More

    ಬನಹಟ್ಟಿ ಠಾಣೆ ಪೇದೆಗೆ ಸೋಂಕು

    ರಬಕವಿ/ಬನಹಟ್ಟಿ: ಪೊಲೀಸ್ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದ ಕಾರಣ ಬನಹಟ್ಟಿ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.

    ಕೋವಿಡ್ ತಪಾಸಣೆ ಒಳಗಾಗಿದ್ದರಿಂದ ಸೋಂಕು ಪತ್ತೆಯಾಗಿದೆ. ಪಾಸಿಟಿವ್ ಬಂದ ಬನಹಟ್ಟಿ ಠಾಣೆ ಪೇದೆಯ ಪ್ರಾಥಮಿಕ ಸಂಪರ್ಕ ಹೊಂದಿದ 8 ಜನ ಹಾಗೂ ಸಾರ್ವಜನಿಕರು 3 ಜನ ಸೇರಿ 11 ಜನರನ್ನು ಬನಹಟ್ಟಿಯ ಕಟ್ಟಡ ಒಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

    ರೈತರಲ್ಲಿ ಕರೊನಾ ಭೀತಿ
    ಠಾಣೆ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದಿದ್ದರಿಂದ ಜು. 13 ರಂದು ತಾಲೂಕಿನ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ರೈತರಲ್ಲಿ ಭೀತಿ ಎದುರಾಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಪೇದೆ ಬಂದೋ ಬಸ್ತ್ ಕೈಗೊಂಡಿದ್ದರು. ವರದಿಗೆ ತೆರಳಿದ ಪತ್ರಕರ್ತರಲ್ಲೂ ಕರೊನಾ ಸೋಂಕಿನ ಭಯ ಸೃಷ್ಟಿಯಾಗಿದೆ. ಅವರು ಸಹ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯತೆ ಉಂಟಾಗಿದೆ.

    ಬನಹಟ್ಟಿ ಹಾಗೂ ತೇರದಾಳ ಠಾಣೆ ಸೀಲ್‌ಡೌನ್ ಮಾಡಿದ್ದರಿಂದ ತಾತ್ಕಾಲಿಕವಾಗಿ ಮಹಾಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ಎರಡೂ ಠಾಣೆಗೆ ಸ್ಯಾನಿಟೈಸರ್ ಮಾಡಿದ ನಂತರ ಎಂದಿನಂತೆ ಸಾರ್ವಜನಿಕರ ಸೇವೆಗೆ ಠಾಣೆಗಳು ಲಭ್ಯವಿರುತ್ತವೆ.
    – ಜೆ.ಕರುಣೇಶಗೌಡ, ಬನಹಟ್ಟಿ ಸಿಪಿಐ

    ರೈತ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗುರುತಿಸಿ ಸ್ವಯಂ ತಪಾಸಣೆ ಹಾಗೂ ಕ್ವಾರಂಟೈನ್ ಆಗುವಂತೆ ನಮ್ಮೆಲ್ಲ ರೈತ ಬಾಂಧವರಿಗೆ ತಿಳಿಸುತ್ತೇನೆ.
    – ಹೊನ್ನಪ್ಪ ಬಿರಡಿ ರೈತ ಮುಖಂಡ ರಬಕವಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts