More

    ಉತ್ತರ ಪ್ರದೇಶ ಪಂಚಾಯಿತಿ ಚುನಾವಣೆ: ಬಿಜೆಪಿಗೆ ಭಾರೀ ಮುಖಭಂಗ, ಪ್ರಧಾನಿ ಮೋದಿ ಕ್ಷೇತ್ರದಲ್ಲೇ ಸೋಲು

    ಲಖನೌ: ಉತ್ತರ ಪ್ರದೇಶ ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅಯೋಧ್ಯ, ವಾರಣಾಸಿ ಮತ್ತು ಲಖನೌ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದ್ದು, ಸಮಾಜವಾದಿ ಪಕ್ಷ (ಎಸ್​ಪಿ) ಜಯಭೇರಿ ಬಾರಿಸಿದೆ.

    ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ 40 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು ಕೇವಲ 8ರಲ್ಲಿ ಗೆಲುವು ದಾಖಲಿಸುವ ಮೂಲಕ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಇನ್ನೊಂದೆಡೆ ಎಸ್​ಪಿ 14 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉಳಿದಂತೆ ಬಹುಜನ ಸಮಾಜ ಪಾರ್ಟಿ (ಬಿಎಸ್​ಪಿ) 5, ಅಪ್ನಾ ದಳ (ಎಸ್​) 3, ಆಮ್​ ಆದ್ಮಿ ಪಾರ್ಟಿ (ಎಎಪಿ) ಮತ್ತು ಸುಹೆಲ್ದೇವ್​ ಭಾರತೀಯ ಸಮಾಜ ಪಾರ್ಟಿ (ಎಸ್​ಬಿಎಸ್​ಪಿ) ತಲಾ ಒಂದೊಂದು ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಮೂವರು ಸ್ವತಂತ್ರ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.

    ರಾಜ್ಯ ರಾಜಧಾನಿ ಲಖನೌದಲ್ಲೂ ಜನ ಬಿಜೆಪಿ ಕೈಹಿಡಿದಿಲ್ಲ. ಒಟ್ಟು 25 ಸ್ಥಾನಗಳಲ್ಲಿ ಕೇವಲ 3 ಸ್ಥಾನಗಳಲ್ಲಿ ಮಾತ್ರ ಗೆಲವು ದಾಖಲಿಸಿದೆ. ರಾಮ ಮಂದಿರ ನಿರ್ಮಾಣ ಆಗುತ್ತಿರುವ ಅಯೋಧ್ಯೆಯಲ್ಲಿ ಒಟ್ಟು 40 ಸ್ಥಾನಗಳಲ್ಲಿ ಬಿಜೆಪಿಗೆ ಕೇವಲ 6 ಸ್ಥಾನಗಳಲ್ಲಿ ಮಾತ್ರ ಗೆಲುವ ದಕ್ಕಿದೆ. ಇಲ್ಲಿ 24 ಸ್ಥಾನಗಳಲ್ಲಿ ಎಸ್​ಪಿ ಜಯಭೇರಿ ಬಾರಿಸಿದೆ.

    ಇದೇ ವೇಳೆ ಗೋರಖ್‌ಪುರದಲ್ಲಿ ಪಂಚಾಯತ್ ಚುನಾವಣೆಗೆ ಮತ ಎಣಿಕೆ ಮೇ 2 ರಿಂದ ನಡೆಯುತ್ತಿದ್ದು, ಅಂತಿಮ ಫಲಿತಾಂಶವನ್ನು ಇನ್ನೂ ಘೋಷಿಸಲಾಗಿಲ್ಲ. ಜಿಲ್ಲಾ ಪಂಚಾಯತ್ ಸದಸ್ಯರ ಸ್ಥಾನಕ್ಕೆ ಒಟ್ಟು 68 ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ಕಠಿಣ ಸ್ಪರ್ಧೆ ನಡೆದಿದ್ದು, ಇದರಲ್ಲಿ ಸದ್ಯ ಬಿಜೆಪಿ ಅಭ್ಯರ್ಥಿಗಳು 20 ವಾರ್ಡ್‌ಗಳಿಂದ ಮತ್ತು ಎಸ್‌ಪಿ 19 ಸ್ಥಾನಗಳಿಂದ ಜಯಗಳಿಸಿದ್ದಾರೆ. (ಏಜೆನ್ಸೀಸ್​)

    ಕಥೆಗಾರ, ಅಂಕಣಕಾರ ಎಸ್.ಎಫ್. ಯೋಗಪ್ಪನವರ್ ಕರೊನಾ ಸೋಂಕಿನಿಂದಾಗಿ ನಿಧನ

    ಕರ್ನಾಟಕದಲ್ಲಿ ಕರೊನಾ ನಿರ್ವಹಣೆ ಸರ್ಕಾರದ ಕೈ ಮೀರಿದೆ, ತುರ್ತು ಮಧ್ಯ ಪ್ರವೇಶ ಮಾಡಬೇಕು ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಎಚ್​ಡಿಕೆ

    ನಂದಿಗ್ರಾಮದಲ್ಲಿ ಸೋತರೂ ಮೇ 5ರಂದೇ ಮುಖ್ಯಮಂತ್ರಿಯಾಗಿ ದೀದಿ ಪ್ರಮಾಣವಚನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts