More

    ನಿಲ್ಲದ ದರ ಏರಿಕೆ ಬರೆ: ಯುಗಾದಿ ಹಬ್ಬದಂದು ಮತ್ತೆ ದುಬಾರಿಯಾಯ್ತು ಇಂಧನ, ಇಂದಿನ ದರ ಹೀಗಿದೆ…

    ನವದೆಹಲಿ: ದೇಶದ ಜನತೆಗೆ ಸತತ ಇಂಧನ ದರ ಏರಿಕೆಯ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಯುಗಾದಿ ಹಬ್ಬದ ದಿನವಾದ ಇಂದು ಕೂಡ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿದ್ದು, ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ದರ ಏರಿಕೆಯು ನಿರಾಸೆ ಮೂಡಿಸಿದೆ.

    ಕೇವಲ 12 ದಿನಗಳಲ್ಲೇ 10ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಆಯಿಲ್​ ಕಂಪನಿಗಳು ಗ್ರಾಹಕರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ನೀಡುತ್ತಿವೆ. ಇಂದು (ಏ.2) ಪೆಟ್ರೋಲ್ ಮತ್ತು ಡೀಸೆಲ್​ ಕ್ರಮವಾಗಿ 80​ ಪೈಸೆಯಷ್ಟು ಏರಿಕೆಯಾಗಿದೆ. ಕಳೆದ 12 ದಿನಗಳಲ್ಲಿ ಒಟ್ಟು 7.20 ರೂ. ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಬದುಕು ಭಾರವಾಗಿದೆ.

    ಮಾರ್ಚ್​ 22 ರಿಂದ ಆರಂಭವಾದ ಇಂಧನ ದರ ಏರಿಕೆ ಬಿಸಿಗೆ ಮಾ. 24 ಮತ್ತು ಏಪ್ರಿಲ್​ 1ರಂದು ಮಾತ್ರ ಬಿಡುವ ನೀಡಲಾಗಿತ್ತು. ಉಳಿದ ಎಲ್ಲ ದಿನವು ಬೆಲೆ ಏರಿಕೆ ಆಗಿದೆ. ಇಂದು ಕೂಡ ಬೆಲೆ ಏರಿಕೆಯಾಗಿದೆ. ನಾಳೆಯು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಒಂದೆಡೆ ಯೂಕ್ರೇನ್​-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

    ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ

    ಬೆಂಗಳೂರು
    ಪೆಟ್ರೋಲ್​: ಪ್ರತಿ ಲೀಟರ್​ಗೆ 108.06 ರೂಪಾಯಿ
    ಡೀಸೆಲ್​: ಪ್ರತಿ ಲೀಟರ್​ಗೆ 92.09 ರೂಪಾಯಿ

    ದೆಹಲಿ
    ಪೆಟ್ರೋಲ್​: 102.61 ರೂಪಾಯಿ
    ಡೀಸೆಲ್​: 93.87

    ಮುಂಬೈ
    ಪೆಟ್ರೋಲ್​: 117.52 ರೂ.
    ಡೀಸೆಲ್​: 101.74

    ಚೆನ್ನೈ
    ಪೆಟ್ರೋಲ್​: 108.29 ರೂ.
    ಡೀಸೆಲ್​: 98.36

    ಕೊಲ್ಕತ
    ಪೆಟ್ರೋಲ್​: 112.12 ರೂ.
    ಡೀಸೆಲ್​: 97.02

    ಹೈದರಾಬಾದ್​
    ಪೆಟ್ರೋಲ್​: 116.12 ರೂ.
    ಡೀಸೆಲ್​: 102.31

    ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. 12 ದಿನದಲ್ಲಿ 10ನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.

    ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. (ಏಜೆನ್ಸೀಸ್​)

    ಗುಪ್ತಾಂಗದ ಫೋಟೋ ಕಳುಹಿಸಿ ಎಂದವನಿಗೆ ಫೋಟೋವೊಂದನ್ನು ಸೆಂಡ್​ ಮಾಡಿ ಶಾಕ್​ ಕೊಟ್ಟ ಯಶಿಕಾ!

    ದ್ವಾದಶ ರಾಶಿಗಳ ವರ್ಷ ಭವಿಷ್ಯ: ಶ್ರೀ ಶುಭಕೃತದಿಂದ ಶ್ರೀ ಶೋಭಾಕೃತನಾಮ ಸಂವತ್ಸರದ ಯುಗಾದಿವರೆಗೆ

    ಏ.8ಕ್ಕೆ ಡೇಂಜರಸ್ ಬಿಡುಗಡೆ; ಕೋರ್ಟ್ ನೀಡಿದ ಆದೇಶವೇ ಸ್ಫೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts