More

    ಹುಬ್ಬಳ್ಳಿಗೆ ಆಗಮಿಸಿದ ಎನ್​ಎಸ್​ಜಿಯ ಸುದರ್ಶನ ಭಾರತ ಪರಿಕ್ರಮ ಬ್ಲ್ಯಾಕ್ ಕ್ಯಾಟ್ ಕಾರು ರ‍್ಯಾಲಿ

    ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ವತಿಯಿಂದ ಕೈಗೊಂಡಿರುವ ಸುದರ್ಶನ ಭಾರತ ಪರಿಕ್ರಮ ಬ್ಲ್ಯಾಕ್ ಕಾಟ್ ಕಾರು ರ‍್ಯಾಲಿ ಇಂದು ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿತು.

    ಈ ವಿಶೇಷ ರ‍್ಯಾಲಿಗೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೆಹಲಿಯ ಕೆಂಪು ಕೋಟೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಚಾಲನೆ ನೀಡಿದ್ದರು. ದೆಹಲಿಯಲ್ಲಿ ಆರಂಭವಾದ ರ‍್ಯಾಲಿ ದೇಶದ 12 ರಾಜ್ಯಗಳ 18 ನಗರದಲ್ಲಿ ಸಂಚರಿಸಲಿದೆ. ಚೆನ್ನೈ, ಬೆಂಗಳೂರು ಬಳಿಕ ಹುಬ್ಬಳ್ಳಿಗೆ ಆಗಮಿಸಿದ್ದ ತಂಡವನ್ನು ಪೊಲೀಸ್ ಆಯುಕ್ತ ಲಾಭೂರಾಮ ಚನ್ನಮ್ಮ ವೃತ್ತದಲ್ಲಿ ಸ್ವಾಗತಿಸಿದರು. ಬಳಿಕ ಈ ತಂಡ ಮುಂಬೈ ಕಡೆ ಪ್ರಯಾಣ ಬೆಳೆಸಿತು.

    ಹುಬ್ಬಳ್ಳಿಗೆ ಆಗಮಿಸಿದ ಎನ್​ಎಸ್​ಜಿಯ ಸುದರ್ಶನ ಭಾರತ ಪರಿಕ್ರಮ ಬ್ಲ್ಯಾಕ್ ಕ್ಯಾಟ್ ಕಾರು ರ‍್ಯಾಲಿ

    ಎನ್​ಎಸ್​ಜಿಯ 12 ಅಧಿಕಾರಿಗಳು ಮತ್ತು 35 ಕಮಾಂಡೋಗಳು ಸಿಐಐ ಮತ್ತು ಟಾಟಾ ಮೋಟಾರ್ಸ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿ 15 ಎಸ್​ಯುವಿ (ಟಾಟಾ ಹರಿಯರ್ಸ್)​ ಗಳೊಂದಿಗೆ ಭಾಗವಹಿಸಿದ್ದಾರೆ.

    ಈ ರ‍್ಯಾಲಿಯು ಕಾಕೋರಿ ಸ್ಮಾರಕ (ಲಖನೌ), ಭಾರತ್ ಮಾತಾ ಮಂದಿರ (ವಾರಣಾಸಿ), ನೇತಾಜಿ ಭವನ (ಬ್ಯಾರಕ್‌ಪೋರ್), ಸ್ವರಾಜ್ ಆಶ್ರಮ (ಭುವನೇಶ್ವರ್​), ತಿಲಕ್​ ಘಾಟ್​ (ಚೆನ್ನೈ), ಫ್ರೀಡಂ ಪಾರ್ಕ್ (ಬೆಂಗಳೂರು), ಮಣಿ ಭವನ್​/ಆಗಸ್ಟ್​ ಕ್ರಾಂತಿ ಮೈದಾನ್​ (ಮುಂಬೈ), ಸಬರಮತಿ ಆಶ್ರಮ (ಅಹಮದಾಬಾದ್)ಗಳಿಗೆ ಭೇಟಿ ನೀಡಿ, 29 ದಿನಗಳ ನಂತರ ದೆಹಲಿಗೆ ಮರಳಲಿದೆ. ಅ. 30 ರಂದು ನವದೆಹಲಿಯ ಚಾಣಕ್ಯಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ‘ಫ್ಲ್ಯಾಗ್ ಇನ್’ ಮಾಡಲಾಡುತ್ತದೆ.

    ಹುಬ್ಬಳ್ಳಿಗೆ ಆಗಮಿಸಿದ ಎನ್​ಎಸ್​ಜಿಯ ಸುದರ್ಶನ ಭಾರತ ಪರಿಕ್ರಮ ಬ್ಲ್ಯಾಕ್ ಕ್ಯಾಟ್ ಕಾರು ರ‍್ಯಾಲಿ

    ಮೇಲಿನವುಗಳನ್ನು ಹೊರತುಪಡಿಸಿ, ಎಲ್ಲಾ ಸಿಎಪಿಎಫ್‌ಗಳಿಂದ ಒಟ್ಟು 750 ಸೈಕ್ಲಿಸ್ಟ್‌ಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಎಲ್ಲಡೆ ಹರಡಲು ಸೈಕಲ್ ರ‍್ಯಾಲಿಯನ್ನು ಮೂಲಕ ದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡಲಾಗಿದೆ. (ಏಜೆನ್ಸೀಸ್​)

    ನನ್ನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ನಮ್ಮ ಕುಟುಂಬದಿಂದ ಕೈತಪ್ಪಿ ಹೋಗುತ್ತಿದ್ದಾರೆ, ದಯವಿಟ್ಟು ಉಳಿಸಿಕೊಡಿ…

    ಕಚೇರಿಯಲ್ಲಿ ಯಾರು ಇಲ್ಲದ ರಾತ್ರಿ ಮಂಗ್ಳೂರಿನ ಖ್ಯಾತ ವಕೀಲ ಮಾಡಿದ ದುಷ್ಕೃತ್ಯ ಬಿಚ್ಚಿಟ್ಟ ವಿದ್ಯಾರ್ಥಿನಿ..!

    ಇಂಡೋ-ಪಾಕ್​ ಕ್ರಿಕೆಟ್​ ಕದನಕ್ಕೆ ಕ್ಷಣಗಣನೆ: ಇಡೀ ದಿನ ಕಾಣೆಯಾಗ್ತಾರಂತೆ ಸಾನಿಯಾ ಮಿರ್ಜಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts