More

    ರಾಹುಲ್​ ಡ್ರಾವಿಡ್​ ಕೋಪಕ್ಕೆ ಧೋನಿ ಹೆದರಿದ್ದರು! ಹಳೆಯ ಘಟನೆ ಮೆಲುಕು ಹಾಕಿದ ಸೆಹ್ವಾಗ್​

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ ರಾಹುಲ್​ ಡ್ರಾವಿಡ್​ ಕೋಪ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ಆದರೆ, ಒಮ್ಮೆ ಮಹೇಂದ್ರ ಸಿಂಗ್​ ಧೋನಿ ಮೇಲೆ ಅತಿಯಾದ ಕೋಪ ಹೊರಹಾಕಿದ್ದರಂತೆ. ಈ ಘಟನೆಯನ್ನು ಟೀಮ್​ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಇದೀಗ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ.

    ರಾಹುಲ್​ ಡ್ರಾವಿಡ್​ ಕಾಣಿಸಿಕೊಂಡಿರುವ ಜಾಹಿರಾತು ಒಂದರಲ್ಲಿ ಅವರು ತುಂಬಾ ಕೋಪಿಷ್ಠರಂತೆ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ನಾನು ಇಂದಿರಾ ನಗರದ ಗೂಂಡಾ ಎಂಬ ಡೈಲಾಗ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಡ್ರಾವಿಡ್​ ಅವರು ಜಾಹಿರಾತಿನಲ್ಲಿ ಕಾಣಿಸಿಕೊಂಡ ರೀತಿಯನ್ನು ನೋಡಿ ಸೆಲಿಬ್ರೆಟಿಗಳು ಸೇರಿದಂತೆ ಎಷ್ಟೋ ಮಂದಿ ಹುಬ್ಬೇರಿಸಿದ್ದಾರೆ. ಏಕೆಂದರೆ, ಎಂದೂ ಕೂಡ ಡ್ರಾವಿಡ್​ ಅವರನ್ನು ಈ ರೀತಿ ಯಾರು ನೋಡಿರಲಿಲ್ಲ.

    ಇದನ್ನೂ ಓದಿರಿ: ಹಾಸನದಲ್ಲಿ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಜೆಡಿಎಸ್ ಬೆಂಬಲಿಗರಿಂದ ಕಲ್ಲು ತೂರಾಟ..!

    ಆದರೆ, ಡ್ರಾವಿಡ್​ ಒಮ್ಮೆ ಕೋಪಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ ಎಂದು ಸೆಹ್ವಾಗ್​ ಹೇಳಿದ್ದಾರೆ. ಇದಕ್ಕೆ 2006ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೇ ಸಾಕ್ಷಿ ಎಂದಿದ್ದಾರೆ. ಈ ವೇಳೆ ಧೋನಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದರು. ನಾವು ಪಾಕ್​ ಪ್ರವಾಸದಲ್ಲಿದ್ದೆವು. ಡ್ರಾವಿಡ್​ ತಂಡದ ನಾಯಕರಾಗಿದ್ದರು. ಧೋನಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್​ ನೀಡಿ ಔಟಾಗಿದ್ದಕ್ಕೆ ಡ್ರಾವಿಡ್​ ಗರಂ ಆಗಿದ್ದರು ಎಂದಿದ್ದಾರೆ.

    ನೀನು ಆಡುವ ರೀತಿ ಇದೇನಾ? ನೀನು ಖಂಡಿತವಾಗಿ ಆಟವನ್ನು ಮುಗಿಸಲೇಬೇಕು ಎಂದು ಕೂಗಾಡಿದ್ದರು. ಡ್ರಾವಿಡ್​ ಅವರ ಇಂಗ್ಲಿಷ್​ ಆಕ್ರೋಶದಿಂದ ನಾನು ಆಘಾತಕ್ಕೆ ಒಳಗಾದೆ. ಆದರೂ ಅವರು ಕೂಗಾಡಿದ್ದರಲ್ಲಿ ಅರ್ಧದಷ್ಟು ನನಗೆ ಅರ್ಥವಾಗಲಿಲ್ಲ ಎಂದು ಸೆಹ್ವಾಗ್​ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

    ನಾಯಕನ ಆಕ್ರೋಶದ ಮಾತುಗಳ ಪರಿಣಾಮ ಯುವ ಬ್ಯಾಟ್ಸ್​ಮನ್​ ಹಾಗೂ ವಿಕೆಟ್​ ಕೀಪರ್​ ಆಗಿದ್ದ ಧೋನಿ ಮುಂದಿನ ಪಂದ್ಯದಲ್ಲಿ ತನ್ನ ತಲೆಯನ್ನು ಮೇಲೆತ್ತಲೇ ಇಲ್ಲ ಮತ್ತು ಬ್ಯಾಟಿಂಗ್​ ಮಾಡುವಾಗ ಹೆಚ್ಚು ಬಿರುಸಿನ ಹೊಡೆತಕ್ಕೆ ಧೋನಿ ಯತ್ನಿಸಲೇ ಇಲ್ಲ. ನಾನು ಧೋನಿ ಬಳಿ ಹೋಗಿ ಏನಾಯಿತು ಎಂದು ಕೇಳಿದೆ. ಅದಕ್ಕೆ ಡ್ರಾವಿಡ್​ರಿಂದ ಮತ್ತೊಮ್ಮೆ ಬೈಯಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದರು. ಆಟವನ್ನು ಸದ್ದಿಲ್ಲದೆ ಮುಗಿಸಿ ಹಿಂದಿರುಗೋಣ ಎಂದರು ಎಂದು ಸೆಹ್ವಾಗ್​ ಮೆಲಕು ಹಾಕಿದರು. (ಏಜೆನ್ಸೀಸ್​)

    ಇದನ್ನೂ ಓದಿರಿ: ಪೊಲೀಸ್ ಅಧಿಕಾರಿಯನ್ನೇ ಥಳಿಸಿ ಕೊಂದರು: ಮಗನ ಸಾವಿನ ಸುದ್ದಿ ಕೇಳಿ ತಾಯಿ ನಿಧನ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕಾಡಿನವರಲ್ಲ, ನಗರ ನಕ್ಸಲರದ್ದೇ ದೊಡ್ಡ ಸಮಸ್ಯೆ!

    ಬೇಸಿಗೆಯಲ್ಲಿ ಕಾಡುವ ಉರಿ; ಪರಿಹಾರ ಇದೇರಿ…

    ಇಂದು ಪಂಜಾಬ್ ಕಿಂಗ್ಸ್-ರಾಜಸ್ಥಾನ ರಾಯಲ್ಸ್ ಕಾದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts