More

    ಇಡಿಯಿಂದ ರಾಹುಲ್​ ಗಾಂಧಿ ಬಂಧನವಾಗುತ್ತಾ? ಛತ್ತೀಸ್​ಗಢ ಮುಖ್ಯಮಂತ್ರಿ ಕೊಟ್ಟ ಸ್ಫೋಟಕ ಉತ್ತರ ಹೀಗಿದೆ…

    ನವದೆಹಲಿ: ನ್ಯಾಷನಲ್​​ ಹೆರಾಲ್ಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಕಳೆದ ಎರಡು ದಿನಗಳಿಂದ ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದೆ. ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್​ ನೀಡಿದೆ. ಇನ್ನೊಂದೆಡೆ ಇಡಿ ನಡೆಯನ್ನು ವಿರೋಧಿಸಿ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲಿಯವರೆಗೆ ಇಡಿ ರಾಹುಲ್​ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತದೆಯೋ ಅಲ್ಲಿಯವರೆಗೂ ಕಾಂಗ್ರೆಸ್​ ಪ್ರತಿಭಟನೆ ಮುಂದುವರಿಯುತ್ತದೆ. ಪ್ರತಿಭಟನೆ ಇಡೀ ದೇಶಾದ್ಯಂತ ಹರಡಿ ಉಲ್ಬಣಗೊಳ್ಳಬಹುದು ಎಂದು ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಇಡಿಯಿಂದ ರಾಹುಲ್​ ಗಾಂಧಿ ಬಂಧನವಾಗುವ ಸಾಧ್ಯತೆ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಬಾಘೇಲ್​, ಯಾವುದೇ ಪ್ರಕರಣವಿಲ್ಲದೆಯೂ ರಾಹುಲ್​ ಅವರನ್ನು ಇಡಿ ಬಂಧಿಸಬಹುದು. ಆದರೆ, ರಾಹುಲ್​ ಅವರನ್ನು ಬಂಧಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಇಡಿ ಬಳಿ ಅವರ​ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಬದಲಾಗಿ ರಾಹುಲ್​ ಅವರ ಗೌರವವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರಷ್ಟೇ ಎಂದು ಹೇಳುವ ಮೂಲಕ ಇಡಿ ನಡೆಯನ್ನು ಟೀಕಿಸಿದರು.

    ರಾಹುಲ್​ಗೆ ಕಿರುಕುಳ ನೀಡಲು ಮತ್ತು ಕಾಂಗ್ರೆಸ್ ಮೇಲೆ ಕಳಂಕ ಹೊರಿಸಿ, ಕೆಟ್ಟದಾಗಿ ಟೀಕಿಸುವಂತೆ ಮಾಡಲು ಈ ತಂತ್ರವನ್ನು ಅನುಸರಿಸಿದ್ದಾರೆ. ರಾಹುಲ್​ ಅವರು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ನೀವು ನೋಡಿದ್ದೀರಿ. ರಾಹುಲ್​ ಅವರ ಪ್ರತಿಯೊಂದು ಪ್ರಶ್ನೆಗಳಿಗೂ ಕೇಂದ್ರ ಸರ್ಕಾರದ ಬಳಿ ಉತ್ತರವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಇಡಿಯನ್ನು ಬಳಸಿಕೊಂಡು ರಾಹುಲ್​ ಅವರನ್ನು ನಿಯಂತ್ರಿಸುತ್ತಿದ್ದಾರೆ. ಆದರೆ, ನೀವು ಏನೇ ಮಾಡಿದರು ಕಾಂಗ್ರೆಸ್​ ಆಗಲಿ ಅಥವಾ ರಾಹುಲ್​ ಅವರನ್ನಾಗಲಿ ಮಟ್ಟಹಾಕಲು ಸಾಧ್ಯವಾಗುವುದಿಲ್ಲ ಎಂದರು.

    ಕಾಂಗ್ರೆಸ್​ ಪ್ರತಿಭಟನೆಯ ಮೇಲೆ ದೆಹಲಿ ಪೊಲೀಸರ ದಬ್ಬಾಳಿಕೆ ಬಗ್ಗೆ ಮಾತನಾಡಿದ ಬಾಘೇಲ್, ಇಂದಿಗೂ ನಾಯಕರನ್ನು ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಹಿಳಾ ಸಂಸದೆಯೊಬ್ಬರನ್ನು ಎಳೆದೊಯ್ದರು. ಹಿರಿಯ ನಾಯಕರೊಬ್ಬರ ಮೇಲೆ ದೌರ್ಜನ್ಯ ನಡೆದಿದೆ. ಪಕ್ಷದ ಅನೇಕ ನಾಯಕರ ಮೇಲೆ ಕೈ ಮಾಡಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ಕೆಲವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿದರು.

    ನ್ಯಾಷನಲ್ ಹೆರಾಲ್ಡ್ ಪತ್ರಿಕೆ- ಅಸೋಸಿಯೇಷನ್ ಜರ್ನಲ್ಸ್​ಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಎರಡು ದಿನದ ವಿಚಾರಣೆ ಮುಗಿದಿದ್ದು, ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್​ ನೀಡಿದೆ. ದೆಹಲಿಯಲ್ಲಿರುವ ಇ.ಡಿ. ಹೆಡ್ ಕ್ವಾರ್ಟರ್ಸ್‌ನಲ್ಲಿ ರಾಹುಲ್ ಗಾಂಧಿಯ ವಿಚಾರಣೆ ನಡೆಸಲಾಗುತ್ತಿದೆ. ಜೂ.19ರಂದು ರಾಹುಲ್ ಗಾಂಧಿಯ 52ನೇ ಜನ್ಮದಿನಾಚರಣೆ ಇರಲಿದ್ದು, ಹುಟ್ಟಿದ ಹಬ್ಬದ ಸಂಭ್ರಮವನ್ನೂ ಇ.ಡಿ. ಮಸಕು ಮಾಡುವುದೇ ಎಂಬ ಆತಂಕ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡತೊಡಗಿದೆ. ಅಲ್ಲದೆ, ಕಾಂಗ್ರೆಸ್​ ಪ್ರತಿಭಟನೆಯು ಮುಂದುವರಿದಿದೆ. (ಏಜೆನ್ಸೀಸ್​)

    ಮೋದಿ, ನಡ್ಡಾ ಮಠ-ಮಾನ್ಯಗಳಿಗೆ ಭೇಟಿ ಕಾರ್ಯಯೋಜನೆ; ಚುನಾವಣೆಗೆ ವರ್ಷವಿರುವಾಗಲೇ ಬಿಜೆಪಿ ಪರ ಅಲೆ ಸೃಷ್ಟಿ ಕಾರ್ಯತಂತ್ರ..

    ಉದ್ಯೋಗ ಪರ್ವಕ್ಕೆ ಅಗ್ನಿಪಥ

    ನದಿ ಜೋಡಣೆಯಿಂದ ಮಾನ್ಸೂನ್​ಗೆ ಧಕ್ಕೆ; ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts