More

    ಅಶ್ಲೀಲ ಮೆಸೇಜ್​ ಮೂಲಕ ನೈನಾ ಜೈಸ್ವಾಲ್​ಗೆ ನಿತ್ಯವು ಕಿರುಕುಳ ನೀಡ್ತಿದ್ದ ಕಿಡಿಗೇಡಿಯ ಬಂಧನ

    ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ಟೇಬಲ್​ ಟೆನ್ನಿಸ್​ ಆಟಗಾರ್ತಿ ನೈನಾ ಜೈಸ್ವಾಲ್​ ಅವರನ್ನು ಟಾರ್ಗೆಟ್​ ಮಾಡಿ, ಕಿರುಕುಳ ನೀಡುತ್ತಿದ್ದ ಕಿಡಿಗೇಡಿಯನ್ನು ಹೈದರಾಬಾದ್​ನ ಸೈಬರ್​ ಕ್ರೈಂ ಪೊಲೀಸರು ಶನಿವಾರ (ಆ.13) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಶ್ರೀಕಾಂತ್​ ಎಂದು ಗುರುತಿಸಲಾಗಿದೆ. ಶ್ರೀಕಾಂತ್, ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ನೈನಾಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ, ಆತ ತನ್ನ ವರ್ತನೆಯನ್ನು ಬದಲಿಸಿಕೊಂಡಿರಲಿಲ್ಲ. ಹಿಂದೊಮ್ಮೆ ಪೊಲೀಸರಿಂದಲೂ ಎಚ್ಚರಿಕೆ ಕೊಡಲಾಗಿತ್ತು. ಆದರೆ, ಅದಕ್ಕೆ ಕ್ಯಾರೆ ಎನ್ನದೇ ತನ್ನ ದುರ್ಬುದ್ಧಿ ಮುಂದುವರಿಸಿದ್ದ. ಮತ್ತೆ ಜಾಲತಾಣದಲ್ಲಿ ಅಶ್ಲೀಲವಾಗಿ ಕಾಮೆಂಟ್​ ಮಾಡುತ್ತಿದ್ದ. ಇದನ್ನು ಇಲ್ಲಿಗೆ ಬಿಟ್ಟರೆ ಸರಿಹೋಗುವುದಿಲ್ಲ ಎಂದರಿತ ನೈನಾ ತಂದೆ ಅಶ್ವಿನ್​ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರು.

    ಇದೀಗ ಆರೋಪಿ ಶ್ರೀಕಾಂತ್​ನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಸಿಆರ್​ಪಿಸಿಯ ಸೆಕ್ಷನ್​ 14ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪ ಸಾಬೀತಾದಲ್ಲಿ ಶ್ರೀಕಾಂತ್​ 7 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

    ಟೇಬಲ್ ಟೆನ್ನಿಸ್​ ಆಟಗಾರ್ತಿಯಾಗಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ನೈನಾ, ತಮ್ಮ ಅಗಾಧ ಬುದ್ಧಿಶಕ್ತಿಯಿಂದಲೂ ಖ್ಯಾತಿ ಪಡೆದಿದ್ದಾರೆ. ಏಕೆಂದರೆ, 8ನೇ ವಯಸ್ಸಿಗೆ ಹತ್ತನೇ ತರಗತಿ ಮುಗಿಸಿ, 13ನೇ ವಯಸ್ಸಿನಲ್ಲಿ ಪದವಿ, 15ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ ಮುಗಿಸಿದ ಈಕೆ ಏಷ್ಯಾದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಗೌರವಕ್ಕೆ ಪಾತ್ರಳಾಗಿದ್ದಾರೆ. ಮೋಟಿವೇಶನಲ್ ಸ್ಪೀಕರ್ ಆಗಿ ಮಿಂಚುತ್ತಿರುವ ನೈನಾ ಜೈಶ್ವಾಲ್ ಇತ್ತೀಚೆಗಷ್ಟೇ ತನ್ನ ತಾಯಿ ಭಾಗ್ಯಲಕ್ಷ್ಮಿಯೊಂದಿಗೆ ಎಲ್​ಎಲ್​ಬಿ ಸೇರಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. (ಏಜೆನ್ಸೀಸ್​)

    ಹೃದಯಾಘಾತದಿಂದ ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್​ವಾಲಾ ವಿಧಿವಶ ​

    ಸಹಕಾರ ಧುರೀಣ ವೆಂಕಟೇಶ್​ಗೆ ವಿಜಯರತ್ನ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆ ಇಂದಿನಿಂದ ದಸರಾ ಗಜಪಡೆ ತಾಲೀಮು ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts