More

    ಇದ್ದಕ್ಕಿದ್ದಂತೆ ಸಂಪರ್ಕಕ್ಕೆ ಸಿಗದ ಕೆಲ AAP ಶಾಸಕರು: ಕೇಜ್ರಿವಾಲ್​ ಸರ್ಕಾರಕ್ಕೆ ಕಂಟಕ?

    ನವದೆಹಲಿ: ದೆಹಲಿ ರಾಜ್ಯ ರಾಜಕಾರಣದಲ್ಲಿ ಯಾರೂ ಕೂಡ ನಿರೀಕ್ಷಿಸದ ಬೆಳವಣಿಗೆಯೊಂದು ಗುರುವಾರ ಬೆಳಗ್ಗೆ ನಡೆದಿದೆ. ರಾಷ್ಟ್ರ ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಆಮ್​ ಆದ್ಮಿ ಪಕ್ಷದ ಕೆಲ ಶಾಸಕರು ಸಿಎಂ ಅರವಿಂದ್​ ಕೇಜ್ರಿವಾಲ್​ ಸಂಪರ್ಕಕ್ಕೂ ಸಿಗದೇ ಇರುವುದು ಎಎಪಿ ಪಕ್ಷದ ತಳಮಳಕ್ಕೆ ಕಾರಣವಾಗಿದೆ.

    ಈ ಬೆಳವಣಿಗೆಯ ಬೆನ್ನಲ್ಲೇ ಎಎಪಿಯ ಹಿರಿಯ ನಾಯಕರು ಬಿಜೆಪಿ ಕಡೆ ಬೊಟ್ಟು ಮಾಡಿದ್ದು, ತಮ್ಮ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಕೆಲ ಶಾಸಕರು ಸಂಪರ್ಕಕ್ಕೆ ಸಿಗದಿರುವ ಹಿನ್ನೆಲೆಯಲ್ಲಿ ಎಎಪಿ ಇಂದು 11 ಗಂಟೆಗೆ ಸಭೆ ಕರೆದಿದ್ದು, ಸಭೆ ಆರಂಭವಾಗಿದೆ. ಆದರೆ, ಕೆಲ ಶಾಸಕರನ್ನು ಸಂಪರ್ಕಿಸಲು ಎಎಪಿಗೆ ಈವರೆಗೂ ಸಾಧ್ಯವಾಗಿಲ್ಲ.

    ಬಿಜೆಪಿ ಸೇರಲು 20 ಕೋಟಿ ಆಫರ್​ ಮತ್ತು ಒಂದು ವೇಳೆ ಸೇರದಿದ್ದರೆ ಇಡಿ ತನಿಖೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಇದಕ್ಕೂ ಮೊದಲೇ ಎಎಪಿ ಶಾಸಕರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ನಿನ್ನೆ (ಆ.24) ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಪ್​ನ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭೆ ಸಂಸದ ಸಂಜಯ್ ಸಿಂಗ್, ಶಾಸಕರಾದ ಅಜಯ್ ದತ್, ಸಂಜೀವ್ ಜಾ, ಸೋಮನಾಥ ಭಾರತಿ ಮತ್ತು ಕುಲದೀಪ್ ಕುಮಾರ್ ಅವರನ್ನು ಸಂರ್ಪಸಿರುವ ಬಿಜೆಪಿ ನಾಯಕರು ಕಮಲ ಪಕ್ಷಕ್ಕೆ ಸೇರ್ಪಡೆಗೊಂಡರೆ 20 ಕೋಟಿ ರೂ., ಇತರ ಶಾಸಕರನ್ನು ಕರೆತಂದರೆ 25 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಪಕ್ಷಾಂತರ ಮಾಡದಿದ್ದರೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರೀತಿಯಲ್ಲಿ ಸಿಬಿಐ ತನಿಖೆ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

    ತನಿಖಾ ಸಂಸ್ಥೆಗಳ ದುರ್ಬಳಕೆಯಿಂದ ಆಪ್ ಪಕ್ಷವನ್ನು ಒಡೆಯುವುದರೊಂದಿಗೆ ದೆಹಲಿ ಸರ್ಕಾರವನ್ನು ಉರುಳಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ. ಬಿಜೆಪಿಯ ಈ ತಂತ್ರಗಾರಿಕೆಯು ಮಹಾರಾಷ್ಟ್ರದಲ್ಲಿ ( ಮಹಾರಾಷ್ಟ್ರ ಶಾಸಕ ಏಕನಾಥ ಶಿಂಧೆ) ಯಶಸ್ವಿಯಾಗಿರಬಹುದು. ಆದರೆ ದೆಹಲಿಯಲ್ಲಿ ಜನರು ಮೂರು ಬಾರಿ ಕೇಜ್ರಿವಾಲ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಇತರೆ ನಾಲ್ವರು ಶಾಸಕರು ಬಿಜೆಪಿ ನಾಯಕರು ತಮ್ಮನ್ನು ಸಂರ್ಪಸಿದ ರೀತಿಯನ್ನು ವಿವರಿಸಿದರು.

    ಆಪ್ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಬಾದ್ ಪೂನವಾಲಾ, ಕೇಜ್ರಿವಾಲ್ ಪಕ್ಷವು ಟ್ರೇಲರ್​ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಆದರೆ ಚಲನಚಿತ್ರ ಎಂದಿಗೂ ಪರದೆ ಮೇಲೆ ಮೂಡುವುದಿಲ್ಲ ಎಂದು ಹೇಳಿದ್ದಾರೆ.

    ಆಪ್ ಶಾಸಕರಿಗೆ ಆಮಿಷವೊಡ್ಡುತ್ತಿರುವ ಪ್ರಯತ್ನವನ್ನು ಕೈ ಬಿಡಬೇಕು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆಪ್ ಶಾಸಕರು ತಮ್ಮ ಪ್ರಾಣವನ್ನು ಬೇಕಾದರೂ ಬಿಡುತ್ತಾರೆಯೇ ಹೊರತು ಪಕ್ಷಕ್ಕೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಕೇಜ್ರಿವಾಲ್ ಅವರ ‘ಸೈನಿಕ’ರಾಗಿರುವ ಶಾಸಕರು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅನುಯಾಯಿಗಳಾಗಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ದುರಂತ ಅಂತ್ಯ ಕಂಡ ಟೆಕ್ಕಿ: ಸುಂದರಿಯ ಡೈರಿ-ಮೊಬೈಲ್​ನಲ್ಲಿರೋ ಬಾಯ್​ಫ್ರೆಂಡ್​ ರಹಸ್ಯದ ಹಿಂದೆ ಬಿದ್ದ ಪೊಲೀಸರು!

    ಮನೆಯಲ್ಲಿ ಎಕೆ-47, 60 ಜೀವಂತ ಬುಲೆಟ್​ಗಳು ಪತ್ತೆ: ಇಡಿಯಿಂದ ಜಾರ್ಖಂಡ್​ ಸಿಎಂ ಆಪ್ತನ ಬಂಧನ

    ಕೆಂಪಣ್ಣ ಅಕ್ರಮಗಳಲ್ಲಿ ಅಕ್ರಮಗಳ ಸರದಾರ: ಮಂಡ್ಯ ಬಿಲ್ಡರ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts