More

    ಜನಾಂಗೀಯ ದೌರ್ಜನ್ಯ ತಡೆಗಟ್ಟಿ, ರಕ್ಷಣೆ ಒದಗಿಸಲು ಒತ್ತಾಯ

    ಹಟ್ಟಿಚಿನ್ನದಗಣಿ: ಮಣಿಪುರ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ, ರಕ್ಷಣೆ ಒದಗಿಸಲು ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳು ಮುಂದಾಗಬೇಕೆಂದು ಹಟ್ಟಿ ಪಟ್ಟಣದ ಸೇಕ್ರೇಡ್ ಹಾರ್ಟ್ ಚರ್ಚ್ ಫಾದರ್ ಡಾ.ವಿಜಯಕುಮಾರ್ ಆಗ್ರಹಿಸಿದರು.

    ಇದನ್ನೂ ಓದಿ:http://ಜನಾಂಗೀಯ ದೌರ್ಜನ್ಯ ತಡೆಗಟ್ಟಿ, ರಕ್ಷಣೆ ಒದಗಿಸಲು ಒತ್ತಾಯ

    ಹಟ್ಟಿ ಕ್ಯಾಂಪ್ ನಲ್ಲಿ ನಡೆದ ಮೌನಮೆರವಣಿಗೆ ಉದ್ದೇಶಿಸಿ ಶುಕ್ರವಾರ ಮಾತನಾಡಿದರು. ಭಾರತ ಸಂವಿಧಾನದಡಿ ಸಾರ್ವಜನಿಕರಿಗೆ ಬದುಕುವ ಹಕ್ಕಿದ್ದು, ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳ ಕ್ರಮಗಳು ಇರಲಿ.

    ದೌರ್ಜನ್ಯಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದರು. ಹಟ್ಟಿಯ 7ಚರ್ಚ್‌ಗಳ ಸಹಯೋಗದಲ್ಲಿ ಪಟ್ಟಣದ ಪಾಮನಕಲ್ಲೂರು ಕ್ರಾಸಿನಿಂದ, ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದವರೆಗೆ ಮುಖಕ್ಕೆ ಬಿಳಿಬಟ್ಟೆ ಧರಿಸಿ ಮೌನಮೆರವಣಿಗೆ ನಡೆಸಲಾಯಿತು.

    ಬೇಡಿಕೆ ಪತ್ರವನ್ನು ಲಿಂಗಸುಗೂರು ಗ್ರೇಡ್-2 ತಹಸೀಲ್ದಾರ್ ಬಸವರಾಜಸ್ವಾಮಿ ಝಳಕಿಮಠ, ಉಪತಹಸೀಲ್ದಾರ್ ರಂಗಪ್ಪನಾಯಕ್ ದೊರೆ, ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮಲೆಕ್ಕಾಧಿಕಾರಿ ಯೇಸಪ್ಪರ ಮುಖಾಂತರ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts