More

    16 ಪತ್ನಿಯರಿಗೆ ಒಬ್ಬನೇ ಗಂಡ: ಸಂಭೋಗಕ್ಕೂ ವೇಳಾಪಟ್ಟಿ ಫಿಕ್ಸ್​ ಮಾಡಿರುವ ಈ ಭೂಪನ ಆಸೆಯೇ ವಿಚಿತ್ರ!

    ಹರಾರೆ: ಹದಿನಾರು ಪತ್ನಿಯರು ಮತ್ತು 151 ಮಕ್ಕಳನ್ನು ಹೊಂದಿರುವ ಜಿಂಬಾಬ್ವೆ ಮೂಲದ 66 ವರ್ಷದ ವ್ಯಕ್ತಿಯೊಬ್ಬ ತನ್ನ ಸಾಂಸಾರಿಕ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದು, ತನ್ನ ಕುಟುಂಬ ಬೆಳೆಯಲು ನೆರವಾಗಲು ಒಂದು ರಾತ್ರಿಯಲ್ಲಿ ನಾಲ್ಕು ಬಾರಿಯ ಲೈಂಗಿಕ ವೇಳಾಪಟ್ಟಿಯನ್ನು ಅನುಸರಿಸುತ್ತಿರುವುದಾಗಿ ಮುಕ್ತವಾಗಿ ಹೇಳಿಕೊಂಡಿದ್ದಾನೆ.

    ಮಿಶೆಕ್ ನ್ಯಾಂಡೊರೊ (66) ಎಂಬಾತನೇ ಬೃಹತ್​ ಕುಟುಂಬದ ಯಜಮಾನ. ಅಚ್ಚರಿಯೆಂದರೇ ಈತನಿಗೆ ಯಾವುದೇ ಕೆಲಸ ಇಲ್ಲವಂತೆ. ಪತ್ನಿಯರನ್ನು ಸಂತೃಪ್ತಗೊಳಿಸುವುದೇ​ ಈತನ ಫುಲ್​ ಟೈಮ್​ ಜಾಬ್​ ಅಂತೆ. ಹೀಗಂತ ಆತನೇ ಹೇಳಿಕೊಂಡಿದ್ದಾನೆ. ಪತ್ನಿಯರೇ ಆತನ ಆರೈಕೆ ಮಾಡುತ್ತಿದ್ದಾರೆಂದು ವಿವರಿಸಿದ್ದಾನೆ.

    ಇನ್ನು ಮಕ್ಕಳ ಸಂಖ್ಯೆಗೆ ಕಡಿವಾಣ ಹಾಕಬೇಕೆಂಬ ಆಲೋಚನೆಯನ್ನು ಸಹ ಮಿಶೆಕ್ ಮಾಡಿಲ್ಲ. ಬದಲಾಗಿ 17ನೇ ಮದುವೆಗೆ ತಯಾರಿ ಮಾಡಿಕೊಂಡಿದ್ದು, ಸಾಯುವ ಮುನ್ನ 100 ಪತ್ನಿಯರು ಮತ್ತು 1000 ಮಕ್ಕಳನ್ನು ಹೊಂದುವುದೇ ಹೆಬ್ಬಯಕೆಯಂತೆ.

    ಯುವ ವಯಸ್ಸಿನ ಹೆಣ್ಣು ಮಕ್ಕಳನ್ನೇ ಮದುವೆ ಆಗುವ ಮಿಶೆಕ್ ವಯಸ್ಸಾದವರನ್ನು ಮದುವೆಯಾದರೆ, ಲೈಂಗಿಕ ತೃಪ್ತಿ ನೀಡುವುದಿಲ್ಲ ಎಂಬ ದೂರನ್ನು ಹೊಂದಿದ್ದಾನೆ. ತಾನು ಐಷಾರಾಮಿ ಜೀವನವನ್ನು ನಡೆಸುತ್ತಿರುವುದಾಗಿ ಹೇಳಿಕೊಳ್ಳುವ ಮಿಶೆಕ್​, ಅವರ ಅನೇಕ ಸಂತತಿಯಿಂದ ಉಡುಗೊರೆಗಳು ಮತ್ತು ಹಣದ ಮಳೆಯೇ ಬೀಳುತ್ತಿದೆ ಎಂದು ತಿಳಿಸಿದ್ದಾರೆ.

    ಮಶೋನಾಲ್ಯಾಂಡ್ ಮಧ್ಯ ಪ್ರಾಂತ್ಯದ ಎಂಬೈರ್ ಜಿಲ್ಲೆಯ ನ್ಯಾಂಡೊರೊ ಮೂಲದ ಮಿಶೆಕ್​, ವೇಳಾಪಟ್ಟಿಯನ್ನು ವಿನ್ಯಾಸಗೊಳಿಸಿದ್ದು, ಅದರಂತೆ ಪ್ರತಿ ರಾತ್ರಿಗೆ ಕನಿಷ್ಠ ನಾಲ್ಕು ಹೆಂಡತಿಯರನ್ನು ತೃಪ್ತಿಪಡಿಸುತ್ತಾರಂತೆ.

    ಈ ಬಗ್ಗೆ ಸ್ಥಳೀಯ ಮಾಧ್ಯಮದ ಜತೆ ಮಾತನಾಡಿರುವ ಮಿಶಕ್​, ವೇಳಾಪಟ್ಟಿಯಂತೆ ನಾನು ಬೆಡ್​ರೂಮ್​ಗೆ ತೆರಳುತ್ತೇನೆ. ಒಂದು ಕೋನೆಯಲ್ಲಿ ಓರ್ವ ಪತ್ನಿಯನ್ನು ತೃಪ್ತಿಗೊಳಿಸಿದ ಬಳಿಕ ಮತ್ತೊಂದು ಕೋಣೆಗೆ ತೆರಳುತ್ತೇನೆ. ಇದೇ ನನ್ನ ಕೆಲಸವಾಗಿದೆ. ಇದು ಬಿಟ್ಟು ನನಗೆ ಬೇರೆ ಕೆಲಸ ಇಲ್ಲವೆಂದು ಹೇಳಿಕೊಂಡಿದ್ದಾನೆ.

    ಬೆಡ್​ರೂಮ್​ಗೆ ಹೋದ ಬಳಿಕ ತನ್ನ ಪತ್ನಿಯರ ವಯಸ್ಸಿಗೆ ಸರಿಹೊಂದುವ ವರ್ತನೆಯನ್ನು ನಾನು ಬದಲಾಯಿಸಿಕೊಳ್ಳುತ್ತೇನೆ. ವಯಸ್ಸಾದವರ ಜತೆಗೆ ವರ್ತಿಸುವಂತೆ ಯುವ ಪತ್ನಿಯರೊಂದಿಗೆ ನಡೆದುಕೊಳ್ಳುವುದಿಲ್ಲ ಎಂದಿದ್ದಾನೆ.

    1983ರಲ್ಲಿ ಬಹುಪತ್ನಿವಾದಿಯಾದ ಮಿಶೆಕ್​, ಸಾಯುವವರೆಗೂ ಈ ಯೋಜನೆಯನ್ನು [ಸಂತಾನೋತ್ಪತ್ತಿ] ನಿಲ್ಲಿಸಲು ಯೋಚಿಸುವುದೇ ಇಲ್ಲವಂತೆ. ನನ್ನ ಪತ್ನಿಯರೆಲ್ಲರೂ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಸದ್ಯ ಈಗಲೂ ಇಬ್ಬರ ಗರ್ಭಿಣಿಯರಿದ್ದಾರೆ ಎಂದಿದ್ದಾನೆ.

    ಇನ್ನು ಇಷ್ಟು ದೊಡ್ಡ ಕುಟುಂಬ ಅಂದ ಮೇಲೆ ಹಣದ ಹೊಂದಾಣಿಕೆ ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದಕ್ಕೆ ಉತ್ತರ ನೀಡಿರುವ ಮಿಶೆಕ್​, 150 ಮಕ್ಕಳನ್ನು ಹೊಂದಿರುವುದು ನನಗೆ ಭಾರವೇ ಅಲ್ಲ. ಬೃಹತ್​ ಕುಟುಂಬದಿಂದ ನಷ್ಟಕ್ಕಿಂತ ಲಾಭವೇ ಹೆಚ್ಚೆಂದಿದ್ದಾನೆ. ನಾನು ನನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಉಡುಗೊರೆಗಳನ್ನು ಮತ್ತು ಹಣವನ್ನು ನಿರಂತರವಾಗಿ ಸ್ವೀಕರಿಸುತ್ತಿದ್ದೇನೆ. ಕುಟುಂಬವು ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿದೆ ಎಂದು ತಿಳಿಸಿದ್ದಾರೆ.

    ಮಿಶೆಕ್ ಮಕ್ಕಳು ಜಿಂಬಾಬ್ವೆ ರಾಷ್ಟ್ರೀಯ ಸೇನೆ, ಪೊಲೀಸ್​ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 13 ಹೆಣ್ಣುಮಕ್ಕಳು ಈಗಾಗಲೇ ಮದುವೆ ಆಗಿದ್ದಾರೆ. ಆತನ 23 ಮಕ್ಕಳು ಸಹ ಮದುವೆ ಆಗಿದ್ದಾರೆ. ಅದರಲ್ಲಿ ಒಬ್ಬರ ತನ್ನ ತಂದೆಯ ಹಾದಿಯನ್ನೇ ತುಳಿದಿದ್ದು, ಈಗಲೇ ನಾಲ್ವರು ಪತ್ನಿಯನ್ನು ಹೊಂದಿದ್ದಾನೆ.

    ತಾನು ಒತ್ತಡವಿಲ್ಲದ ಜೀವನ ನಡೆಸುತ್ತಿರುವುದಾಗಿ ಮಿಶೇಕ್​ ಹೇಳಿಕೊಂಡಿದ್ದಾರೆ. ಎಲ್ಲಿಗೂ ಹೋಗುವುದಿಲ್ಲ. ಯಾವ ಕೆಲಸವನ್ನು ಮಾಡುವುದಿಲ್ಲ. ಪತ್ನಿಯರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ಎಲ್ಲರೂ ತಮಗೆ ಇಷ್ಟವಾದ ಆಹಾರ ಮಾಡಿ ಕಳುಹಿಸುತ್ತಾರೆ. ಆದರೆ ನನಗರ ಯಾವುದು ಇಷ್ಟವೋ ಅದನ್ನು ಮಾತ್ರ ಸ್ವೀಕರಿಸುತ್ತೇನೆ. ಕೆಲವರ ಊಟವನ್ನು ವಾಪಸ್ಸು ಕಳುಹಿಸಿದರೆ ಕೋಪಿಸಿಕೊಳ್ಳಬಾರದಂತೆ ಹೇಳಿದ್ದೇನೆ. 2015ರಲ್ಲಿ ಮಿಶೆಕ್​ ಕೊನೆಯದಾಗಿ ಮದುವೆ ಆಗಿದ್ದಾರೆ. ಇದೀಗ ಮತ್ತೊಂದು ಮದುವೆ ತಯಾರಿಯಲ್ಲಿದ್ದಾರೆ. ಸಾಯುವವರೆಗೂ ಇದನ್ನು ಮುಂದುವರಿಸುತ್ತೇನೆ ಎನ್ನುತ್ತಾರೆ ಮಿಶೆಕ್​. (ಏಜೆನ್ಸೀಸ್​)

    ಕೋವಿಡ್​ಗೆ ಗರ್ಭಿಣಿ ಪತ್ನಿ ಬಲಿ: ಸಾವಿಗೂ ಮುನ್ನ ಜನರಲ್ಲಿ ಮನವಿ ಮಾಡಿದ ಪತ್ನಿಯ ವಿಡಿಯೋ ಹಂಚಿಕೊಂಡ ಪತಿ!

    ಇನ್ನು ಹತ್ತೇ ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ದುರಂತ ಸಾವು..!

    ಕರೊನಾಗೆ ತಾಯಿ ಬಲಿಯಾದಳು ಎಂಬ ಸುದ್ದಿ ಕೇಳಿ ಮನೆಯಲ್ಲಿಯೇ ಪ್ರಾಣ ಬಿಟ್ಟ ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts