More

    ಕಾಂಗ್ರೆಸ್​ ಪಕ್ಷಕ್ಕೆ ಹೋದರೆ ಅವರ ಭವಿಷ್ಯ ಕತ್ತಲೆಗೆ ಹೋದಂತೆ: ಸಚಿವ ಆನಂದ್​ ಸಿಂಗ್​

    ವಿಜಯನಗರ: ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಆ​ ಪಕ್ಷಕ್ಕೆ ಹೋದರೆ ಅವರ ಭವಿಷ್ಯ ಕತ್ತಲೆಗೆ ಹೋದಂತೆ ಎಂದು ಸಚಿವ ಆನಂದ್​ ಸಿಂಗ್​ ಹೇಳಿದರು.

    ಕಾಂಗ್ರೆಸ್​ನ ಇಂದಿನ ಪರಿಸ್ಥಿತಿ ಯಾವ ರೀತಿಯಲ್ಲಿ ಇದೆ ಎಂಬುದು ಇಡೀ ದೇಶದಲ್ಲಿ ಎಲ್ಲರಿಗೂ ಗೊತ್ತಿದೆ. ಬಿಜೆಪಿ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಅಂತಾ ಹೇಳುವ ದೊಡ್ಡ, ದೊಡ್ಡ ನಾಯಕರು ಯಾವ ಲೆಕ್ಕದ ಮೇಲೆ ಹೇಳ್ತಿದ್ದಾರೋ ಗೊತ್ತಿಲ್ಲಾ. ಅವರೆಲ್ಲ ದೊಡ್ಡ- ದೊಡ್ಡ ನಾಯಕರು ಅವರ ಬಗ್ಗೆ ನಾನು ಟೀಕೆ ಮಾಡಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

    ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಯಾರೂ ಕೂಡ ತಮ್ಮ ಭವಿಷ್ಯವನ್ನು ಕತ್ತಲೆಗೆ ದೂಡ್ತಾರೆ ಹೇಳಿ ನೋಡೋಣ, ಬಿಜೆಪಿ ಮುಂದೇನೂ ಬರ್ತದೆ, ಸುಮಾರು ವರ್ಷಗಳ ಕಾಲ ಆಳ್ವಿಕೆ ಮಾಡುತ್ತದೆ. 2023ರ ವಿಧನಾ ಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ. 2024ರಲ್ಲಿ ನೀವು ಹೇಳಿದ್ದೆ ಸರಿ ಅಂತ ನೀವೇ ಹೇಳುತ್ತೀರಿ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾಧ್ಯಮಗಳಿಗೆ ಹೇಳಿದರು.

    ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ ಎಂದ ಆನಂದ್​ ಸಿಂಗ್, ನನಗೆ ಕೊಪ್ಪಳ ಉಸ್ತುವಾರಿ ಸಿಕ್ಕಿದ್ದು ಖುಷಿಯಾಗಿದೆ. ನನ್ನ ಸ್ನೇಹಿತ ಶ್ರೀರಾಮುಲುಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಿಕ್ಕಿದ್ದು ಕೂಡ ಖುಷಿ ಇದೆ. ಆತನದ್ದು 16 ವರ್ಷಗಳ ಕಾಲದ ತಪಸ್ಸು. ನಾವು ಹಿಂದಿನ ದಿನ ವಿಕೇಂಡ್​ನಲ್ಲಿ ಸೇರಿದ್ದು ಕಾಕತಾಳಿಯ ಅಷ್ಟೆ, ಅದು ವೈರಲ್ ಆಗಿದೆ ಎಂದರು.

    ಯಾವ ಮಂತ್ರಿಗಳಿಗೆ ತವರು ಜಿಲ್ಲೆ ಕೊಟ್ಟಿಲ್ಲ, ಆ ತಾಂತ್ರಿಕತೆಯ ಆಧಾರದ ಮೇಲೆ ಶ್ರೀ ರಾಮುಲು ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಪಡೆದಿದ್ದಾರೆ. ನನಗೆ ಕೊಪ್ಪಳ ಕೊಟ್ಟಿದ್ದು ಖುಷಿ ಇದೆ. ಎಲ್ಲೋ ಕಲುಬುರಗಿ ಅಥವಾ ಬೀದರ್ ಕೊಟ್ಟಿದ್ರೆ ಸಮಸ್ಯೆಯಾಗ್ತಿತ್ತು ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷ ಇಂದು Oxizen ಮೇಲೆ ICU ನಲ್ಲಿದೆ. ವಿಜಯನಗರದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯೋದಿಲ್ಲ. ಕಾಂಗ್ರೆಸ್ ಪಕ್ಷ ಇದೆ ಅಂದ್ರೆ ಹೊಸಪೇಟೆಯಲ್ಲಿ ನಗರಸಭೆ ರಚನೆ ಮಾಡಬೇಕಿತ್ತಲ್ವಾ? ನಾವು ಸ್ವತ‌ಂತ್ರ ಅಭ್ಯರ್ಥಿಗಳನ್ನು ಕರೆದು ಅಧಿಕಾರ ಗದ್ದುವೆ ಏರಿದ್ದೇವೆ. ನಾವು ಎಲ್ಲರಿಗೂ ಮುಕ್ತವಾಗಿ ಬಿಟ್ಟಿದ್ವಿ. ನಾವು ಯಾರನ್ನೂ ಹೈಜಾಕ್ ಮಾಡಿಲ್ಲ ಅಂತ ಕಾಂಗ್ರೆಸ್ ವಿರುದ್ಧ ಆನಂದ್​ ಸಿಂಗ್​ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್​)

    ಚಾಯ್-ಸ್ಯಾಮ್ ಇಬ್ಬರಲ್ಲಿ ಯಾರು ಮೊದಲು ಡಿವೋರ್ಸ್​ ಬಯಸಿದ್ದು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಾಗಾರ್ಜುನ!

    ಕೊವ್ಯಾಕ್ಸಿನ್, ಕೋವಿಶೀಲ್ಡ್ ಅಗ್ಗ?: 780 ರೂ. ಬದಲು 275 ರೂ. ನಿಗದಿ ಸಾಧ್ಯತೆ | 150 ರೂ. ಸೇವಾಶುಲ್ಕ | ಸರ್ಕಾರದ ಕ್ರಮ

    ಸಾಲಕ್ಕೆ ಹೆದರಿ ದುಡುಕಿನ ನಿರ್ಧಾರ: ಮದ್ವೆಯಾದ ಎರಡೇ ವರ್ಷಕ್ಕೆ ಮೈಸೂರಿನಲ್ಲಿ ದಂಪತಿ ಬದುಕು ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts