More

    ಮಗನ ಸರ್ಪ್ರೈಸ್​ ಗಿಫ್ಟ್ ನೋಡಿ ತಾಯಿ ಪ್ರತಿಕ್ರಿಯಿಸಿದ ರೀತಿಗೆ ಬೆಲೆ ಕಟ್ಟಲಾಗದು​..!

    ಚೆನ್ನೈ: ಮಕ್ಕಳ ಭವಿಷ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಪಾಲಕರು ಕಣ್ಣಿಗೆ ಕಾಣುವ ದೇವರೆಂದರೆ ತಪ್ಪಾಗಲಾರದು. ತಮ್ಮಿಷ್ಟಗಳನ್ನು ಮುಚ್ಚಿಟ್ಟು ಮಕ್ಕಳ ಬಯಕೆಗಳನ್ನು ಈಡೇರಿಸುತ್ತಾ ಅದರಲ್ಲೇ ತಮ್ಮ ಖುಷಿ ಕಾಣುತ್ತಾರೆ. ಹೀಗಿರುವಾಗ ಮಕ್ಕಳೇ ಪಾಲಕರಿಗೆ ಸರ್ಪ್ರೈಸ್​ ಗಿಫ್ಟ್​ ನೀಡಿದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಗೊತ್ತಾ? ಆ ಕ್ಷಣಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.

    ತಮಿಳುನಟ ಮಾಧವನ್​ ಅವರು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಬೆಲೆಕಟ್ಟಲಾಗದ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಜನವರಿ 5 ರಂದು ವಿಘ್ನೇಶ್​ ಸಮ್ಮು ಎಂಬಾತ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ಅದನ್ನು ಮಾಧವನ್​ ಶೇರ್​ ಮಾಡಿದ್ದಾರೆ. 4 ಲಕ್ಷಕ್ಕೂ ಅಧಿಕ ವೀಕ್ಷಣೆ ಗಿಟ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಮೂಲಕ ಮೆಚ್ಚುಗೆ ಮಹಾಪೂರ ಗಳಿಸಿದೆ.

    ವಿಡಿಯೋದಲ್ಲಿ ಏನಿದೆ?
    ಮಗ ಕೊಂಡುತಂದಿದ್ದ ಬ್ಯಾಗ್​ ಒಂದರಲ್ಲಿದ್ದ ಬಾಕ್ಸ್​ ಅನ್ನು ಓಪನ್​ ಮಾಡುತ್ತಾಳೆ. ಆ ಬಾಕ್ಸ್​ನಲ್ಲಿರುವುದು 8800 ರೂ. ಬೆಲೆ ಬಾಳುವ ರೆಡ್​ಮಿ ಮೊಬೈಲ್​ ಫೋನ್​ ಎಂದು ತಿಳಿದತಕ್ಷಣ ಮಗನ ಕಡೆ ಧನ್ಯತಾ ಭಾವದಿಂದ, ನಗು ವ್ಯಕ್ತಪಡಿಸಿರುವ ವಿಡಿಯೋ ನಿಜಕ್ಕೂ ಬೆಲೆಕಟ್ಟಲಾಗದು. ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಮಾಧವನ್​, ಸಂತೋಷಕ್ಕೆ ಯಾವುದೇ ಬೆಲೆ ಇಲ್ಲ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts