More

    ಕ್ಷಮಿಸಿ… ದಯವಿಟ್ಟು ನನ್ನನ್ನು ಬ್ಯಾನ್​ ಮಾಡ್ಬೇಡಿ! ಕೊಹ್ಲಿ ಕುರಿತಾದ ಸ್ವಾರಸ್ಯಕರ ಸಂಗತಿ ಇದು

    ನವದೆಹಲಿ: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಯ ಟೆಸ್ಟ್​ ವೃತ್ತಿ ಜೀವನದ ಪಾಲಿಗೆ 2011/12ರ ಆಸ್ಟ್ರೇಲಿಯಾ ಪ್ರವಾಸ ತುಂಬಾ ಮಹತ್ವದ್ದಾಗಿತ್ತು. ಕಿರಿಯ ಟೆಸ್ಟ್ ಆಟಗಾರನಾಗಿದ್ದ ಕೊಹ್ಲಿ, ಚೊಚ್ಚಲ ಟೆಸ್ಟ್​ ಪಂದ್ಯದ ನಂತರ ಆಗಾಗ ಬೆಂಚ್​ ಕಾಯುತ್ತಿದ್ದರು. ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಲ್ಲಿ ಅವಕಾಶ ಪಡೆದ ಕೊಹ್ಲಿ, ಎರಡನೇ ಪಂದ್ಯದ ನಂತರ ಬೆಂಚ್​ ಕಾಯ್ದಿದ್ದರು. ಆದರೆ, ಆಗಿನ ನಾಯಕ ಎಂ.ಎಸ್​. ಧೋನಿಯಿಂದಾಗಿ ಮೂರನೇ ಪಂದ್ಯದಲ್ಲಿ ಮತ್ತೊಮ್ಮೆ ಅವಕಾಶ ಗಿಟ್ಟಿಸಿಕೊಂಡಿದ್ದರು ಎಂಬ ಸಂಗತಿ ಇದೀಗ ಮತ್ತೊಮ್ಮೆ ಬೆಳಕಿಗೆ ಬಂದಿದೆ.

    3ನೇ ಟೆಸ್ಟ್ ಆಡಲು ನಾಯಕನ ಗ್ರೀನ್ ಸಿಗ್ನಲ್ ಪಡೆದಿದ್ದರೂ, ಸಿಡ್ನಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ, ಕೊಹ್ಲಿ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯನ್ನರು ಗೇಲಿ ಮಾಡಿದ್ದರು. ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಕೋಪಗೊಂಡಿದ್ದ ಕೊಹ್ಲಿ ತಮ್ಮ ಮಧ್ಯದ ಬೆರಳನ್ನು ತೋರಿಸಿ ವಿವಾದ ಸೃಷ್ಟಿ ಮಾಡಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಮಾಧ್ಯಮದಲ್ಲಿ ಕೊಹ್ಲಿ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದು ವೃತ್ತಿ ಜೀವನದ ಕಪ್ಪು ಚುಕ್ಕೆಯಾಗಿಯೇ ಉಳಿದುಕೊಂಡಿದೆ.

    ಇದಾದ ಬಳಿಕ 2018ರಲ್ಲಿ ವಿಸ್ಡನ್ ಕ್ರಿಕೆಟ್ ಮಾಸಿಕದಲ್ಲಿ ವಿಶೇಷ ಸಂದರ್ಶನವೊಂದರಲ್ಲಿ ಈ ಘಟನೆ ಬಗ್ಗೆ ಮಾತನಾಡಿದ್ದ ಕೊಹ್ಲಿ, ಘಟನೆಯ ನಂತರ ತನ್ನನ್ನು ನಿಷೇಧಿಸದಂತೆ ಮ್ಯಾಚ್ ರೆಫರಿಗೆ ಮನವಿ ಮಾಡಿಕೊಂಡಿದ್ದರಂತೆ. ಮೊದಲಿಗೆ, ಕೊಹ್ಲಿ ಅವರು ಏನೂ ಆಗಿಲ್ಲ ಎಂಬಂತೆ ವರ್ತಿಸಿದರಂತೆ.

    ಪಂದ್ಯದ ಬಳಿಕ ಮ್ಯಾಚ್​ ರೆಫ್ರಿ (ರಂಜನ್ ಮಧುಗಲ್ಲೆ) ಮರುದಿನ ನನ್ನನ್ನು ಅವರ ಕೋಣೆಗೆ ಕರೆದರು. ನಿನ್ನೆ ಬೌಂಡರಿಯಲ್ಲಿ ಏನಾಯಿತು? ಎಂದು ಪ್ರಶ್ನಿಸಿದರು. ಅಂಥದ್ದೇನೂ ನಡೆದಿಲ್ಲ. ಆದರೆ, ಸಣ್ಣ ವಿಚಾರವನ್ನು ವಿಡಂಬನೆ ಮಾಡಿದ್ದಾರೆಂದು ಹೇಳಿದೆ. ನಂತರ ಅವರು ನನ್ನ ಮುಂದೆ ವೃತ್ತಪತ್ರಿಕೆಯನ್ನು ಎಸೆದರು ಮತ್ತು ಮೊದಲ ಪುಟದಲ್ಲಿ ನನ್ನ ದೊಡ್ಡ ಚಿತ್ರವು ಕಾಣಿಸುತ್ತಿತ್ತು.

    ನನ್ನ ಫೋಟೋ ನೋಡಿ ರೆಫ್ರಿ ತುಂಬಾ ಗರಂ ಆಗಿದ್ದರು. ಇದರಿಂದ ಏನು ಮಾಡಬೇಕೆಂದು ತಿಳಿಯದೇ ‘ನನ್ನನ್ನು ಕ್ಷಮಿಸಿ, ದಯವಿಟ್ಟು ನನ್ನನ್ನು ನಿಷೇಧಿಸಬೇಡಿ! ಎಂದು ಬೇಡಿಕೊಂಡಿದ್ದೆ, ಬಳಿಕ ಪಂದ್ಯದ ನಿಷೇಧದಿಂದ ತಪ್ಪಿಸಿಕೊಂಡೆ ಎಂದು ಕೊಹ್ಲಿ ಹೇಳಿಕೊಂಡಿದ್ದರು. ರೆಫ್ರಿ ಅವರು ಒಳ್ಳೆಯ ವ್ಯಕ್ತಿ. ಅಂದು ನಾನು ಸಣ್ಣತನ ತೋರಿದೆ. ಆದರೂ ಕೆಲವೊಂದನ್ನು ಅರ್ಥ ಮಾಡಿಕೊಂಡೆ ಎಂದುಯ ಕೊಹ್ಲಿ ಹೇಳಿದರು. (ಏಜೆನ್ಸೀಸ್​)

    ಗ್ರ್ಯಾಂಡ್​ ಫಿನಾಲೆಗೂ ಮುನ್ನ ಶಾಕಿಂಗ್​ ನ್ಯೂಸ್​ ಕೊಟ್ಟ ಬಿಗ್​ಬಾಸ್ ಡೈರೆಕ್ಟರ್​: ಶೋ ಇತಿಹಾಸದಲ್ಲೇ ಇದು ಮೊದಲು!

    ಅಶ್ಲೀಲ ವಿಡಿಯೋ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಮುಂಬೈ ಪೊಲೀಸರಿಗೆ ನಟಿಯಿಂದ ಬಿಗ್​ ಆಫರ್!​

    ಜೋರಾಗಿದೆ ಡೆಪ್ಯುಟೇಶನ್ ದಂಧೆ: ಲಾಕ್​ಡೌನ್​ನಲ್ಲೂ 220ಕ್ಕೂ ಹೆಚ್ಚು ಸಿಬ್ಬಂದಿ ಎತ್ತಂಗಡಿ; ಆರ್​ಟಿಒಗಳಲ್ಲೇ ಅತಿ ಹೆಚ್ಚು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts