More

    ಲಿಫ್ಟ್​ ಒಳಗೆ ಕಾಲಿಡ್ತಿದ್ದಂತೆ ನಡೆಯಿತು ಘೋರ ದುರಂತ: ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಾಕೆ ದುರ್ಮರಣ

    ಹೈದರಾಬಾದ್​: ಲಿಫ್ಟ್​ ಅಂದುಕೊಂಡು ಒಳಗಡೆ ಕಾಲಿಟ್ಟ ಮಹಿಳೆಯೊಬ್ಬರು ಲಿಫ್ಟ್​ ಹಳ್ಳಕ್ಕೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

    ಮೃತ ಮಹಿಳೆಯನ್ನು ಪ್ರಮಿಳಾ ಎಂದು ಗುರುತಿಸಲಾಗಿದೆ. ಈಕೆ ಖಮ್ಮಮ್​ ಜಿಲ್ಲೆಯ ವೈರಾ ಮಂಡಲದ ಗೊಲ್ಲೆನಪಹದ್​ ಗ್ರಾಮದ ನಿವಾಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಯೊಬ್ಬರ ಆರೋಗ್ಯ ವಿಚಾರಿಸಲು ಆಗಮಿಸಿದ್ದರು. ಆರೋಗ್ಯ ವಿಚಾರಿಸಿ ಮರಳುವಾಗ ಲಿಫ್ಟ್​ ಫ್ಲೋರ್​ನಲ್ಲಿ ಬಟನ್​ ಒತ್ತಿ ಲಿಫ್ಟ್​ಗಾಗಿ ಕಾಯುತ್ತಾ ನಿಂತಿದ್ದರು. ಲಿಫ್ಟ್​ ಆಗಮನದ ಬಗ್ಗೆ ಸರಿಯಾಗಿ ಖಚಿತಪಡಿಸಿಕೊಳ್ಳದ ಪ್ರಮಿಳಾ, ಲಿಫ್ಟ್​ ಬಂತೆಂದು ಭಾವಿಸಿ, ಬಾಗಿಲು ತೆಗೆದು​ ಒಳಗೆ ಕಾಲಿಡುತ್ತಿದ್ದಂತೆ ಲಿಫ್ಟ್​ ಹಳ್ಳಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಅದೇ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ನೀಡಿದಾದರೂ, ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

    ಫೋನ್​ ಕಾಲ್​ ಎಡವಟ್ಟು
    ಲಿಫ್ಟ್​ಗಾಗಿ ಪ್ರಮಿಳಾ ಅವರು ಕಾಯುತ್ತಾ ನಿಂತಿದ್ದಾಗ ಬಂದ ಫೋನ್​ ಕರೆಯೇ ಅವರಿಗೆ ಮುಳುವಾಗಿದೆ. ಫೋನ್​ನಲ್ಲಿ ಮಾತನಾಡುತ್ತಾಲೇ ಲಿಫ್ಟ್​ ಬಾಗಿಲನ್ನು ತೆರೆದಿದ್ದಾರೆ. ಮೊದಲೇ ಮಾತನಾಡುವುದರಲ್ಲಿ ಬಿಜಿಯಾಗಿದ್ದ ಪ್ರಮಿಳಾ, ಲಿಫ್ಟ್​ ಆಗಮನದ ಬಗ್ಗೆ ಖಚಿತಪಡಿಸಿಕೊಳ್ಳಲು ಹೋಗದೇ ಒಳಗೆ ಕಾಲಿಟ್ಟಿದ್ದಾರೆ. ಕ್ಷಣ ಮಾತ್ರದಲ್ಲೇ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿದ್ದ ಮಹಿಳೆಯರು ರಕ್ಷಣೆಗೆ ಧಾವಿಸಿದರೂ, ಅದು ಸಾಧ್ಯವಾಗಲಿಲ್ಲ. ಇಡೀ ಘಟನೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಘಟನೆ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಆಸ್ಪತ್ರೆಯಲ್ಲಿದ್ದ ಪ್ರಮಿಳಾ ಸಂಬಂಧಿಕರಿಗೆ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಲಿಫ್ಟ್ ಸಾಮಾನ್ಯವಾಗಿ ಸಂಪೂರ್ಣ ಲೋಡ್ ಆಗುವವರೆಗೆ ಲಿಫ್ಟ್ ಬಾಗಿಲು ತೆರೆಯುವುದಿಲ್ಲ. ಆದರೆ, ಲಿಫ್ಟ್ ಬಾಗಿಲು ತೆರೆದಾಗ ಪ್ರಮೀಳಾ ಲಿಫ್ಟ್ ಬಂದಿದೆ ಎಂದು ಭಾವಿಸಿ ಒಳಗೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪ್ರಮಿಳಾ ಕುಟುಂಬ ದೂರಿದೆ. ಇಂತಹ ಅಪಾಯಕಾರಿ ಘಟನೆಗಳು ನಡೆಯದಂತೆ ಖಾಸಗಿ ಆಸ್ಪತ್ರೆಗಳ ಲಿಫ್ಟ್‌ಗಳಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    PHOTOS| ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ಹಾಟ್​ ಲುಕ್​ಗೆ ಫ್ಯಾನ್ಸ್​ ಫಿದಾ: ಫೋಟೋಗಳು ವೈರಲ್​

    ರಾಜ್ಯದ ವಿವಿಧ ಕೋರ್ಟ್​ನಲ್ಲಿ ಜಿಲ್ಲಾ ನ್ಯಾಯಾಧೀಶರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

    ದೇಶದ ಹಲವಡೆ ಪಿಎಫ್​ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಾಳಿ: 100ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts