More

    ವೃದ್ಧರಿಬ್ಬರಿಗೆ ಬೆತ್ತಲೆ ವಿಡಿಯೋ ಕಾಲ್​ ಮಾಡಿ 3.63 ಲಕ್ಷ ರೂ. ವಸೂಲಿ ಮಾಡಿದ ಐನಾತಿ ಲೇಡಿ

    ಮುಂಬೈ: ಖತರ್ನಾಕ್​ ಮಹಿಳೆಯೊಬ್ಬಳು ಬೆತ್ತಲೆ ವಿಡಿಯೋ ಇಟ್ಟುಕೊಂಡು ಇಬ್ಬರು ಹಿರಿಯ ನಾಗರಿಕರನ್ನು ಬೆದರಿಸಿ 3.63 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವ ಘಟನೆ ಮುಂಬೈನ ಅಂಧೇರಿ ಏರಿಯಾದಲ್ಲಿ ನಡೆದಿದೆ.

    ಎರಡೂ ಪ್ರಕರಣದಲ್ಲಿರುವುದು ಒಬ್ಬಳೇ ಆರೋಪಿಯಾ ಎಂಬುದನ್ನು ಪೊಲೀಸರು ಇನ್ನು ಖಚಿತಪಡಿಸಿಕೊಳ್ಳಬೇಕಿದೆ. ಅಪರಿಚಿತ ಮಹಿಳೆಯೊಬ್ಬಳು ಜುಲೈ 28ರಂದು ಅಂಧೇರಿಯ 86 ವರ್ಷದ ನಿವಾಸಿಗೆ ವಿಡಿಯೋ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ಹಿರಿಯ ವ್ಯಕ್ತಿ ಬೆತ್ತಲೆಯಾಗಿದ್ದ ಮಹಿಳೆಯನ್ನು ನೋಡಿ ಶಾಕ್​ ಆಗಿದ್ದರು. ಆ ವಿಡಿಯೋ ಕಾಲ್​ ರೆಕಾರ್ಡ್​ ಮಾಡಿಕೊಂಡಿದ್ದ ಆರೋಪಿ, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದಳು.

    ಇದರಿಂದ ಭಯಭೀತನಾಗಿದ್ದ ಹಿರಿಯ ವ್ಯಕ್ತಿ ಹಣ ಕೊಡಲು ಒಪ್ಪಿಕೊಂಡು, 2.99 ಲಕ್ಷ ರೂಪಾಯಿ ಹಣವನ್ನು ಎರಡು ಬ್ಯಾಂಕ್​ ಖಾತೆಗಳಿಗೆ ಹಾಕಿದ್ದ. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಜುಲೈ 29ರಂದು ಅಂಬೋಲಿ ಪೊಲೀಸ್​ ಠಾಣೆಗೆ ತೆರಳಿ ಸಂತ್ರಸ್ತ ದೂರು ದಾಖಲಿಸಿದ್ದ.

    ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಅದೇ ಏರಿಯಾದ ನೆರೆ ಮನೆಯೆ ಮತ್ತೊಬ್ಬ ಹಿರಿಯ ನಾಗಕರಿಕನನ್ನು ಟಾರ್ಗೆಟ್​ ಮಾಡಿದ್ದ ಖತರ್ನಾಕ್​ ಲೇಡಿ ಜುಲೈ 9 ಮತ್ತು ಜುಲೈ 19ರ ನಡುವೆ ಎರಡು ಬಾರಿ ವಿಡಿಯೋ ಕರೆ ಮಾಡಿದ್ದಳು. ರೆಕಾರ್ಡ್​ ಮಾಡಿಕೊಂಡು ಬೆದರಿಸಿ, 64 ಸಾವಿರ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಳು.

    ಪೊಲೀಸರು ಎರಡೂ ದೂರುಗಳನ್ನು ಸಂಯೋಜಿಸಿದ್ದಿ, ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ವ್ಯಕ್ತಿ ಮತ್ತು ಆರೋಪಿ ಇಬ್ಬರು ಒಬ್ಬರೇನಾ ಎಂದು ಹುಡುಕಲು ಪ್ರಯತ್ನಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಕಳ್ಳಬೇಟೆಗಾರರಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ “ರಾಣಾ” ಇನ್ನಿಲ್ಲ…

    ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್​ ನಾಯಕನ ಮಗಳು, ಬ್ಯೂಟಿಷಿಯನ್​ ದುರಂತ ಸಾವು

    ಮನೆಗೆ ಬಾ ಎಂದು ಕರೆದಾಗ ಹೋಗಲೇಬೇಕು ಇಲ್ಲದಿದ್ರೆ… ಸ್ಟಾರ್​ ನಟರ ಮುಖವಾಡ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts