More

    ಪಂಜಾಬ್ ಕಿಂಗ್ಸ್ ನೀರಸ ನಿರ್ವಹಣೆಗೆ ಕಾರಣ ವಿವರಿಸಿದ ನಾಯಕ ಕೆಎಲ್ ರಾಹುಲ್

    ಅಬುಧಾಬಿ: ನಮ್ಮ ತಂಡ ಒತ್ತಡವನ್ನು ಸಮರ್ಥವಾಗ ನಿಭಾಯಿಸಲು ಸಾಧ್ಯವಾಗದೆ ಎಡವುತ್ತಿದೆ ಎಂದು ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೇಸರಿಸಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಮಂಗಳವಾರದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಸೋಲು ಕಂಡ ಬಳಿಕ ಮಾತನಾಡಿದ ರಾಹುಲ್, ‘ನಮ್ಮ ಬೌಲರ್‌ಗಳು ಉತ್ತಮ ಪ್ರತಿಹೋರಾಟ ತೋರಿದರು. ಆದರೆ ನಾವು ಸಾಕಷ್ಟು ಸ್ಕೋರ್ ಮಾಡಲಿಲ್ಲ. ಈ ಪಿಚ್‌ನಲ್ಲಿ 170 ಪ್ಲಸ್ ಮೊತ್ತ ಪೇರಿಸಬಹುದಾಗಿತ್ತು. ಮುಂದಿನ 3 ಪಂದ್ಯಗಳು ನಮಗೆ ಮಹತ್ವದ್ದು. ಒಮ್ಮೆಗೆ ಒಂದು ಪಂದ್ಯದ ಮೇಲಷ್ಟೇ ಗಮನ ಹರಿಸಿ, ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಆಟವನ್ನು ಆನಂದಿಸಬೇಕಾಗಿದೆ’ ಎಂದು ಹೇಳಿದರು.

    ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ 6 ವಿಕೆಟ್‌ಗೆ 135 ರನ್ ಮಾತ್ರ ಗಳಿಸಿತು. ಪ್ರತಿಯಾಗಿ ಮುಂಬೈ ಆರಂಭಿಕ ಆಘಾತದ ನಡುವೆಯೂ ಸೌರಭ್ ತಿವಾರಿ (45) ಮತ್ತು ಹಾರ್ದಿಕ್ ಪಾಂಡ್ಯ (40*) ಉಪಯುಕ್ತ ಕೊಡುಗೆಯಿಂದ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 137 ರನ್ ಗಳಿಸಿ ಜಯಿಸಿತು. ಕೊನೇ 2 ಓವರ್‌ಗಳಲ್ಲಿ 16 ರನ್ ಅಗತ್ಯವಿದ್ದಾಗ, ಹಾರ್ದಿಕ್-ಪೊಲ್ಲಾರ್ಡ್ ಜೋಡಿ ಶಮಿ ಎಸೆದ ಇನಿಂಗ್ಸ್‌ನ 19ನೇ ಓವರ್ ಒಂದರಲ್ಲೇ 17 ರನ್ ಕಸಿದು ಗೆಲುವು ತಂದಿತು. ಆಲ್ರೌಂಡ್ ನಿರ್ವಹಣೆ ತೋರಿದ ಪೊಲ್ಲಾರ್ಡ್ (8ಕ್ಕೆ 2 ವಿಕೆಟ್, 15*ರನ್) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಆಡುತ್ತಿಲ್ಲ. ಆದರೆ ಇದು ಸುದೀರ್ಘ ಟೂರ್ನಿ. ನಾವು ನಮ್ಮ ಕಾರ್ಯತಂತ್ರಕ್ಕೆ ಅಂಟಿಕೊಂಡಿರಬೇಕಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಬಳಿಕ ಹಾರ್ದಿಕ್ ಪಾಂಡ್ಯ ಕೊನೆಗೂ ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದಿರುವುದು ಖುಷಿಯ ವಿಷಯ ಎಂದು ಮುಂಬೈ ನಾಯಕ ರೋಹಿತ್ ಶರ್ಮ ಹೇಳಿದರು.

    ಕ್ವಿಂಟನ್ ಡಿಕಾಕ್ ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಿದ ದಕ್ಷಿಣ ಆಫ್ರಿಕಾದ 4ನೇ ಬ್ಯಾಟರ್ ಎನಿಸಿದರು. ಎಬಿಡಿ, ಕಾಲಿನ್ ಇನ್‌ಗ್ರಾಮ್ ಮತ್ತು ಡೇವಿಡ್ ಮಿಲ್ಲರ್ ಮೊದಲ ಮೂವರು. ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ 3ನೇ ಬಾರಿ ಗೋಲ್ಡನ್ ಡಕ್ ಗಳಿಸಿದರು. ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ 50 ವಿಕೆಟ್ ಮತ್ತು ಸಾವಿರ ರನ್ ಗಳಿಸಿದ 2ನೇ ಆಟಗಾರ ಎನಿಸಿದರು. ಕೈರಾನ್ ಪೊಲ್ಲಾರ್ಡ್ ಮೊದಲಿಗರಾಗಿದ್ದಾರೆ.

    ಐಪಿಎಲ್‌ನಿಂದ ಹೊರಬಿದ್ದ ದಿಗ್ಗಜ ಸಚಿನ್​ ತೆಂಡುಲ್ಕರ್ ಪುತ್ರ ಅರ್ಜುನ್

    ಡ್ರೀಮ್ ಇಲೆವೆನ್‌ನಲ್ಲಿ ಐಪಿಎಲ್ ಪಂದ್ಯಕ್ಕೆ 49 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಗೆದ್ದ ಕ್ಷೌರಿಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts