More

    ವಿಆರ್​ಎಲ್ ಕಂಪನಿ ಹೆಸರಿನಲ್ಲಿ ಕೊರಿಯರ್ ಪಡೆದು ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

    ಬೆಂಗಳೂರು: ವಾಹನನಗಳನ್ನು ದೂರದ ಊರಿಗೆ ಸಾಗಿಸುವುದಾಗಿ ಹೇಳಿ ವಿಆರ್​ಎಲ್ ಕಂಪನಿ ಹೆಸರಿನಲ್ಲಿ ಕೊರಿಯರ್ ಪಡೆದು ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್​ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರಲ್ಲಿ ಪುರನ್​ ಸಿಂಗ್​ ಚೌವ್ಹಾಣ್​ (25), ನರೇಂದ್ರ (32) ಮತ್ತು ಧರ್ಮೇಂದರ್​ (21) ರಾಜಸ್ಥಾನ ಮೂಲದವರು. ಉಳಿದ ಮತ್ತೊರ್ವ ಆರೋಪಿ ಧರ್ಮವೀರ್​ (24) ಹರಿಯಾಣದವನು. ಇವರು ದೂರದ ಊರಿಗೆ ವಾಹನಗಳನ್ನು ಕೊರಿಯರ್​ ಮಾಡುವುದಾಗಿ ಹೇಳಿ ಗೂಗಲ್​ ವೆಬ್​ಸೈಟ್​ನಲ್ಲಿ ಜಾಹೀರಾತುಗಳನ್ನು ನೀಡಿ, ಹಣ ಪಡೆದು ವಂಚನೆ ಮಾಡುತ್ತಿದ್ದರು.

    ವಿವರಣೆಗೆ ಬರುವುದಾರೆ, ಜೂನ್​ 22ರಂದು ಸಿ.ಇ.ಎನ್​ ಠಾಣೆಯಲ್ಲಿ ಒಂದು ದೂರು ದಾಖಲಾಗುತ್ತದೆ. ಅದರಲ್ಲಿ ದೂರುದಾರ, ರಾಯಲ್​ ಎನ್​ಫೀಲ್ಡ್​ ಬೈಕ್​ ಅನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಗಿಸುವ ಸಲುವಾಗಿ ಗೂಗಲ್​ನಲ್ಲಿ ಯಾವುದಾದರೂ ಮಾಹಿತಿ ಸಿಗಬಹುದು ಎಂದು ಹುಡುಕಾಡುತ್ತಾರೆ. ಈ ವೇಳೆ ಅವರ ಕಣ್ಣಿಗೆ ಒಂದು ಜಾಹೀರಾತು ಕಾಣಿಸುತ್ತದೆ. ಅದರಲ್ಲಿರುವ ಮೊಬೈಲ್​ ನಂಬರ್​ ಪಡೆದು ಕರೆ ಮಾಡುತ್ತಾರೆ. ಬೈಕ್​ ಸಾಗಿಸಲು ಆರೋಪಿಗಳು 4000 ಸಾವಿರ ರೂಪಾಯಿ ಹಣ ಕೇಳುತ್ತಾರೆ. ಹಣವನ್ನು ನೀಡಿದ ಬಳಿಕ ಕೊರಿಯರ್​ ಕಂಪನಿಯ ಸಿಬ್ಬಂದಿಯ ಸೋಗಿನಲ್ಲಿ ಬಂದ ಆರೋಪಿಗಳು ದೂರುದಾರನ ಮನೆಯಿಂದ ಬೈಕ್​ ಪ್ಯಾಕ್​ ಮಾಡಿ, ತೆಗೆದುಕೊಂಡು ಹೋಗುತ್ತಾರೆ.

    ಆದರೆ, ಬೈಕ್​ ಡೆಲಿವರಿ ಆಗಿದ್ದನ್ನು ನೋಡಿ ದೂರುದಾರ ಮತ್ತೆ ಅದೇ ಫೋನ್​ ನಂಬರಿಗೆ ಕರೆ ಮಾಡುತ್ತಾರೆ. ಈ ವೇಳೆ ತಮ್ಮ ವರಸೆ ಬದಲಿಸಿದ ಆರೋಪಿಗಳು ಬೈಕ್​ ಬೇಕೆಂದರೆ, ಹೆಚ್ಚಿನ ಹಣ ಕೊಡುವಂತೆ ಬೇಡಿಕೆ ಇಡುತ್ತಾರೆ. ಈ ವೇಳೆ ಮತ್ತೆ ಹಣ ಕೊಟ್ಟರೂ ಬೈಕ್​ ಮಾತ್ರ ವಾಪಸ್​ ಕೊಡುವುದಿಲ್ಲ. ಬದಲಾಗಿ ಪದೇಪದೆ ಹಣಕ್ಕಾಗಿ ಬೇಡಿಕೆ ಇಡುತ್ತಿರುತ್ತಾರೆ. ಇದಾದ ಬಳಿಕ ಪೊಲೀಸ್​ ಠಾಣೆಗೆ ತೆರಳಿದ ಸಂತ್ರಸ್ತ ಆರೋಪಿಗಳ ವಿರುದ್ಧ ದೂರು ದಾಖಲಿಸುತ್ತಾರೆ. 20 ದಿನಗಳಾದರೂ ಇನ್ನು ಬೈಕ್​ ಅನ್ನು ತಲುಪಿಸಿಲ್ಲ ಎಂದು ಪ್ರಕರಣ ದಾಖಲಿಸುತ್ತಾರೆ.

    ಇದಾದ ಬಳಿಕ ತನಿಖೆಗೆ ಇಳಿಯುವ ಪೊಲೀಸರು ಎಲೆಕ್ಟ್ರಾನಿಕ್​ ಸಿಟಿ ಬಳಿ ನಾಲ್ವರನ್ನು ಪತ್ತೆಮಾಡಿ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಳ್ಳುತ್ತಾರೆ. ಹೆಸರಾಂತ ಕೋರಿಯರ್​ ಕಂಪನಿ ವಿಆರ್​ಎಲ್​ ಹೆಸರಿನಲ್ಲಿ ಗೂಗಲ್​ನಲ್ಲಿ ಜಾಹೀರಾತು ನೀಡಿ, ಅದರಲ್ಲಿ ತಮ್ಮ ಮೊಬೈಲ್​ ನಂಬರ್​ ನಮೂದಿಸುತ್ತಿದ್ದರು. ಸಾರ್ವಜನಿಕರು ಕೋರಿಯರ್ ಕಳುಹಿಸಲು ಗೂಗಲ್​​ನಲ್ಲಿ ಸರ್ಚ್ ಮಾಡಿದಾಗ ಆರೋಪಿಗಳ ಮೊಬೈಲ್ ನಂಬರ್​ಗಳನ್ನ ನೋಡಿ ಅವರನ್ನು ಸಂಪರ್ಕಿಸಿದಾಗ, ತಾವು ಡೆಲಿವರಿ ನೀಡುವುದಾಗಿ ನಂಬಿಸುತ್ತಿದ್ದರು. ಮನೆಗೆ ಬಂದು ವಾಹನಗಳನ್ನು ಪಡೆದು, ಕೇಳಿದಷ್ಟು ಹಣ ಕೊಡುವವರೆಗೂ ವಾಹನವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಬೇಕಾದಷ್ಟು ಹಣ ಬಂದಾಗ ವಾಹನವನ್ನು ನಿಜವಾದ ಕೋರಿಯರ್​ ಕಂಪನಿ ಬಳಿ ಬಿಟ್ಟು ಬರುತ್ತಿದ್ದರು. ಆದರೆ, ವಾಹನ ಡೆಲಿವರಿ ಆದಾಗ ಮತ್ತೆ ಹಣ ನೀಡಿ ತಮ್ಮ ವಾಹನವನ್ನು ಪಡೆಯಬೇಕಾಗಿತ್ತು.

    ಇದೀಗ ಮೋಸದ ಜಾಲವನ್ನು ಸಿ.ಇ.ಎನ್​ ಠಾಣಾ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಸಾರ್ವಜನಿಕರು ಗೂಗಲ್​ನಲ್ಲಿ ಮಾಹಿತಿ ಪಡೆಯುವಾಗ ತುಂಬಾ ಎಚ್ಚರಿಕೆಯನ್ನು ವಹಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ತಪ್ಪು ಜಾಹೀರಾತುಗಳಿಂದ ಇಷ್ಟೆಲ್ಲ ಪಾಡು ಪಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ನೆಟ್​ಫ್ಲಿಕ್ಸ್​ಗೆ ಮತ್ತೊಮ್ಮೆ ಆಘಾತ: 2ನೇ ತ್ರೈಮಾಸಿಕದಲ್ಲಿ 9,70,000 ಸಬ್​ಸ್ಕ್ರೈಬರ್ಸ್ ಕಳೆದುಕೊಂಡ ಕಂಪನಿ

    ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ

    ನಾಡಹಬ್ಬಕ್ಕೆ ಮರುಕಳಿಸಲಿದೆ ಗತವೈಭವ: ಮೈಸೂರು ದಸರಾ ಅದ್ದೂರಿ ಆಚರಣೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts