಿ ಅನೇಕ ಲಕ್ಷ ಜನ ನಿರ್ಗತಿಕರಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇಷ್ಟೆಲ್ಲಾ ಆದರೂ ಮೋದಿಯವರು ಇನ್ನೂ ಸೀರಿಯಸ್ ಆಗದಿರುವುದೇ ನನಗೆ ಆಶ್ಚರ್ಯ ತರಿಸಿದೆ. ಆಕ ಆಕ್ಸಿಜನ್, ಲಸಿಕೆ, ಔಷಧಿಯ ಆಹಾಕಾರದ ಬಗ್ಗೆ ಮೋದಿಯವರು ಏನೂ ಮಾತನಾಡುತ್ತಿಲ್ಲ ಎಂದು ಜರಿದಿದ್ದಾರೆ. ಕೇಂದ್ರ ಸರ್ಕಾರವಾದರೂ ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

    ದೇಶದಲ್ಲಿ ಶೇ 3. ರಷ್ಟು ಜನಕ್ಕೆ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ. ಭವಿಷ್ಯದ ಬಗ್ಗೆ ಯೋಚಿಸದೇ ಬೇರೆ ದೇಶಗಳಿಗೆ ಲಸಿಕೆ ಕೊಟ್ಟು ಜಂಭ ಕೊಚ್ಚಿಕೊಂಡಿದ್ದೇ ಮೋದಿ ಸಾಧನೆ ಎಂಬಂತಾಯಿತು. ಅಸಲಿಗೆ ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಇಗಿರುವ ಸಂಖ್ಯೆಗಿಂತ ನಾಲ್ಕು ಪಟ್ಟು ಅಧಿಕ ಇದೆ. ಸಾವಿನ ಪ್ರಮಾಣವನ್ನು ಮುಚ್ಚಿಟ್ಟು ಮೋದಿ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಹುಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಇದನ್ನೂ ಓದಿ; ಸಾಲ ತೀರಿಸದಿದ್ರೆ ಒಡವೆ ಹರಾಜಾಕ್ತೇವೆ: ಸುಸ್ತಿದಾರರಿಗೆ ಖಾಸಗಿ ಬ್ಯಾಂಕ್ ನೋಟಿಸ್,  ಸಣ್ಣ ವ್ಯಾಪಾರಿಗಳು ಕಂಗಾಲು ಮರುಪಾವತಿ ಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts