More

    ಇನ್ಮುಂದೆ ಸಿನಿಮಾ ಪೈರಸಿ ಮಾಡುವವರಿಗೆ ಕಾದಿದೆ ಬಹು ದೊಡ್ಡ ಶಾಕ್​: ಟೆಲಿಗ್ರಾಂ ಮೇಲೆ ಖಾಕಿ ಕಣ್ಣು

    ಬೆಂಗಳೂರು: “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ” ಎಂಬ ಗಾದೆ ಮಾತು ಸಿನಿಮಾ ರಂಗದಲ್ಲಿ ಪೈರಸಿ ವಿಚಾರಕ್ಕೆ ಬಹಳ ಸೂಕ್ತವಾಗಿದೆ. ಕೋಟಿಗಟ್ಟಲೆ ಹಣ ವ್ಯಯಿಸಿ, ತಿಂಗಳುಗಟ್ಟಲೇ ದೇಶ-ವಿದೇಶ ಅಲೆದು ನಿರ್ಮಾಪಕರು ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ಆದರೆ, ಕೆಲ ಕಿಡಿಗೇಡಿಗಳು ಕೇವಲ ಒಂದೇ ದಿನದಲ್ಲಿ ಚಿತ್ರವನ್ನು ರೆಕಾರ್ಡ್​ ಮಾಡಿ ಅದರ ಲಿಂಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಿಬಿಡುತ್ತಾರೆ.

    ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕ ಪೈರಸಿ ಎಂಬ ಪೆಡಂಭೂತದಿಂದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುತ್ತಾರೆ. ಹೀಗಾಗಿ ಇದಕ್ಕೆ ಒಂದು ಕಠಿಣವಾದ ಕ್ರಮ ಜರುಗಲೇಬೇಕಿದೆ. ಇಲ್ಲವಾದಲ್ಲಿ ನಿರ್ಮಾಪಕ ಬಾಳು ಕತ್ತಲಲ್ಲಿ ಮುಳುಗುವುದರಲ್ಲಿ ನಿಶ್ಚಯವಿಲ್ಲ. ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪೈರಸಿ ಮಾಫಿಯಾ ಠಕ್ಕರ್ ಕೊಡಲು ಆರಂಭಿಸಿವೆ.

    ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಹೊಸ ಚಿತ್ರಗಳು ಪೈರಸಿಗೆ ತುತ್ತಾಗುತ್ತಿವೆ. ಕಿಡಿಗೇಡಿಗಳು ಕೃತ್ಯಕ್ಕೆ ಟೆಲಿಗ್ರಾಂ ತಾಣ ದೊಡ್ಡ ವೇದಿಕೆ ಆಗಿದೆ. ಹೊಸ ಚಿತ್ರದ ಸಾಕಷ್ಟು ಲಿಂಕ್​ಗಳು ಟೆಲಿಗ್ರಾಂನಲ್ಲಿ ಲಭ್ಯವಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಚಿತ್ರರಂಗ ಇದೀಗ ಪೈರಸಿ ವಿರುದ್ಧ ತೊಡೆತಟ್ಟಿದ್ದು, ಪ್ರಕರಣ ದಾಖಲಿಸಿದ್ದಾರೆ.

    ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಠಾಣೆಯಲ್ಲಿ ಪೈರಸಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಕರೊನಾ ಎರಡನೇ ಅಲೆಯ ಬಳಿಕ ಬಿಡುಗಡೆಯಾದ ಎಲ್ಲಾ ಕನ್ನಡ ಸಿನಿಮಾ ಪೈರಸಿಗೆ ತುತ್ತಾಗಿವೆ. ಯುವ ಸಿನಿಮಾಸ್ ಹೆಸರಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳು ಪೈರಸಿ ಆಗಿವೆ. ಕಳೆದ ವಾರ ರಿಲೀಸ್ ಆದ “ನಿನ್ನ ಸನಿಹಕೆ” ಸಿನಿಮಾ ಕೂಡ ಪೈರಸಿ ಆಗಿದೆ.

    ಈ ಕಳೆಕಂಡ ಹೊಸ ಚಿತ್ರಗಳು ಪೈರಸಿ ಆಗಿವೆ
    ಕನ್ನಡ ಚಿತ್ರಗಳು
    1. ನಿನ್ನ ಸನಿಹಕೆ (ಸೂರಜ್ ಗೌಡ ಹಾಗೂ ಧನ್ಯಾ ರಾಮ್ ಕುಮಾರ್ ಅಭಿನಯದ ಚಿತ್ರ)
    2) ಲಂಕೆ, (ಲೂಸ್ ಮಾದ ಯೋಗೇಶ್ ಅಭಿನಯದ ಚಿತ್ರ)
    3) ಕೃಷ್ಣ ಟಾಕೀಸ್, (ನಟ ಅಜಯ್ ರಾವ್ ಅಭಿನಯದ ಚಿತ್ರ)
    4) ಶಾರ್ದೂಲ, ( ನಟ ಚೇತನ್ ಚಂದ್ರ ಅಭಿನಯದ ಚಿತ್ರ)

    ಕನ್ನಡ ಚಿತ್ರಗಳ ಜತೆಗೆ ತೆಲುಗು, ತಮಿಳಿನಿಂದ ಕನ್ನಡಕ್ಕೆ ಡಬ್ ಆದ ಸಿನೆಮಾಗಳಿಗೂ ಪೈರಸಿ ಕಾಟ ಹೆಚ್ಚಾಗಿದೆ. ಸರೈಪೊಟ್ರು, ನಶಾ, ಪದ್ಮವ್ಯೂಹ, ಸ್ಪೈಡರ್ ಮ್ಯಾನ್, ಆ ಧ್ವನಿ, ಕಲ್ಯಾಣ ಮಂಟಪಂ, ಜಸ್ಟ್ ಮ್ಯಾರೀಡ್ ಚಿತ್ರಗಳು ಪೈರಸಿ ಆಗಿವೆ. ಓಟಿಪಿ ಫ್ಲಾಟ್ ಫಾರ್ಮ್​ನಲ್ಲಿ ರಿಲೀಸ್ ಆದ ವೆಬ್​ ಸಿರೀಸ್​ಗಳು ಕೂಡ ಪೈರಸಿಗೆ ತುತ್ತಾಗಿವೆ.

    ಹೀಗಾಗಿ ಪೈರಸಿ ಮಾಡಿ ಅಪ್ಲೋಡ್ ಮಾಡಿರೋ ಯುವ ಮೂವೀಸ್ ವಿರುದ್ಧ ಕನ್ನಡ ನಿರ್ಮಾಪಕ ದೂರು ನೀಡಿದ್ದಾರೆ. ಶಾರ್ದೂಲ ಸಿನಿಮಾ ನಿರ್ಮಾಪಕ ರೋಹಿತ್ ಎಂಬುವರು ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಐಟಿ ಆಕ್ಟ್ 84C, 66C, 66D , ಐಪಿಸಿ 420, 511 ಹಾಗೂ ಕಾಫಿರೈಟ್ಸ್ ಆಕ್ಟ್ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ. ಇತ್ತ ಸೈಬರ್ ಕ್ರೈಂ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಾಗುತ್ತಿದ್ದಂತೆ ಟೆಲಿಗ್ರಾಂನಲ್ಲಿ ಲಿಂಕ್ ಡಿಲೀಟ್ ಆಗಿದೆ. ಅಲ್ಲದೆ, ಯುವ ಮೂವೀಸ್ ಗ್ರೂಪ್ ಕೂಡ ಡಿಲೀಟ್‌ ಆಗಿದೆ.

    ಇನ್ನು ಸೈಬರ್​ ಕ್ರೈಂ ಪೊಲೀಸರು ಪೈರಸಿ ಮಾಫಿಯಾ ಬೆನ್ನು ಬಿದ್ದಿದೆ. ಕೋಟ್ಯಾಂತರ ಹಣ ಹಾಕಿ ಸಿನೆಮಾ ಮಾಡಲಾಗುತ್ತದೆ. ಸಾವಿರಾರು ಜನರಿಗೆ ಕನ್ನಡ ಚಿತ್ರರಂಗ ಊಟ ನೀಡ್ತಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರಿಗೆ ಪೈರಸಿ ಗ್ಯಾಂಗ್ ಪತ್ತೆಗೆ ಸೂಚಿಸುತ್ತೇನೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮೂರನೇ ವಿಶ್ವಯುದ್ಧಕ್ಕೆ ಏಲಿಯನ್​ಗಳ ತಯಾರಿ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುಎಸ್​ ಮಾಜಿ ಸೇನಾಧಿಕಾರಿ

    ಅಬ್ಬರದ ಪ್ರಚಾರ ಮಾಡಿದ್ರೂ ಬಿಜೆಪಿ ಅಭ್ಯರ್ಥಿ ಪಡೆದಿದ್ದು ಒಂದೇ ಮತ:​ ಕುಟುಂಬದ ವೋಟು ಬೀಳದೆ ಹೀನಾಯ ಸೋಲು..!

    ಅಮ್ಮನ ಸಾವಿನಿಂದ ತತ್ತರಿಸಿದ್ದ ಪ್ರಿಯತಮನಿಗಾಗಿ ಪ್ರೇಯಸಿ ತೆಗೆದುಕೊಂಡಳು ವಿಚಿತ್ರ ನಿರ್ಧಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts