More

    ಆರ್ ಆರ್ ನಗರ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ನಾಮಪತ್ರ ಸಲ್ಲಿಕೆ

    ಬೆಂಗಳೂರು: ಚುನಾವಣಾ ಕಾವು ಹೆಚ್ಚಿಸಿಕೊಂಡಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು, ಮುನಿರತ್ನ ಅವರಿಗೆ ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿ.ಫಾರಂ ನೀಡುವ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿದ್ದರು. ಬಿ ಫಾರಂ ಅನ್ನು ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುನಿರತ್ನ ಅವರಿಗೆ ಹಸ್ತಾಂತರಿಸಲಾಯಿತು.

    ಆರ್ ಆರ್ ನಗರದ ಚುನಾವಣಾ ಕಚೇರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಮುನಿರತ್ನ ಆಗಮಿಸಿದ್ದರು. ಅವರೊಂದಿಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಚಿವ ಆರ್.ಅಶೋಕ್​ ಸಾಥ್ ನೀಡಿದ್ದರು. ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವ ವೇಳೆ ಮೂವರಿಗೆ ಮಾತ್ರವೇ ಕಚೇರಿ ಒಳಕ್ಕೆ ಪ್ರವೇಶಾವಕಾಸ ಇದ್ದ ಕಾರಣ, ಮುನಿರತ್ನ ಅವರೊಂದಿಗೆ ಅಶ್ವತ್ಥನಾರಾಯಣ ಮತ್ತು ಅಶೋಕ್ ಜತೆಗಿದ್ದರು.ಇನ್ನುಳಿದಂತೆ, ಸಚಿವರಾದ ಸುಧಾಕರ್, ಎಸ್ ಟಿ ಸೋಮಶೇಖರ್ ಹಾಗೂ ಮಾಜಿ ಕಾರ್ಪೊರೇಟರ್ಸ್ ಚುನಾವಣಾಧಿಕಾರಿ ಕಚೇರಿ ಹೊರಗೆ ನಿಂತು ಬೆಂಬಲ ವ್ಯಕ್ತಪಡಿಸಿದರು.

    ಇದನ್ನೂ ಓದಿ: ನ್ಯಾಯಮೂರ್ತಿ ರಮಣ ವಿರುದ್ಧ ಆಂಧ್ರ ಸಿಎಂ ದೂರು; ಸುಪ್ರೀಂಕೋರ್ಟ್ ಮುಂದಿರುವ ಆಯ್ಕೆಗಳೇನು?

    ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೂಡ ನಾಮಪತ್ರ ಸಲ್ಲಿಕೆಗೆ ಸ್ಥಳಕ್ಕೆ ಆಗಮಿಸಿದ್ದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮುನಿರತ್ನ ಪರ ಘೋಷಣೆ ಕೂಗಿದ್ದು ಕೇಳಿಬಂತು. ಎರಡು ಕಡೆಯ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದರಿಂದ ಕೋವಿಡ್ ನಿಯಮ ಗಾಳಿಗೆ ತೂರಲ್ಪಟ್ಟಿತ್ತು. (ದಿಗ್ವಿಜಯ ನ್ಯೂಸ್)

    ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರ ನಿರ್ಬಂಧ ಕೋರಿದ ಪಿಐಎಲ್: ಸರ್ಕಾರಕ್ಕೆ ನೋಟಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts