More

    ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ… ಕಾನ್​ ಚಿತ್ರೋತ್ಸವದಲ್ಲಿ ಇದ್ದಕ್ಕಿದ್ದಂತೆ ಬೆತ್ತಲಾದ ಯೂಕ್ರೇನಿಯನ್​ ಮಹಿಳೆ!

    ಪ್ಯಾರಿಸ್​: ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಕಾನ್​ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯೂಕ್ರೇನಿಯನ್ ಪ್ರತಿಭಟನಾಗಾರ್ತಿಯೊಬ್ಬಳು ಉಟ್ಟ ಬಟ್ಟೆಯನ್ನು ಕಿತ್ತೆಸೆದು ಅತಿಥಿಗಳು ನಡುವೆಯೇ ಬೆತ್ತಲಾಗಿ ಪ್ರತಿಭಟಿಸಿದ ಘಟನೆ ನಡೆದಿದೆ.

    ಪ್ರತಿಷ್ಠಿತ ಈವೆಂಟ್‌ನ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‌ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಯೂಕ್ರೇನಿಯನ್​ ಮಹಿಳೆ ಪ್ರತಿಭಟನೆಯನ್ನು ನಡೆಸಿದರು. ರೆಡ್ ಕಾರ್ಪೆಟ್​ ಗೌರವದ ಸಂದರ್ಭದಲ್ಲಿ ಬಟ್ಟೆ ಕಿತ್ತೆಸೆದು ಬೆತ್ತಲಾಗಿ ಎಲ್ಲರ ಮಧ್ಯ ಅಪರಿಚಿತ ಪ್ರತಿಭಟನಾಗಾರ್ತಿ ಬಂದು ನಿಂತು ಕೂಗಾಡಲು ಶುರು ಮಾಡಿದಳು. ಆಕೆಯ ಎದೆಯ ಮೇಲೆ ಯೂಕ್ರೇನ್​ ಧ್ವಜದ ನೀಲಿ ಮತ್ತು ಹಳದಿ ಬಣ್ಣಗಳಲ್ಲಿ “ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ” ಎಂಬ ಸಂದೇಶ ಬರೆಯಲಾಗಿತ್ತು.

    ಮಹಿಳೆಯ ಕಾಲುಗಳು ಮತ್ತು ತೊಡೆಯಲ್ಲಿ ಕೆಂಪು ಬಣ್ಣದಲ್ಲಿ ಸಹ ಚಿತ್ರಿಸಲಾಗಿತ್ತು. ಮಹಿಳೆ ಕೂಗಾಡುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‌ಗಳು ಬಹು ಬೇಗನೆ ಆಕೆಯನ್ನು ಸುತ್ತುವರಿದು ರೆಡ್ ಕಾರ್ಪೆಟ್‌ನಿಂದ ಕೆಳಗಿಳಿಸಿದರು.

    ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ... ಕಾನ್​ ಚಿತ್ರೋತ್ಸವದಲ್ಲಿ ಇದ್ದಕ್ಕಿದ್ದಂತೆ ಬೆತ್ತಲಾದ ಯೂಕ್ರೇನಿಯನ್​ ಮಹಿಳೆ!

    ಈ ವರ್ಷದ ಕಾನ್​ ಉತ್ಸವದಲ್ಲಿ ಯೂಕ್ರೇನ್‌ನಲ್ಲಿ ರಷ್ಯಾದ ಯುದ್ಧವು ಹೆಚ್ಚಾಗಿ ಗಮನಸೆಳೆದಿದೆ. ಯೂಕ್ರೇನಿಯನ್ ಚಲನಚಿತ್ರ ನಿರ್ಮಾಪಕರ ಹಲವಾರು ಚಲನಚಿತ್ರಗಳನ್ನು ಪ್ರದರ್ಶನಗೊಳ್ಳುತ್ತಿವೆ. ಯೂಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಉತ್ಸವವನ್ನು ಉದ್ಘಾಟಿಸಿ ಅಚ್ಚರಿಯ ಭಾಷಣವನ್ನು ಮಾಡಿದರು.

    ಫೆಬ್ರವರಿಯಲ್ಲಿ ಯೂಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ, ಪುಟಿನ್ ಪಡೆಗಳು ನಾಗರಿಕರ ವಿರುದ್ಧ ಅತ್ಯಾಚಾರವನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ. ಯೂಕ್ರೇನ್ ಪೂರ್ವ ನಗರವಾದ ಖಾರ್ಕಿವ್ ಸುತ್ತಮುತ್ತಲಿನ ಪಟ್ಟಣಗಳು ಮತ್ತು ಹಳ್ಳಿಗಳನ್ನು ವಶಪಡಿಸಿಕೊಂಡಾಗ ರಷ್ಯಾದ ಸೈನಿಕರು ಅಲ್ಲಿನ ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಾಕಷ್ಟು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದರಿಂದ ನಮ್ಮ ಮೇಲೆ ಅತ್ಯಾಚಾರವನ್ನು ನಿಲ್ಲಿಸಿ ಎಂಬ ಸಂದೇಶದೊಂದಿಗೆ ಯೂಕ್ರೇನಿಯನ್​ ಮಹಿಳೆ ಕಾನ್​ ಉತ್ಸವದಲ್ಲಿ ಬೆತ್ತಲೆಯಾಗಿ ಪ್ರತಿಭಟಿಸಿ ಗಮನ ಸೆಳೆದರು. (ಏಜೆನ್ಸೀಸ್​)

    ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಮದ್ವೆಯಾದ 21 ವರ್ಷದ ಯುವಕನ ಬರ್ಬರ ಹತ್ಯೆ

    ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 7 ಮಂದಿ ಸಾವು: ಮದುವೆ ಮನೆಯಲ್ಲಿ ನೀರವ ಮೌನ, ಕಂಗಾಲಾದ ವರ

    ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕ್ರೂಸರ್​ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ 7 ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts