More

    ಲಾಕ್​ಡೌನ್​ ಹೊರತಾಗಿಯೂ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರ ನಿವ್ವಳ ಮೌಲ್ಯ ಹೆಚ್ಚಾಗಿದೆ, ಅವರು ಯಾರು ಗೊತ್ತಾ?

    ಮುಂಬೈ: ಕೋವಿಡ್​ 19 ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಇದರಿಂದಾಗಿ ಬಹುತೇಕ ಎಲ್ಲ ವಹಿವಾಟುಗಳು ಸ್ತಬ್ಧವಾಗಿವೆ. ಹಾಗಾಗಿ ವಾಣಿಜ್ಯೋದ್ಯಮಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದು, ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ.

    ಆದರೆ, ಇಷ್ಟೆಲ್ಲ ಹಿನ್ನಡೆಯ ಹೊರತಾಗಿಯೂ ಭಾರತದ ಒಬ್ಬ ವಾಣಿಜ್ಯೋದ್ಯಮಿಯ ಲಾಭ ಹಾಗೂ ಅವರು ನಡೆಸುತ್ತಿರುವ ಉದ್ಯಮದ ನಿವ್ವಳ ಮೌಲ್ಯ ಭಾರಿ ವೃದ್ಧಿ ಕಂಡಿದೆ. ಭಾರತದಲ್ಲಿರುವ 12 ಅತಿಶ್ರೀಮಂತರ ಪೈಕಿ ವ್ಯವಹಾರಿಕವಾಗಿ ಹೆಚ್ಚಿನ ವೃದ್ಧಿ ಸಾಧಿಸಿರುವ ಏಕೈಕ ವ್ಯಕ್ತಿ ಇವರಾಗಿದ್ದಾರೆ.

    ಅವರೇ ರಾಧಾಕಿಶನ್​ ದಮಾನಿ. ಇವರು ಅವೆನ್ಯೂ ಸೂಪರ್​ಮಾರ್ಟ್ಸ್​ ಲಿಮಿಟೆಡ್​ನ ಮಾಲೀಕರು. ಈ ಸಂಸ್ಥೆಯ ಹೆಸರು ಹೇಳಿದರೆ ಬಹುತೇಕರಿಗೆ ಗೊತ್ತಾಗುವುದಿಲ್ಲ. ಆದರೆ ಡಿಮಾರ್ಟ್​ ಎಂದ ಕೂಡಲೇ ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ.
    ಲಾಕ್​ಡೌನ್​ ಹೊರತಾಗಿಯೂ ಈ ವರ್ಷದಲ್ಲಿ ದಮಾನಿ ನೇತೃತ್ವದ ಡಿ ಮಾರ್ಟ್​ನ ನಿವ್ವಳ ಮೌಲ್ಯ ಶೇ.5 ಅಂದರೆ 10.2 ಶತಕೋಟಿ ರೂಪಾಯಿಗೆ ವೃದ್ಧಿಯಾಗಿದೆ.

    ಕರೊನಾ ಪಿಡುಗಿನಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಭೀತಿಯಲ್ಲಿ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಇದರಿಂದಾಗಿ ಭಾರತದ ಅತಿಶ್ರೀಮಂತ ಮುಕೇಶ್​ ಅಂಬಾನಿ ಮತ್ತು ಉದಯ್​ ಕೋಟಕ್​ನಂಥವರ ಕಂಪನಿಗಳ ನಿವ್ವಳ ಮೌಲ್ಯ ಶೇ.32 ಕುಸಿದಿದೆ. ಆದರೆ ಅವೆನ್ಯೂ ಸೂಪರ್​ಮಾರ್ಕೆಟ್​ನ ಷೇರುಗಳ ಮೌಲ್ಯ ಮಾತ್ರ ಈ ವರ್ಷ ಶೇ.18 ವೃದ್ಧಿ ಆಗಿದೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಭಾರತದ 1.3 ಶತಕೋಟಿ ಜನರು ಅಗತ್ಯವಸ್ತುಗಳು ಮತ್ತು ಆಹಾರಧಾನ್ಯಗಳ ಖರೀದಿಗೆ ಡಿಮಾರ್ಟ್​ಗೆ ಮುಗಿಬಿದ್ದ ಕಾರಣ ಡಿಮಾರ್ಟ್​ನಲ್ಲಿ ಬಿರುಸಿನ ವಹಿವಾಟು ನಡೆಯುತ್ತಿದೆ. ಇದು ಅವೆನ್ಯೂ ಮಾರ್ಕೆಟ್​ನ ನಿವ್ವಳ ಮೌಲ್ಯ ವೃದ್ಧಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

    ರಾಜ್ಯಗಳಿಗೆ ಕೋವಿಡ್​ ತುರ್ತು ನಿಧಿ ಬಿಡುಗಡೆಗೆ ಕೇಂದ್ರ ನಿರ್ಧಾರ, 5 ವರ್ಷಗಳವರೆಗೆ ಬರಲಿದೆ 15 ಸಾವಿರ ಕೋಟಿ ರೂ. ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts