More

    ಸ್ವಾತಂತ್ರ್ಯ ದಿನದಂದೇ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ

    ಮುಂಬೈ: ಇಡೀ ದೇಶವೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಣೆಯಲ್ಲಿ ಇರುವಾಗ ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಮೂರು ಬೆದರಿಕೆ ಕರೆಗಳು ಬಂದಿವೆ.

    ಮೂರು ಬೆದರಿಕೆ ಕರೆಗಳನ್ನು ರಿಲಯನ್ಸ್ ಫೌಂಡೇಶನ್​ನ ಹರ್ಸ್ಕಿಸಂದಾಸ್ ಆಸ್ಪತ್ರೆಯ ದೂರವಾಣಿ ಸಂಖ್ಯೆಗೆ ಮಾಡಲಾಗಿದ್ದು, ಈ ಬಗ್ಗೆ ಡಿಬಿ ಮಾರ್ಗ್​ ಠಾಣೆಯ ಪೊಲೀಸರು ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಮುಂಬೈ ಪೊಲೀಸರು ಹೇಳಿಕೆ ನೀಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್​ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಕರೆಗಳ ಕುರಿತು ರಿಲಯನ್ಸ್ ಫೌಂಡೇಶನ್ ದೂರು ದಾಖಲಿಸಿದೆ. ಆಸ್ಪತ್ರೆಯಲ್ಲಿ ಮೂರಕ್ಕೂ ಹೆಚ್ಚು ಕರೆಗಳು ಬಂದಿವೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸ ‘ಆಂಟಿಲಿಯಾ’ದ ಹೊರಗೆ 20 ಸ್ಫೋಟಕ ಜಿಲೆಟಿನ್ ಸ್ಟಿಕ್‌ಗಳು ಮತ್ತು ಬೆದರಿಕೆ ಪತ್ರವಿರುವ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ, ಸಚಿನ್ ವಾಜೆ ನೇತೃತ್ವದ ಮುಂಬೈನ ಅಪರಾಧ ಗುಪ್ತಚರ ಘಟಕ ಸೇರಿದಂತೆ ಹಲವಾರು ಪೊಲೀಸರು ತನಿಖೆಗಾಗಿ ಸ್ಥಳಕ್ಕೆ ತಲುಪಿದರು. ಸಚಿನ್ ವಾಜೆ ಪ್ರಕರಣದ ಪ್ರಮುಖ ತನಿಖಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

    ಇದಾದ ಕೆಲವು ದಿನಗಳ ನಂತರ, ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ನಿಗೂಢ ಸಾವಿನ ಬಳಿಕ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಯಿತು. ಅಂಬಾನಿ ನಿವಾಸದ ಹೊರಗೆ ಸಿಕ್ಕ ಸ್ಕಾರ್ಪಿಯೋದ ಮಾಲೀಕ ಹಿರೇನ್ ಆಗಿದ್ದರು. ಅಲ್ಲದೆ, ವಾರದ ಹಿಂದೆಯೇ ಆ ಕಾರು ಕಳ್ಳತನವಾಗಿತ್ತು ಎಂದು ಅವರು ಹಿಂದೆಯೇ ಹೇಳಿಕೊಂಡಿದ್ದರು. ಮಾರ್ಚ್ 5, 2021 ರಂದು ಥಾಣೆಯ ತೊರೆಯಲ್ಲಿ ಅವರ ದೇಹವು ಪತ್ತೆಯಾಗಿತ್ತು. (ಏಜೆನ್ಸೀಸ್​)

    ಬೀದಿ ನಾಯಿ ಮೇಲೆ ದೌರ್ಜನ್ಯ: ಕೋಲಿನಿಂದ ಸೆಕ್ಯುರಿಟಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ​

    ನೇಣು ಬಿಗಿದ ಸ್ಥಿತಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಮೃತದೇಹ ಪತ್ತೆ: ಕಾರಣ ನಿಗೂಢ!

    ಇನ್ಮುಂದೆ ಹಲೋ ಬದಲು ವಂದೇ ಮಾತರಂ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ‘ಮಹಾ’ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts