More

    ಕೈ-ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಕೊಪ್ಪಳ: ಲೋಕಸಭೆ ಚುನಾವಣೆಗೆ ಶುಕ್ರವಾರ ಅಧಿಸೂಚನೆ ಪ್ರಟಕವಾಗಿದೆ. ಮೊದಲ ದಿನವೇ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​, ಬಿಜೆಪಿ ಅಭ್ಯರ್ಥಿಗಳು, ಎಸ್​ಯುಐ(ಕಮ್ಯೂನಿಷ್ಟ) ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಚುನಾವಣಾಧಿಕಾರಿ ನಲಿನ್​ ಅತುಲ್​ಗೆ ನಾಮಪತ್ರ ಸಲ್ಲಿಸಿದರು.

    ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್​, ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹಾಗೂ ಸೋಷಿಯಲಿಸ್ಟ್​ ಯೂನಿಟಿ ಸೆಂಟರ್​ ಆಫ್​ ಇಂಡಿಯಾ (ಕಮ್ಯುನಿಸ್ಟ್​) ಅಭ್ಯರ್ಥಿ ಶರಣಪ್ಪ ತಲಾ ಎರಡು ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಮಹಿಬುಬಸಾಬ ಒಂದು ಒಟ್ಟು ನಾಲ್ವರು ಅಭ್ಯರ್ಥಿಗಳು 7ನಾಮಿನೇಷನ್​ ಸಲ್ಲಿಸಿದರು.

    ಕೈ-ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಮೊದಲು ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್​ ವಿಧಾನ ಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್​, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಜೆಡಿಎಸ್​ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಪ್ರಮುಖರಾದ ಡಾ.ಕೆ.ಜಿ.ಕುಲಕರ್ಣಿ, ಡಾ.ಮಹೇಶ ಗೋವನಕೊಪ್ಪ, ರಾಜು ಬಾಕಳೆ ಇತರರೊಡನೆ ಆಗಮಿಸಿ ಮಧ್ಯಾಹ್ನ 12.15ಕ್ಕೆ ನಾಮಪತ್ರ ಸಲ್ಲಿಕೆ ಮಾಡಿದರು.

    ಕೈ-ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಬೆಳಗ್ಗೆಯೇ ಸ್ವಗ್ರಾಮ ಹಿಟ್ನಾಳದಿಂದ ಮನೆ ದೇವತೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದರು. ಬಳಿಕ ಮಧ್ಯಾಹ್ನ 1.30ಕ್ಕೆ ಚುನಾಣಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಸಿರಗುಪ್ಪ ಶಾಸಕ ನಾಗರಾಜ, ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ.ನಾಗರಳ್ಳಿ, ಪ್ರಮುಖರಾದ ಆಸ್​ೀ ಅಲಿ, ಗೂಳಪ್ಪ ಹಲಗೇರಿ ಇತರರಿದ್ದರು.

    ಎಸ್​ಯುಸಿಐ (ಕಮ್ಯೂನಿಷ್ಟ್​) ಪಕ್ಷದ ಅಭ್ಯರ್ಥಿ ಶರಣಪ್ಪ ಲೇಬರ್​ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ಮೂಲಕ ಆಗಮಿಸಿದರು. ಬಳಿಕ ಆಟೋದಲ್ಲಿ ಡಿಸಿ ಕಚೇರಿವರೆಗೆ ಆಗಮಿಸಿ ಸೂಚಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts