More

    ಎಸ್‌ಬಿಐನಲ್ಲಿ ಕರೊನಾ ಮುಂಜಾಗ್ರತೆ

    ರಬಕವಿ/ಬನಹಟ್ಟಿ: ಕರೊನಾ ಹಾವಳಿ ಹಿನ್ನೆಲೆ ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ಹಣಕಾಸು ವ್ಯವಹಾರಕ್ಕೆ ಬರುವವರೂ ಗುಂಪಾಗಿ ಬ್ಯಾಂಕ್ ಪ್ರವೇಶಿಸದಂತೆ ಕ್ರಮಕೈಗೊಳ್ಳಲಾಯಿತು.

    ಸೋಮವಾರ ಬ್ಯಾಂಕ್ ಆರಂಭಗೊಳ್ಳುತ್ತಿದ್ದಂತೆ ಸಿಬ್ಬಂದಿ ಬ್ಯಾಂಕ್ ಹೊರಗಡೆ ಒಂದು ಅಡಿ ಅಂತರದಲ್ಲಿ ಒಬ್ಬರಿಗೊಬ್ಬರು ತಾಗದಂತೆ ನಿಲ್ಲಿಸಿ, ಬ್ಯಾಂಕ್ ಒಳಗಡೆ ಹೋಗುವಂತೆ ಎಚ್ಚರ ವಹಿಸಿದರು.

    ಬ್ಯಾಂಕ್ ಪ್ರವೇಶಿಸಿದ ವ್ಯಕ್ತಿ ಹೊರ ಬಂದ ಬಳಿಕವೇ ಮತ್ತೊಬ್ಬರಿಗೆ ಪ್ರವೇಶ ನೀಡಲಾಯಿತು. ಪ್ರತಿಯೊಬ್ಬರೂ ನಿಲ್ಲಲು ಬಳಪದಿಂದ ವೃತ್ತಗಳನ್ನು ಬರೆಯಲಾಗಿತ್ತು. ಗ್ರಾಹಕರು ಬ್ಯಾಂಕ್ ಬಾಗಿಲಲ್ಲೇ ಹ್ಯಾಂಡ್ ಸ್ಯಾನಿಟರಿಯಿಂದ ಕೈತೊಳೆದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅತಿ ಅವಶ್ಯಕ ವ್ಯವಹಾರಗಳಾದ ಹಣ ತೆಗೆಯುವುದು, ಎನ್‌ಇಎಫ್‌ಟಿ, ಖಾತೆಗೆ ತುರ್ತಾಗಿ ಹಣ ಜಮಾಮಾಡುವ ಸೇವೆಗಳು ಮಾತ್ರ ಬ್ಯಾಂಕ್‌ನಲ್ಲಿ ದೊರಕುತ್ತಿವೆ. ಹೊಸ ಖಾತೆ, ಕೆವೈಸಿ ಜೋಡಣೆ, ಹೊಸ ಸಾಲ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಗ್ರಾಹಕರು ಹಣ ಜಮಾವಣೆ ಮಾಡುವಾಗ ನೋಟುಗಳನ್ನು ಎಣಿಸುವಾಗ ನಮ್ಮ ಸಿಬ್ಬಂದಿ ಪ್ರತಿ ಗ್ರಾಹಕರ ವ್ಯವಹಾರ ಮುಗಿಯುವವರೆಗೂ ಹ್ಯಾಂಡ್ ವಾಷ್ ಸ್ಯಾನಿಟೈಸರ್ ಬಳಸುತ್ತಾರೆ. ಪ್ರತಿ ಅರ್ಧಗಂಟೆಗೊಂದು ಬಾಟಲ್ ಬಳಸಲಾಗುತ್ತಿದೆ. ನೋಟುಗಳ ಮೂಲಕ ಕರೊನಾ ಹರಡುವ ಸಾಧ್ಯತೆ ಇರುವುದರಿಂದ ನಾವು ಮುಂಜಾಗ್ರತೆ ಕ್ರಮಗಳನ್ನು ಪಾಲಿಸುತ್ತಿದ್ದೇವೆ. ಗ್ರಾಹಕರು ಕೂಡ ಸ್ವಚ್ಛತೆಗೆ ಆದ್ಯತೆ ನೀಡಬೇಕು.
    ಧೀರಜ್‌ಕುಮಾರ್ ಎಸ್‌ಬಿಐ ವ್ಯವಸ್ಥಾಪಕ, ಬನಹಟ್ಟಿ

    ಬ್ಯಾಂಕ್‌ನಲ್ಲೂ ಈ ರೀತಿ ಕರೊನಾ ಕುರಿತು ಜಾಗೃತಿ ಕ್ರಮ ನಡೆಸಲಾಗುತ್ತಿರುವುದು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಎಲ್ಲರೂ ಸರ್ಕಾರ ಕೈಗೊಂಡ ಕ್ರಮಗಳನ್ನು ಚಾಚುತಪ್ಪದೆ ಪಾಲಿಸಬೇಕು.
    ಎಸ್.ಬಿ. ಜವಳಗಿ ಬ್ಯಾಂಕ್ ಗ್ರಾಹಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts