More

    ಲೋಕೋಪಕಾರದ ಕೆಲಸಕ್ಕಾಗಿ ರಾಗಿಣಿ ದ್ವಿವೇದಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ತಮ್ಮ ನಟನೆಗೆ ಪ್ರಶಸ್ತಿ ಪಡೆದಿರುವುದನ್ನು ಕೇಳಿರುತ್ತೀರಿ. ಇದೀಗ ಅವರಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ. ಆದರೆ ಆ ಪ್ರಶಸ್ತಿ ಸಿಕ್ಕಿರುವುದು ನಟನೆಗಲ್ಲ ಬದಲಾಗಿ ಲೋಕೋಪಕಾರಿ ಕೆಲಸಗಳಿಗಾಗಿ.

    ಕರೊನಾ ಆರಂಭವಾದಾಗಿನಿಂದ ರಾಗಿಣಿ ಸಮಾಜ ಸೇವೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಊಟ ವಿತರಣೆ, ಕಿಟ್ ವಿತರಣೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಅವರ ಲೋಕೋಪಕಾರಿ ಕೆಲಸವನ್ನು ಗುರುತಿಸಿ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆಯಂತೆ. ದಕ್ಷಿಣ ಭಾರತದಲ್ಲಿ ಲೋಕೋಪಕಾರಿ ಕೆಲಸಕ್ಕೆ ಈ ಅವಾರ್ಡ್ ಪಡೆದ ಮೊದಲ ಮಹಿಳೆ ನಾನಾಗಿದ್ದೇನೆ ಎಂದು ರಾಗಿಣಿ ಅವರೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಕೆಂಪು ಸೀರೆ ಉಟ್ಟು, ಕೈನಲ್ಲಿ ಪ್ರಶಸ್ತಿ ಹಿಡಿದುಕೊಂಡಿರುವ ಫೋಟೋವನ್ನು ನಟಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ನನಗೆ ಅತ್ಯಂತ ಪ್ರತಿಷ್ಠಿತ ವಿಷಯವಾಗಿದೆ ಮತ್ತು ನಿಮ್ಮ ಜತೆ ಹಂಚಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಮ್ಮ ಕೆಲಸಗಳು ಇಲ್ಲಿಗೆ ನಿಲ್ಲುವುದಿಲ್ಲ, ಇದು ಇನ್ನೂ ಆರಂಭ ಎಂದೇ ಹೇಳಬಹುದು. ನನ್ನ ಜತೆ ತಂಡವಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಧನ್ಯವಾದಗಳು. ನೀವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್)

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಾಯಿಯನ್ನು ಟ್ರಿಪ್​ ಕರೆದೊಯ್ದು ಅಂತಿಮ ಆಸೆ ಪೂರೈಸಿದ ಮಾಲೀಕ

    ‘ಅಂಬರೀಶ್ ಫ್ಯಾಮಿಲಿಗಾಗಿ ಪ್ರಾಣ ಕೊಡೋಕೂ ಸಿದ್ಧ, ನನ್ನ ಹೆದರಿಸೋಕೆ ನಿಮ್ಮಿಂದಾಗಲ್ಲ’

    ವಜ್ರಮುನಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಕ್​ಲೈನ್ ವೆಂಕಟೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts