More

    ಪುಷ್ಪ..ಪುಷ್ಪರಾಜ್​ ನಾನು ಬರೆಯೋದೇ ಇಲ್ಲ! SSLC ವಿದ್ಯಾರ್ಥಿಯ ಉತ್ತರ ಪತ್ರಿಕೆ ನೋಡಿ ಶಿಕ್ಷಕರೇ ಶಾಕ್​

    ಹೈದರಾಬಾದ್​: ಟಾಲಿವುಡ್ ಸಿನಿಮಾ ‘ಪುಷ್ಪ: ದಿ ರೈಸ್’ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ ಮತ್ತು ಅದರ ಡೈಲಾಗ್‌ಗಳು ಹಾಗೂ ಸಿಗ್ನೇಚರ್​ ಸ್ಟೆಪ್ಸ್​ ಆಗಾಗ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್​ನಲ್ಲಿರುತ್ತವೆ. ಅದರಲ್ಲೂ ಅಲ್ಲು ಅರ್ಜುನ್ ಅವರ ತಗ್ಗೆದೆಲೆ ಡೈಲಾಗ್​ ಮಾತ್ರ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿದೆ. ಪ್ರಪಂಚದಾದ್ಯಂತದ ಜನರು ಅದರ ಅನುಸರಣೆಯನ್ನು ಮಾಡಿದ್ದಾರೆ.

    ಯುವಕರಿಂದ ಹಿಡಿದು ವಯಸ್ಸಾದ ನಾಗರಿಕರು ಕೂಡ ತೆಗ್ಗೆದೆಲೆ ಡೈಲಾಗ್​ ಹೊಡೆದು ಸಿಗ್ನೆಚರ್​ ಸ್ಟೈಲ್ ಕಾಪಿ ಮಾಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದರೂ ಸಿನಿಮಾ ಮೇಲಿನ ಕ್ರೇಜ್​ ಮಾತ್ರ ಇನ್ನು ಕಡಿಮೆ ಆಗಿಲ್ಲ.

    ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಸೆಎಸ್ಸೆಲ್ಸಿ ಪರೀಕ್ಷೆಯಲ್ಲೂ ತೆಗ್ಗೆದೆಲೆ ಡೈಲಾಗ್​ ಸದ್ದು ಮಾಡಿದೆ. ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಬರೆಯುವ ಬದಲು ಪುಪ್ಪ ಚಿತ್ರದ ಡೈಲಾಗ್​ ಅನ್ನು ತನ್ನದೇ ರೀತಿಯಲ್ಲಿ ಬರೆದಿದ್ದಾನೆ. ಪುಷ್ಪ…ಪುಷ್ಪರಾಜ್​.. ಅಪುನ್​ ಲಿಖೇಗಾ ನಹಿ ಎಂದು ಬರೆದಿದ್ದು, ನಾನು ಪರೀಕ್ಷೆ ಬರೆಯೋದೇ ಇಲ್ಲ ಎಂಬುದು ಅದರರ್ಥವಾಗಿದೆ.

    ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಫೋಟೋವನ್ನು ಶಿಕ್ಷಕರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅನೇಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. (ಏಜೆನ್ಸೀಸ್​)

    ಹುಬ್ಬಳ್ಳಿಯಲ್ಲಿ ಲವ್​ ಜಿಹಾದ್​ ಕೇಸ್​ಗೆ ಸ್ಫೋಟಕ ತಿರುವು: ಮುತಾಲಿಕ್​ ಕೊಟ್ಟ ಗಡುವಿನೊಳಗೇ ಠಾಣೆಗೆ ಬಂದ ಯುವತಿ

    ಮದ್ಯ ಖರೀದಿಸಲು ಹಣಕ್ಕಾಗಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳನಿಗೆ ಕ್ಷಣಾರ್ಧದಲ್ಲೇ ಬೆನ್ನತ್ತಿದ ಕರ್ಮಫಲ!

    5 ದೋಸೆ 2 ಮೊಟ್ಟೆಗೆ 184 ರೂ.! ದುಬಾರಿ ಬ್ರೇಕ್​ಫಾಸ್ಟ್​ ವಿರುದ್ಧ ದೂರು ಕೊಟ್ಟ MLAಗೆ ಜಿಲ್ಲಾಧಿಕಾರಿಯಿಂದ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts