More

    ಕಾಲೇಜು ವಿದ್ಯಾರ್ಥಿನಿಯರ ಪ್ರಶ್ನೆಗೆ ರಾಹುಲ್​ ಗಾಂಧಿ ಸ್ಮಾರ್ಟ್​​​ ಉತ್ತರ; ಮದುವೆ ವಿಚಾರವಾಗಿ ಏನ್​ ಹೇಳಿದ್ರು ಗೊತ್ತಾ?

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜೈಪುರದಲ್ಲಿ ಮಹಿಳಾ ವಿದ್ಯಾರ್ಥಿಗಳು ಹಲವಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್​​ ಗಾಂಧಿ ಸಂವಾದ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
    53 ವರ್ಷದ ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ 53 ವರ್ಷದ ಮಹಿಳೆಯೊಬ್ಬರು ರಾಹುಲ್​ಗೆ ಕೇಳಿರುವ ಪ್ರಶ್ನೆ ಮತ್ತು ಅದಕ್ಕೆ ರಾಹುಲ್​ ನೀಡಿರುವ ಉತ್ತರದ ವಿಡಿಯೋಗೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.


    ನೀವು ಇಷ್ಟು ಹ್ಯಾಂಡ್​​ಸಮ್​ ಯಂಗ್​ ಮ್ಯಾನ್ ಯಾಕೆ ನೀವು ಮದುವೆಯಾಗುತ್ತಿಲ್ಲ ಎಂದು ರಾಹುಲ್​ ಗಾಂಧಿಗೆ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್​​, ನಾನು ಕಾಂಗ್ರೆಸ್​​ ಪಕ್ಷದ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ. ಹಾಗಾಗಿ ನಾನು ಇನ್ನೂ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.
    ಅವರ ನೆಚ್ಚಿನ ತಿನಿಸುಗಳ ಬಗ್ಗೆ ಕೇಳಿದಾಗ, ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ ಎಂದು ಅವರು ಹೇಳಿದ್ದಾರೆ.


    ಇನ್ನು ಅವರು ಹೋಗೋಕೆ ಇಷ್ಟ ಪಡುವಂತಹ ನೆಚ್ಚಿನ ಪ್ರವಾಸಿ ತಾಣದ ಬಗ್ಗೆ ಕೇಳಿದಾಗ ನಾನು ಹೋಗದಿರುವ ಎಲ್ಲಾ ಜಾಗಗಳನ್ನೂ ನೋಡುವ ಕುತೂಹಲ ನನಗಿದೆ ಎಂದಿದ್ದಾರೆ.

    ನಂತರದಲ್ಲಿ ಅವರಿಗೆ​​ ನೀವು ಮುಖಕ್ಕೆ ಯಾವ ಕ್ರೀಮ್​ ಮತ್ತು ಸೋಪ್​ ಬಳಸುತ್ತೀರಿ ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ನಾನು ಏನನ್ನೂ ಹಚ್ಚುವುದಿಲ್ಲ ನೀರಿನಲ್ಲಿ ಮುಖ ತೊಳೆಯುತ್ತೇನೆ ಎಂದಿದ್ದಾರೆ.


    ಒಟ್ಟಾರೆಯಾಗಿ ರಾಹುಲ್ ಗಾಂಧಿ ಜತೆ ಸಂವಾದ ನಡೆಸಿದ ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು, ರಾಹುಲ್​ ಗಾಂಧಿಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದು, ಅದರಲ್ಲಿ ಮದುವೆ ವಿಚಾರ ವೈರಲ್​ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts