More

    ದೆಹಲಿಯ ರೈಲು ನಿಲ್ದಾಣದ ಫ್ಲಾಟ್​ಫಾರ್ಮ್​ನಲ್ಲಿ ಮಹಿಳೆ ಮೇಲೆ ಗ್ಯಾಂಗ್​ರೇಪ್​: ನಾಲ್ವರು ರೈಲ್ವೆ ಸಿಬ್ಬಂದಿ ಅರೆಸ್ಟ್​

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪೈಶಾಚಿಕ ಕೃತ್ಯವೊಂದು ವರದಿಯಾಗಿದೆ. ಹೊಸ ರೈಲು ನಿಲ್ದಾಣದ ರೈಲ್ವೆ ಫ್ಲಾಟ್​ಫಾರ್ಮ್​ನಲ್ಲಿ 30 ವರ್ಷದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಸಂಬಂಧ ನಾಲ್ವರು ರೈಲ್ವೆ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಸತೀಶ್​ ಕುಮಾರ್​ (35), ವಿನೋದ್​ ಕುಮಾರ್​ (38), ಮಂಗಲ್​ ಚಾಂದ್​ (33) ಹಾಗೂ ಜಗದೀಶ್​ ಚಾಂದ್​ (37) ಎಂದು ಗುರುತಿಸಲಾಗಿದೆ. ನಾಲ್ವರು ಆರೋಪಿಗಳು ಕೂಡ ರೈಲ್ವೆ ಎಲೆಕ್ಟ್ರಿಕಲ್​ ವಿಭಾಗದ ಉದ್ಯೋಗಿಗಳು. ಗುರುವಾರ ತಡರಾತ್ರಿ ಪ್ಲಾಟ್‌ಫಾರ್ಮ್‌ನಲ್ಲಿರುವ ರೈಲು ದೀಪದ ಗುಡಿಸಲಿನೊಳಗೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಆರೋಪಿಗಳು ಹೊರಗಡೆ ನಿಂತು ಕಾವಲು ಕಾದರೆ, ಇನ್ನುಳಿದ ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತ ಮಹಿಳೆ ಬೆಳಗಿನ ಜಾವ 3.27ಕ್ಕೆ ಠಾಣೆಗೆ ಕರೆ ಮಾಡಿ, ಘಟನೆಯ ಬಗ್ಗೆ ಮಾಹಿತಿ ನೀಡಿದಳು. ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ರೈಲ್ವೆ ಡಿಸಿಪಿ ಹರೇಂದ್ರ ಸಿಂಗ್​ ಮಾಹಿತಿ ನೀಡಿದ್ದಾರೆ.

    ಸಂತ್ರಸ್ತೆಯು ಹರಿಯಾಣದ ಫರಿದಾಬಾದ್​ನಲ್ಲಿ ವಾಸವಿದ್ದಾರೆ. ಎರಡು ವರ್ಷಗಳ ಹಿಂದೆ ಗಂಡನಿಂದ ಪ್ರತ್ಯೇಕವಾಗಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತೆಗೆ ಸ್ನೇಹಿತರೊಬ್ಬರಿಂದ ಆರೋಪಿಗಳಲ್ಲಿ ಒಬ್ಬನಾಗಿರುವ ಸತೀಶ್​ ಪರಿಚಯವಾಗಿತ್ತು. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆತ ಭರವಸೆ ನೀಡಿದ್ದ ಎಂದು ಸಂತ್ರಸ್ತೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

    ಸಂತ್ರಸ್ತ ಮಹಿಳೆಗೆ ಕರೆ ಮಾಡಿದ ಸತೀಶ್​, ಗುರುವಾರ ನಮ್ಮ ಹೊಸ ಮನೆಯಲ್ಲಿ ಮಗನ ಬರ್ತಡೇ ಪಾರ್ಟಿ ಇದೆ ಎಂದು ಆಹ್ವಾನಿಸಿದ್ದಾನೆ. ಅಂದು ರಾತ್ರಿ 10.30ಕ್ಕೆ ಸಂತ್ರಸ್ತೆ ಕೀರ್ತಿ ನಗರ್​ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಿದ್ದಾಳೆ. ಬಳಿಕ ಆಕೆಯನ್ನು ಅಲ್ಲಿಂದ ದೆಹಲಿಯ ರೈಲು ನಿಲ್ದಾಣವೊಂದಕ್ಕೆ ಕರೆದೊಯ್ದು ಇನ್ನುಳಿದ ಆರೋಪಿಗಳಿಗೆ ಪರಿಚಯ ಮಾಡಿದ್ದಾನೆ. ಇದಾದ ಬಳಿಕ ರೈಲು ದೀಪದ ಗುಡಿಸಲಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ದೂರಿದ್ದಾರೆ.

    ಘಟನೆ ನಡೆದ ಎರಡೇ ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    PHOTO! ಹಾಟ್​​​ ಅವತಾರದಲ್ಲಿ ದೀಕ್ಷಾ ಸೇಠ್​: ಬಿಕಿನಿ ಫೋಟೋ ಹರಿಬಿಟ್ಟ ಜಗ್ಗುದಾದನ ಬೆಡಗಿ

    ಆಪ್ತೆಯ ಮನೆಯಲ್ಲಿ 20 ಕೋಟಿ ನಗದು ಪತ್ತೆ: ಇಡಿ ಅಧಿಕಾರಿಗಳಿಂದ ಬಂಗಾಳ ಸಚಿವನ ಬಂಧನ

    ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts