More

    ಮೈಸೂರು ಗ್ಯಾಂಗ್​ರೇಪ್​ ಕೇಸ್​: ವಿದ್ಯಾರ್ಥಿನಿ ಮೇಲೆ ಅಟ್ಟಾಹಾಸ ಮೆರೆದಿದ್ದ ಕಾಮಾಂಧರು ಸಿಕ್ಕಿಬಿದ್ದಿದ್ಹೇಗೆ?

    ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್​ರೇಪ್​ ಪ್ರಕರಣದ ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದೇ ರೋಚಕ ಸಂಗತಿಯಾಗಿದೆ. ಐವರು ಆರೋಪಿಗಳನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಬಂಧಿಸಿ ಮೈಸೂರಿಗೆ ಕರೆತರಲಾಗಿದೆ.

    ಆರೋಪಿಗಳನ್ನು ಸತ್ಯಮಂಗಲದಲ್ಲಿ ಅರೆಸ್ಟ್ ಮಾಡಲಾಗಿದೆ. ಅಲ್ಲಿನ ತಿರ್ಪೂರು ಸಮೀಪದ ಸ್ನೇಹಿತರು ಹಾಗೂ ಸಂಬಂಧಿಕರ ಮನೆಯಲ್ಲಿ ಆರೋಪಿಗಳು ಅವಿತು ಕುಳಿತುಕೊಂಡಿದ್ದರು. ಇದೀಗ ಅವರನ್ನು ಬಂಧಿಸಿ ಸತ್ಯಮಂಗಲದಿಂದ ಮೈಸೂರಿಗೆ ಕರೆತರಲಾಗಿದೆ. ಸದ್ಯ ನ್ಯಾಯಾಧೀಶರಿಂದ ಮೌಖಿಕ ಅನುಮತಿ ಪಡೆದಿರುವ ಪೊಲೀಸರು‌, ರಾತ್ರಿ ವೇಳೆಗೆ ಆರೋಪಿಗಳನ್ನು ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.

    ಬಂಧಿತ ಐವರು ಆರೋಪಿಗಳೆಲ್ಲ ವಿದ್ಯಾರ್ಥಿಗಳೇ. ಇನ್ನು ಓರ್ವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಎಲ್ಲ ಆರೋಪಿಗಳು ಬಿ.ಇ. ವಿದ್ಯಾರ್ಥಿಗಳಾಗಿದ್ದರು. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅದೇ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸ‌‌ ಮಾಡುತ್ತಿದ್ದರು. ಘಟನೆಯ ಬಳಿಕ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರಿಗೆ ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಪರೀಕ್ಷೆಯನ್ನು ಬರೆಯದೇ ಹಾಸ್ಟೆಲ್‌ನಿಂದಲೇ ಆರೋಪಿಗಳು ಎಸ್ಕೇಪ್ ಆಗಿದ್ದರು.

    ಎಡಿಪಿಜಿ ಪ್ರತಾಪ್ ರೆಡ್ಡಿ ಮಿಂಚಿನ ಕಾರ್ಯಾಚರಣೆ
    ಆರೋಪಿಗಳ ಬಂಧನವು ಹಿರಿಯ ಅಧಿಕಾರಿಯ ಜಾಣ್ಮೆಗೆ ಸಿಕ್ಕ ಯಶಸ್ಸಾಗಿದೆ. ಪ್ರತಾಪ್​ ರೆಡ್ಡಿ ಅವರು ಹೊರ ಜಿಲ್ಲೆಯ ಕ್ರೈಂ ಟೀಮ್ ಸಿಬ್ಬಂದಿಯನ್ನೂ ಬಳಸಿಕೊಂಡಿದ್ದರು. ಇನ್ನು ಆರೋಪಿಗಳ ಪತ್ತೆಗೆ ಸುಳಿವು ನೀಡಿದ್ದೇ ಮೊಬೈಲ್​ ಫೋನ್. ಸಂತ್ರಸ್ತೆ ಸ್ನೇಹಿತನ ಲೊಕೇಷನ್​ ಆಧಾರದ ಮೇಲೆ ಪತ್ತೆ ಮಾಡಲಾಗಿದೆ. ಅಪರಾಧ ಎಸಗಿದ ಬಳಿಕ ಸಿಮ್​, ಮೊಬೈಲ್ ಅನ್ನು ಆರೋಪಿಗಳು ಬೇರ್ಪಡಿಸಿದ್ದರು. ಟೆಲಿಫೋನ್​ ಕಂಪನಿಗಳ ನೆರವು ಪಡೆದು ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಸೈಬರ್​ ಕ್ರೈಂ ವಿಭಾಗದ ತಜ್ಱರನ್ನೂ ತನಿಖೆಗೆ ಬಳಸಿಕೊಂಡಿದ್ದರು.

    ಆರೋಪಿಗಳ ಹೆಸರು, ಮೂಲ, ವಯಸ್ಸು, ವೃತ್ತಿ ಸೇರಿದಂತೆ ಯಾವುದೇ ಮಾಹಿತಿ ಬಿಟ್ಟುಕೊಡದ ಅಧಿಕಾರಿಗಳು ಗೌಪ್ಯ ಸ್ಥಳದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲ ಮಾಹಿತಿಯನ್ನು ಎಡಿಜಿಪಿ ಪ್ರತಾಪ್ ರೆಡ್ಡಿ ಹಾಗೂ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇಬ್ಬರಿಗೆ ಮಾತ್ರ ಪಿನ್​ ಟು ಪಿನ್ ಮಾಹಿತಿ ನೀಡುತ್ತಿದ್ದಾರೆ.

    ಆರೋಪಿಗಳು ಮದ್ಯದ ನಶೆಯಲ್ಲಿ ಅತ್ಯಾಚಾರ ಎಸಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಿಕ್ಕಿ ಬೀಳುವ ಭಯದಲ್ಲಿ ಎಸ್ಕೇಪ್ ಆಗಿದ್ದರು. ಘಟನೆ ನಡೆದ ಮರು ದಿನ ಮುಂಜಾನೆಯೇ ಮೈಸೂರು ಖಾಲಿ ಮಾಡಿದ್ದರು. ಇಬ್ಬರು ತಮಿಳುನಾಡು, ಮತ್ತಿಬ್ಬರು ಕೇರಳಕ್ಕೆ ಜೂಟ್ ಆಗಿದ್ದರು. ಬಳಿಕ ತಮಿಳುನಾಡು ಮತ್ತು ಕೇರಳ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಲೆಗೆ ಕೆಡವಿದ್ದು, ಮೈಸೂರಿಗೆ ಕರೆತಂದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ಪರೀಕ್ಷೆ ಬರೆಯದೆ ಪೊಲೀಸ್​ ಬಲೆಗೆ ಬಿದ್ದ ನಾಲ್ವರು ಆರೋಪಿಗಳು

    ಮೈಸೂರಲ್ಲಿ ಗ್ಯಾಂಗ್​ ರೇಪ್​ ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್​: ನಾನು ದೂರು ಕೊಡಲ್ಲ, ನನ್ನನ್ನು ಬಿಟ್ಟುಬಿಡಿ…

    ನನ್ನನ್ನು ತಳ್ಳಿ ಗೆಳತಿಯನ್ನು ಪೊದೆಯತ್ತ ಎಳೆದೊಯ್ದರು… ​ ಸಂತ್ರಸ್ತೆಯ ಸ್ನೇಹಿತನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts