More

    VIDEOS| ಶ್ರೀಲಂಕಾ ಅಧ್ಯಕ್ಷರ ಮನೆಯೊಳಗೆ ಪ್ರತಿಭಟನಾಕಾರರ ಮೋಜು-ಮಸ್ತಿಯ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​

    ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅನಿರೀಕ್ಷಿತ ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅಲ್ಲಿನ ಜನರ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಇದರಿಂದ ಆಕ್ರೋಶಗೊಂಡಿರುವ ಲಂಕಾ ಜನರು ಪ್ರಧಾನಿ ರನಿಲ್​ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಅಧ್ಯಕ್ಷ ಗೋತಬಯ ರಾಜಪಕ್ಸೆ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.

    ಗೋತಬಯ ರಾಜೀನಾಮೆಗೆ ಒತ್ತಾಯಿಸಿ, ಸಾವಿರಾರು ಪ್ರತಿಭಟನಾಕಾರರು ಪೊಲೀಸ್​ ಬ್ಯಾರಿಕೇಡ್​ಗಳನ್ನು ಮುರಿದೆಸೆದು, ಕೈಯಲ್ಲಿ ಲಂಕಾ ಬಾವುಟ ಹಾಗೂ ಹೆಲ್ಮೆಟ್​ ಹಿಡಿದು ಗೋತಬಯ ಅವರ ಅರಮನೆ ಒಳಗೆ ನುಸುಳಿದ್ದಾರೆ. ಅರಮನೆಯಲ್ಲಿ ಬೇಕಾದನ್ನು ತಿಂದು, ಈಜು ಕೊಳಕ್ಕೆ ಜಿಗಿದು ಆಯಾಗಿ ಈಜಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ. ವಿಡಿಯೋಗಳಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ, ಕುಡಿದು ತಿನ್ನುತ್ತಾ ಎಂಜಾಯ್​ ಮಾಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

    ಗೋತಬಯ ಅವರ ಅರಮನೆ ಒಳಗಡೆ ಇರುವ ಈಜುಕೊಳದಲ್ಲಿ ಪ್ರತಿಭಟನಾಕಾರರು ಈಜಾಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಅಡುಗೆ ಮನೆಯೊಳಗೆ ನುಗ್ಗಿ, ಅಡುಗೆ ಮಾಡಿಕೊಂಡು, ನಗಾಡುತ್ತಾ, ಕೂಗಾಡುತ್ತಾ ಬೇಕಾದ್ದನ್ನು ತಿಂದು ತೇಗುತ್ತಿರುವ ದೃಶ್ಯಗಳಿವೆ. ಅಲ್ಲದೆ, ಬೆಡ್​ ಮೇಲೆ ಕುಳಿತು ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ಕೂಡ ಕಂಡುಬಂದಿದೆ. ಸರ್ಕಾರದ ವಿರುದ್ಧ ಬಂಡೆದ್ದಿರುವ ಗುಂಪು ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ತಮಗೆ ಬೇಕಾದಂತೆ ಉಪಯೋಗಿಸುತ್ತಿದ್ದಾರೆ.

    ನಿನ್ನೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಗೋತಬಯಾ ನಿನ್ನೆಯೇ ಗೋತಬಯಾ ಅವರು ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದರು. ಗೊಂದಲದ ನಡುವೆ, ಶ್ರೀಲಂಕಾ ನೌಕಾಪಡೆಯ ಹಡಗಿನಲ್ಲಿ ಸೂಟ್‌ಕೇಸ್‌ಗಳನ್ನು ಲೋಡ್ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದವು. ಸೂಟ್‌ಕೇಸ್‌ಗಳು ಅಧ್ಯಕ್ಷ ರಾಜಪಕ್ಸೆ ಅವರದ್ದು ಎಂದು ಸ್ಥಳೀಯ ಮಾಧ್ಯಮಗಳು ಹೇಳಿಕೊಂಡಿವೆ.

    ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಗೋತಬಯ ಅವರು ಮುಂದಿನ ಬುಧವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜೀನಾಮೆ ಬಳಿಕ ಲಂಕಾ ಸಂಸತ್ತು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಸ್ಪೀಕರ್​ ಅವರು 30 ದಿನಗಳವರೆಗೆ ಅಧ್ಯಕ್ಷರಾಗಿ ಆಡಳಿತ ನಡೆಸಲಿದ್ದಾರೆ. ಈ ಬೆಳವಣಿಗೆಯ ನಡುವೆ ಕೊಲಂಬೋದಲ್ಲಿರುವ ಲಂಕಾ ಪ್ರಧಾನಿ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿದ ಪ್ರತಿಭಟನಾಕಾರರು ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದ್ದಾರೆ ಎಂದು ಲಂಕಾದ ಪ್ರಧಾನಿ ಕಾರ್ಯಾಲಯ ತಿಳಿಸಿದೆ.

    ಸುಮಾರು 22 ಮಿಲಿಯನ್ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರವು ತೀವ್ರವಾದ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಿದೆ. ವಿದೇಶಿ ಸಾಲದ ಹೊರೆ ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದರಿಂದ ಹೊರಬರಲು ಸಾಕಷ್ಟು ಹೋರಾಡುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಂಧನ, ಆಹಾರ ಮತ್ತು ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. ಏಳು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಯು ಲಂಕಾಗೆ ಎದುರಾಗಿದೆ.

    ದೇಶದ ಈ ಪರಿಸ್ಥಿತಿಗೆ ಅಧ್ಯಕ್ಷ ಗೋತಬಯ ಅವರೇ ಕಾರಣದ ಎಂದು ಹಲವರು ದೂಷಿಸಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ಮಾರ್ಚ್‌ನಿಂದಲೇ ಲಂಕಾದಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ, ಹಣದ ತೀವ್ರ ಕೊರತೆಯಿರುವ ಲಂಕಾವು, ಇಂಧನ ಆಮದು ಪಡೆಯುವುದನ್ನು ನಿಲ್ಲಿಸಿದ್ದರಿಂದ ಇತ್ತೀಚಿನ ವಾರಗಳಲ್ಲಿ ಜನರ ಅಸಮಾಧಾನವು ಸ್ಫೋಟಗೊಂಡಿತು. ನಿನ್ನೆ ಅಧ್ಯಕ್ಷರ ನಿವಾಸ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಸಾಕಷ್ಟು ದಾಂಧಲೆ ನಡೆಸಿದ್ದಾರೆ. (ಏಜೆನ್ಸೀಸ್​)

    ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪ್ರಧಾನಿ ನಿವಾಸಕ್ಕೆ ಬೆಂಕಿಯಿಟ್ಟ ಪ್ರತಿಭಟನಾಕಾರರು, ಅಧ್ಯಕ್ಷರ ರಾಜೀನಾಮೆಗೆ ದಿನ ಫಿಕ್ಸ್​

    SSLC ಪರೀಕ್ಷೆಯಲ್ಲಿ ಛತ್ತೀಸ್​ಗಢದ IAS ಅಧಿಕಾರಿ ಪಡೆದಿರುವ ಒಟ್ಟು ಅಂಕ​ ನೋಡಿದ್ರೆ ಹುಬ್ಬೇರೋದು ಖಚಿತ!

    ಮೂವತ್ತು ತಿಂಗಳಲ್ಲಿ 38 ಕೊಲೆ! ಖಾಕಿ ಕಂಡರೆ ಪುಂಡರಿಗಿಲ್ಲ ಭಯ, ಸಿಎಂ ತವರಲ್ಲಿ ಚಾಕು-ಚೂರಿ ಅಟ್ಟಹಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts