More

    ಮೈಸೂರು ಕಳಂಕ ಮುಕ್ತವಾಗಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ ರೋಹಿಣಿ ಸಿಂಧೂರಿ

    ಮೈಸೂರು: ನನ್ನ ವಿರುದ್ಧ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ಹೊರಿಸಿದ್ದರು. ಇದೀಗ ಮೈಸೂರು ಕಳಂಕ ಮುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿರೋಧಿಗಳಿಗೆ ತಿರುಗೇಟು ನೀಡಿದರು.

    ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ರೋಹಿಣಿ ಸಿಂಧೂರಿ ಅವರ ಪಾತ್ರವಿಲ್ಲ ಎಂದು ನ್ಯಾಯಾಧೀಶರ ಸಮಿತಿ ನೀಡಿರುವ ವರದಿ ಕುರಿತು ಮಾತನಾಡಿದ ಅವರು ನನ್ನ ವಿರುದ್ಧ ಆರೋಪ ಮಾಡಿದವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

    ನಾನು ಮೈಸೂರಿಗೆ ಬಂದಾಗಿನಿಂದಲೂ ಕೆಲವರು ಒಂದಿಲ್ಲೊಂದು ಆಪಾದನೆ ಮಾಡುತ್ತಲೇ ಬಂದಿದ್ದಾರೆ. 7 ತಿಂಗಳಿಂದಲೂ ಇಂತಹ ಆರೋಪಗಳು ಕೇಳುತ್ತಲೇ ಬಂದಿದ್ದೇನೆ. ಆದರೆ, ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ, ಅದು ನನ್ನ ಕೆಲಸವೂ ಅಲ್ಲ. ಆದರೆ ಚಾಮರಾಜನಗರ ಸಾವಿನ ವಿಚಾರದಲ್ಲಿ ಕೇಳಿ ಬಂದ ಆಪಾದನೆ ನೋವುಂಟು ಮಾಡಿತ್ತು ಎಂದರು.

    ಇದೀಗ ನ್ಯಾಯಾಧೀಶರ ಸಮಿತಿ ಮೈಸೂರಿನ ಲೋಪ ಇಲ್ಲ ಅಂತ ಹೇಳಿದೆ. ಸುಮ್ಮನೆ ನನ್ನ ವಿರುದ್ಧ ಆರೋಪ ಮಾಡುವವರಿಗೆ ಚಾಮುಂಡೇಶ್ವರಿ ಒಳ್ಳೆಯ ಬುದ್ದಿಯನ್ನು ಕೊಡಲಿ ಎಂದು ಹೇಳಿದರು.

    ಮಾಜಿ ಕಾರ್ಪೋರೇಟರ್, ಶಾಸಕರ ಟೀಕೆಗಳಿಗೆ ಪ್ರತಿಕ್ರಿಯೆ ಕೇಳಬೇಡಿ. ಇದು ಪ್ರತಿಯೊಂದಕ್ಕೂ ಉತ್ತರ ಕೊಡುತ್ತಾ ಕೂರುವ ಸಮಯವಲ್ಲ ಎನ್ನುವ ಮೂಲಕ ಜೆಡಿಎಸ್ ನಾಯಕರಿಗೆ ರೋಹಿಣಿ ಸಿಂಧೂರಿ ತಿರುಗೇಟು ನೀಡಿದರು.

    ದೇಶಸೇವೆಗಾಗಿ ನಾವು ಕೆಲಸಕ್ಕೆ ಸೇರಿದ್ದೇವೆ. ಇಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಜೀವ ರಕ್ಷಣೆ ಸಾಧ್ಯ. ಕಳಬೇಡ, ಕೊಲಬೇಡ ಎಂಬ ಬಸವಣ್ಣನ ವಚನವನ್ನು ಎಲ್ಲರೂ ಮಾರ್ಗಸೂಚಿಯಾಗಿ ಸ್ವೀಕರಿಸಬೇಕೆಂದು ಸಲಹೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಪಿಎಂ ಕಿಸಾನ್ ಸಮ್ಮಾನ್ ನಿಧಿಯ 8ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಅಕ್ಷಯ ತೃತೀಯದಂದೇ ರೈತರಿಗೆ ಸಿಹಿ

    ಸೋನಿಯಾಗೆ ಹೆರಿಗೆ ಮಾಡಿಸಿದ್ದ ಸ್ತ್ರೀರೋಗ ತಜ್ಞೆ ಕೋವಿಡ್‌ನಿಂದ ಸಾವು- ಎರಡೂ ಲಸಿಕೆ ಪಡೆದಿದ್ದ ವೈದ್ಯೆ

    ನಮ್ಮಂತೆಯೇ ಕರೊನಾ ವೈರಸ್​ಗೂ ಬದುಕಲು ಹಕ್ಕಿದೆ ಎಂದ ಉತ್ತರಾಖಂಡದ ಮಾಜಿ ಸಿಎಂ

    ಮೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts