More

    ಸಂಸ್ಕಾರದಿಂದ ಪ್ರತಿಭಾವಂತರ ಉದಯ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

    ಗೋಕರ್ಣ: ಮಣ್ಣು ಸತ್ವ ಭರಿತವಾಗಿದ್ದಲ್ಲಿ ಮಾತ್ರ ಸುಂದರ ಹೂವು ರೂಪ ತಳೆದು ಸಾವಿರಾರು ಮನಸ್ಸುಗಳನ್ನು ಪ್ರಫುಲ್ಲ ಗೊಳಿಸುತ್ತದೆ. ಅದೇ ರೀತಿ ಒಂದು ಊರು, ಒಂದು ನಾಡು ಪರಂಪರೆ ಯಿಂದ ಪಡೆದಿರುವ ಅಮೋಘವಾದ ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ಹಲವು ಪ್ರತಿಭಾವಂತರು ಉದಯಿ ಸುತ್ತಾರೆ. ಇದಕ್ಕೆ ಪುರಾತನ ಕ್ಷೇತ್ರ ಗೋಕರ್ಣ ಸಾಕ್ಷಿ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಮಹಾಬಲೇಶ್ವರ ಮಂದಿರ ವತಿಯಿಂದ ಅಮೆರಿಕದ ಖ್ಯಾತ ಕ್ಯಾನ್ಸರ್ ಸಂಶೋಧಕ, ಗೋಕರ್ಣದ ಡಾ. ನಾರಾಯಣ ಹೊಸ್ಮನೆ ಅವರಿಗೆ ಸೋಮವಾರ ‘ಸಾರ್ವಭೌಮ ಪ್ರಶಸ್ತಿ’ ಪ್ರದಾನ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು. ಗೋಕರ್ಣದಲ್ಲಿ ತಲತಲಾಂತರ ದಿಂದ ಸಾಗಿ ಬಂದ ಇಂಥ ಸಾಧನಾ ಸಂಪನ್ನತೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಉಳಿಸಿ ಬೆಳೆಸುವ ಕಾರ್ಯ ಆಗಲಿ. ಇದಕ್ಕೆ ಶ್ರೀ ರಾಮಚಂದ್ರಾಪುರಮಠ ಮತ್ತು ಶ್ರೀ ಮಹಾಬಲೇಶ್ವರ ಮಂದಿರ ಸಕಲ ಸಹಾಯ- ಸಹಕಾರ ಒದಗಿಸಲಿದೆ ಎಂದು ಹೇಳಿದರು. ಡಾ. ಹೊಸ್ಮನೆ ಅವರ ಪರವಾಗಿ ಭದ್ರಕಾಳಿ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್ ಪ್ರಶಸ್ತಿ ಸ್ವೀಕರಿಸಿ, ಡಾ. ಹೊಸ್ಮನೆ ಅವರಿಗೆ ಶ್ರೀಗಳು ಹರಸಿ ದಯಪಾಲಿಸಿದ ಈ ಪ್ರಶಸ್ತಿ ಫಲಕವನ್ನು ಭದ್ರಕಾಳಿ ಶಾಲೆಯಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದು ಇಂದಿನ ಮತ್ತು ಮುಂದಿನ ಪೀಳಿಗೆಗೆ ಉತ್ತೇಜನ ನೀಡಿ ಹೊಸ್ಮನೆ ಅವರಂತಹ ಅನೇಕ ಕೀರ್ತಿಶಾಲಿಗಳ ಉದಯಕ್ಕೆ ಕಾರಣವಾಗಲಿ ಎಂದರು.

    ಮಹಾಬಲೇಶ್ವರ ಮಂದಿರದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ, ಶಾಲಾ ಆಡಳಿತ ಮಂಡಳಿ ಸದಸ್ಯ ರವಿ ಕೊಡ್ಲೆಕೆರೆ, ಹೊಸ್ಮನೆಯವರ ಸೋದರ ಸಂಬಂಧಿ ಕಿರಣ ಹೊಸ್ಮನೆ, ಹೊಸ್ಮನೆ ಸಹಪಾಠಿ ನಾರಾಯಣ ಬರವಣಿ ಇದ್ದರು. ಕವಲಕ್ಕಿ ಸಂಸ್ಕೃತ ಕಾಲೇಜ್ ಪ್ರಾಚಾರ್ಯ ಎಸ್.ಜಿ. ಭಟ್ಟ, ಉಪನ್ಯಾಸಕ ಎನ್.ಎಸ್. ಲಮಾಣಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಎನ್. ನಾಯಕ ನಿರ್ವಹಿಸಿದರು. ಡಾ. ಹೊಸ್ಮನೆ ಅವರ ಕುರಿತು ಕಲಾಕಾರ ರವಿ ಗುನಗ ಅವರು ಸಿದ್ಧಪಡಿಸಿದ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts