More

    ಎರಡು ಸರ್ಕಾರಿ ಇಲಾಖೆಗಳ ನಡುವಿನ ಕಿತ್ತಾಟ: ಅಧಿಕಾರಿಗಳ ಉದ್ಧಟತನದಿಂದ ಸಾರ್ವಜನಿಕರು ಹೈರಾಣ

    ತುಮಕೂರು: ಎರಡು ಸರ್ಕಾರಿ ಇಲಾಖೆಗಳ ನಡುವಿನ ಜಟಾಪಟಿಯಿಂದ ಸಾರ್ವಜನಿಕರು ಹೈರಾಣಾಗಿರುವ ಪ್ರಸಂಗ ತುಮಕೂರಲ್ಲಿ ಜರುಗಿದೆ.

    ತುಮಕೂರಿನ ಆರ್​ಟಿಒ ಮತ್ತು ಬೆಸ್ಕಾಂ ಇಲಾಖೆ ನಡುವೆ ಕಾಳಗ ನಡೆದಿದೆ. ಅಧಿಕಾರಿಗಳ ಉದ್ಧಟತನದಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ. ವಿದ್ಯುತ್ ಬಿಲ್ ಕಟ್ಟದಿದ್ದಕ್ಕೆ ಬೆಸ್ಕಾಂ ಇಲಾಖೆ ಆರ್​ಟಿಒ ಕಚೇರಿಯ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದರೆ, ಅದಕ್ಕೆ ಪ್ರತಿಯಾಗಿ ಆರ್​ಟಿಒ ಕಚೇರಿ ಬೆಸ್ಕಾಂ ವಾಹನವನ್ನು ಸೀಜ್​ ಮಾಡುವ ಮೂಲಕ ಸೇಡು ತೀರಿಸಿಕೊಂಡಿದೆ. ಇವರಿಬ್ಬರ ಜಗಳದಲ್ಲಿ ಸಾರ್ವಜನಿಕರು ಬಡವಾಗಿದ್ದಾರೆ.

    ತುಮಕೂರಿನ ಆರ್‌ಟಿಒ ಕಚೇರಿ ಕಳೆದ ಮೂರು ತಿಂಗಳಿಂದ ಒಂದು ಲಕ್ಷದ ಹದಿನೇಳು ಸಾವಿರ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಬೆಸ್ಕಾಂ ಇಲಾಖೆ ಸರ್ಕಾರದ ಆದೇಶದ ಅನ್ವಯ ನಿನ್ನೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದೆ. ವಿದ್ಯುತ್​ ಕಡಿತವಾಗುತ್ತಿದ್ದಂತೆ ಇತ್ತ ಸಿನಿಮಾ ಶೈಲಿಯಲ್ಲಿ ಬೆಸ್ಕಾಂ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಆರ್​ಟಿಒ ಮುಂದಾಗಿದೆ. ಬೆಸ್ಕಾಂ ಸರ್ವೀಸ್ ವಾಹನಕ್ಕೆ 2 ಸಾವಿರ ರೂಪಾಯಿ ದಂಡ ಹಾಕಿ, ವಾಹನವನ್ನು ಸೀಜ್ ಮಾಡಲಾಗಿದೆ. ಸೀಜ್ ಮಾಡಿರುವ ಸರ್ವಿಸ್ ವಾಹನ ಓಮ್ನಿಯನ್ನು ಕಾಪೌಂಡ್ ಒಳಗಡೆ ಆರ್​ಟಿಒ ಅಧಿಕಾರಿಗಳು ನಿಲ್ಲಿಸಿಕೊಂಡಿದ್ದಾರೆ. ಸರ್ವಿಸ್ ವಾಹನದ ಮೇಲಿರುವ ಏಣಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ನೋಟಿಸ್ ಹೊರಡಿಸಿದೆ.

    ದಂಡ ಪಾವತಿಸಿ ವಾಹನ ತೆಗೆದುಕೊಂಡು ಹೋಗುವಂತೆ ವಾಹನ ಸೀಜ್ ಮಾಡಲಾಗಿದ್ದು, ವಿದ್ಯುತ್ ತಂತಿ ಮತ್ತು ಕಂಬಗಳಲ್ಲಿನ ತೊಡಕುಗಳನ್ನು ದುರಸ್ಥಿಗೊಳಿಸಲು ಬೆಸ್ಕಾಂ ನೌಕರರ ಹಿಂದೇಟು ಹಾಕುತ್ತಿದ್ದಾರೆ. ಮಳೆ ಬಂದಾಗಿನಿಂದ ಸಾರ್ವಜನಿಕರಿಂದ ನೂರಾರು ದೂರುಗಳು ಬರುತ್ತಿವೆ. ಒಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ, ಮತ್ತೊಂದೆಡೆ ಕರ್ತವ್ಯ ನಿಷ್ಠೆ, ಇವರಿಬ್ಬರ ಮಧ್ಯೆ ಕರೆಂಟ್ ಇಲ್ಲದೇ ಜನತೆ ಒದ್ದಾಡುತ್ತಿದ್ದಾರೆ.

    ಸದ್ಯ ಬಾಕಿಯಿದ್ದ ಬಿಲ್ ಹಣ ಪಾವತಿಸಿರಿವ ಅಧಿಕಾರಿಗಳು ಆರ್​ಟಿಒ ಕಚೇರಿಗೆ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹೀರಾಬೆನ್​ಗೆ 100ರ ಸಂಭ್ರಮ: ಶತಾಯುಷಿ ತಾಯಿಯ ಬಗ್ಗೆ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ

    ಮಾರ್ಗ ಮಧ್ಯೆ ಲೈಂಗಿಕ ಬಯಕೆ ಈಡೇರಿಸಿ! ಅಮಲಾ​ರನ್ನು ಮಂಚಕ್ಕೆ ಕರೆದವರಿಗೆ ಬಿಗ್​ ಶಾಕ್​

    ಬೆಳಗ್ಗೆ ವಾಕಿಂಗ್​ ಮಾಡಲು ರಸ್ತೆಯನ್ನೇ ಬಂದ್​ ಮಾಡಿಸಿದ ಪೊಲೀಸ್​ ಅಧಿಕಾರಿ! ಮುಂದೇನಾಯ್ತು ನೀವೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts