More

    ಭೂತಕೋಲವು ಹಿಂದು ಸಂಸ್ಕೃತಿಗೆ ಸೇರುತ್ತದೆ ಎಂಬ ರಿಷಬ್ ಶೆಟ್ಟಿ ಹೇಳಿಕೆ ನಿಜವಲ್ಲ: ನಟ ಚೇತನ್​

    ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರಕ್ಕೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದಿನೇದಿನೆ ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಇದೀಗ ನಟ ಚೇತನ್​ ಚಿತ್ರದ ಕುರಿತು ಹೊಸ ಹೇಳಿಕೆಯನ್ನು ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.

    ರಿಷಬ್​ ಶೆಟ್ಟಿಯವರು ಮಾಧ್ಯಮ ಸಂದರ್ಶನ ನೀಡುವಾಗ ಕಾಂತಾರ ಸಿನಿಮಾದಲ್ಲಿ ಬಳಸಿರುವ ಭೂತಕೋಲ ಆಚರಣೆಯು ಹಿಂದು ಸಂಸ್ಕೃತಿಯ ಆಚರಣೆ ಎಂದು ಹೇಳಿಕೆ ನೀಡಿದ್ದರು. ಇದನ್ನು ನಟ ಚೇತನ್​ ವಿರೋಧಿಸಿದ್ದಾರೆ.

    ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಚೇತನ್​, ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದು ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಆದರೆ, ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದು ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದಿದ್ದಾರೆ.

    ಇದೀಗ ಚೇತನ್​ ಹೇಳಿರುವ ಮಾತು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಪರ-ವಿರೋಧ ಚರ್ಚೆಗಳಾಗುತ್ತಿವೆ. ಚೇತನ್​ ಹೇಳಿಕೆಗೆ ರಿಷಬ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

    ಇನ್ನು ಕಾಂತಾರ ಸಿನಿಮಾ ವಿಚಾರಕ್ಕೆ ಬರುವುದಾದರೆ, ದಿನಕ್ಕೊಂದು ಹೊಸ ಹೆಗ್ಗಳಿಕೆಗೆ ಪಾತ್ರವಾಗುವುದರ ಜತೆಗೆ ಹೊಸಹೊಸ ದಾಖಲೆಗಳನ್ನು ಕಾಂತಾರ ಮಾಡುತ್ತಿದೆ. ಇದೀಗ ಇದುವರೆಗೂ ಯಾವೊಂದು ಕನ್ನಡ ಚಿತ್ರವೂ ಮಾಡದಂತಹ ದಾಖಲೆಯನ್ನು ‘ಕಾಂತಾರ’ ಮಾಡಿದೆ. ಐಎಂಡಿಬಿ ಗೊತ್ತಿರಬಹುದು. ಇಂಟರ್​ನೆಟ್ ಮೂವಿ ಡೇಟಾ ಬೇಸ್ ಎಂಬ ಈ ವೆಬ್​ಸೈಟ್​ನಲ್ಲಿ ಚಿತ್ರಗಳ ಮಾಹಿತಿ ಸಿಗುತ್ತದೆ. ಇನ್ನು, ಓದುಗರೇ ತಮಗ್ಯಾವ ಚಿತ್ರ ಇಷ್ಟ ಎಂದು ರೇಟಿಂಗ್ ಕೊಡಬಹುದು. ಇದೀಗ ‘ಕಾಂತಾರ’ ಚಿತ್ರಕ್ಕೆ ಪ್ರೇಕ್ಷಕರು ಅತೀ ಹೆಚ್ಚು ರೇಟಿಂಗ್ ಕೊಟ್ಟಿದ್ದು, ಭಾರತದ ಟಾಪ್ 250 ಜನ ಮೆಚ್ಚಿದ ಚಿತ್ರಗಳ ಸ್ಥಾನದಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.

    ಐಎಂಡಿಬಿಯಲ್ಲಿ ಕಾಂತಾರ ನಂ.1

    ಉತ್ತರ ಕರ್ನಾಟಕಕ್ಕೂ ಬಂದ ಕರಾವಳಿಯ ಕೊರಗಜ್ಜ; ಹಾವೇರಿಯಲ್ಲಿ ಪ್ರತಿಷ್ಠಾಪನೆ

    ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಚಿತ್ರೀಕರಿಸಿದ್ದಕ್ಕೆ ಯುವಕರಿಬ್ಬರನ್ನು ಕೂಡಿಹಾಕಿ ನರ್ಸ್​ಗಳಿಂದ ಥಳಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts