More

    ಹೆಲಿಕಾಪ್ಟರ್​ ಲ್ಯಾಂಡಿಂಗ್​ ವೇಳೆ ಕುಸಿದ ಕಾಲೇಜು ಕಾಂಪೌಂಡ್ ಗೋಡೆ: ಬಿಜೆಪಿಗೆ ಮುಜುಗರ

    ಬಲಿಯಾ: ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಬಿಜೆಪಿಗೆ ಮುಜುಗರ ಉಂಟಾಗುವ ಘಟನೆ ನಡೆದಿದೆ. ಚುನಾವಣಾ ಪ್ರಚಾರಕ್ಕಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಬಲಿಯಾ ಜಿಲ್ಲೆಯಲ್ಲಿ ಸಮಾವೇಶ ನಡೆಯುತ್ತಿದ್ದ ಸ್ಥಳಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದರು. ಈ ವೇಳೆ ಪಿಯು ಕಾಲೇಜಿನ ಮೈದಾನದಲ್ಲಿ ಹೆಲಿಕಾಪ್ಟರ್​ ಲ್ಯಾಂಡಿಂಗ್ ಮಾಡುವಾಗ ಅದರ ಜೋರು ಗಾಳಿಗೆ ಕಾಲೇಜಿನ ಕಾಂಪೌಂಡ್​ ಕುಸಿದಿದೆ.

    ಹೆಲಿಕಾಪ್ಟರ್​ ಲ್ಯಾಂಡಿಂಗ್​ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡಿದವರು ರಾಜ್ಯದಲ್ಲಿ ಶಿಕ್ಷಣದ ಮೂಲಭೂತ ಸೌಕರ್ಯಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮತದಾರರನ್ನು ಒಲಿಸಿಕೊಳ್ಳಲು ಬಿಜೆಪಿ ತನ್ನ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಆದರೆ, ಹೆಲಿಕಾಪ್ಟರ್ ಲ್ಯಾಂಡಿಂಗ್‌ನಿಂದಾಗಿ ಕಾಲೇಜು ಕಾಂಪೌಂಡ್​ ಗೋಡೆ ಕುಸಿದಿರುವುದು ಅವರ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಜಾಲತಾಣದಲ್ಲಿ ಕಾಮೆಂಟ್​ ಮಾಡಿದ್ದಾರೆ.

    ಬಲಿಯಾ ಜಿಲ್ಲೆಯ ಫೆಫ್ನಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಸಚಿವ ಉಪೇಂದ್ರ ತಿವಾರಿ ಪರ ಪ್ರಚಾರ ನಡೆಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಆಗಮಿಸಿದ್ದರು. ರಾಟ್ಸರ್ ಪಿಯು ಕಾಲೇಜು ಮೈದಾನದಲ್ಲಿ ನಡ್ಡಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್​ಗಾಗಿ ಹೆಲಿಪ್ಯಾಡ್ ಅನ್ನು ನಿರ್ಮಿಸಲಾಗಿತ್ತು.

    ಹೆಲಿಕಾಪ್ಟರ್​ ಲ್ಯಾಂಡಿಂಗ್​ ಆಗುವ ವೇಳೆ ಅದರಿಂದ ಬರುತ್ತಿದ್ದ ಜೋರು ಗಾಳಿಗೆ ಕಾಲೇಜಿನ ಕಾಂಪೌಂಡ್​ ಗೋಡೆಯೇ ಕುಸಿದಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)

    2019ರ ಬಳಿಕ ಮತ್ತೊಮ್ಮೆ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಚುನಾವಣಾಧಿಕಾರಿ ರೀನಾ ದ್ವಿವೇದಿ!

    ಕನಸಲ್ಲಿ ಬಂದು ಆಗ್ರಹ: ಜಮೀನಿನಲ್ಲಿದ್ದ ಚೆನ್ನಕೇಶವನಿಗೆ ಪೂಜೆ ಸಲ್ಲಿಸಿದ ಹಾಸನದ ಮುಸ್ಲಿಂ ಕುಟುಂಬ!

    ಇಂಡೋ-ಪಾಕ್​ ಸಮಸ್ಯೆ ಬಗೆಹರಿಸಲು ಟಿ.ವಿ. ಚರ್ಚೆಗೆ ಬನ್ನಿ… ಪಾಕ್​ ಪ್ರಧಾನಿಯಿಂದ ಮೋದಿಗೆ ವಿಚಿತ್ರ ಆಹ್ವಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts