More

    ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು: ಕಾವೇರಿ ನೀರಾವರಿ ನಿಗಮದ ವರದಿಯಿಂದ ಇಕ್ಕಟಿಗೆ ಸಿಲುಕಿದ ಸುಮಲತಾ!

    ಮೈಸೂರು: ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸುಳ್ಳು. ಡ್ಯಾಂ ಗಟ್ಟಿಮುಟ್ಟಾಗಿದೆ ಎಂದು ಸರ್ಕಾರಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವರದಿ ನೀಡಿದ್ದಾರೆ.

    ಡ್ಯಾಂ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಅಂಬರೀಷ್​ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ವರದಿ ಕೇಳಿತ್ತು. ಅಣೆಕಟ್ಟೆಗೆ ಅಪಾಯ ಉಂಟು ಮಾಡುವ ಯಾವುದೇ ಬಿರುಕು ಇಲ್ಲ ಎಂದು ವರದಿ ನೀಡಲಾಗಿದೆ. ಅಲ್ಲದೆ, ಕ್ರಸ್ಟ್​ ಗೇಟ್​ಗಳ ಬದಲಾವಣೆ ಮತ್ತು ನಿರ್ವಹಣಾ ಕಾಮಗಾರಿಯು ನಡೆಯುತ್ತಿದೆ. ತಜ್ಱರ ಸಲಹೆ ಮೇರೆಗೆ ಸುರಕ್ಷತಾ ಕ್ರಮಗಳೊಂದಿಗೆ ಕಾಮಗಾರಿ ಮಾಡುತ್ತಿದ್ದೇವೆ. ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಊಹಾಪೋಹ ಎಂದು ನೀರಾವರಿ ಇಲಾಖೆಗೆ ನಿಗಮದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

    ಕೆಆರ್​ಎಸ್​ ಡ್ಯಾಂನಲ್ಲಿ ಐತಿಹಾಸಿಕ ಕಾಮಗಾರಿ ನಡೆಯುತ್ತಿದೆ. 90 ವರ್ಷಗಳ ಬಳಿಕ ಮೊದಲ ಬಾರಿಗೆ ಬೃಹತ್ ಪ್ರಮಾಣದ ರಿಪೇರಿ ಕೆಲಸ ಪ್ರಗತಿಯಲ್ಲಿದೆ. ಎಲ್ಲ ಕ್ರಸ್ಟ್​ಗಳಲ್ಲೂ ನೀರು ಹರಿಯುವಂತೆ ಪ್ಲಾನ್​ ಮಾಡಲಾಗಿದೆ. 136 ಹಳೆಯ ಗೇಟ್​ ತೆಗೆದು ಹೊಸ ಗೇಟ್​ಗಳನ್ನು ಅಳವಡಿಸಲಾಗಿದೆ.

    103, 106, 114 ಅಡಿ ಗೇಟ್​ಗಳ ಬದಲಾವಣೆ ಮಾಡಲಾಗಿದೆ. ಸ್ಕಾಡ ಟೆಕ್ನಾಲಜಿ ಮೂಲಕ ಕಚೇರಿಯಲ್ಲೇ ಕುಳಿತು ಗೇಟ್​ಗಳ ನಿಯಂತ್ರಣ ಮಾಡಬಹುದು. ಸರ್​ ಎಂ.ವಿಶ್ವೇಶ್ವರಯ್ಯ ಪರಿಕಲ್ಪನೆಯ ಆಟೋಮ್ಯಾಟಿಕ್ ಗೇಟ್​ಗಳ ದುರಸ್ತಿಗೂ ಕ್ರಮ ತೆಗೆದುಕೊಳ್ಳಲಾಗಿದೆ.

    ಕಾವೇರಿ ನೀರಾವರಿ ನಿಗಮ ಮೂರು ಹಂತದ ಕಾಮಗಾರಿ ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ ಕ್ರಸ್ಟ್​ ಗೇಟ್​ಗಳ ಬದಲಾವಣೆ. ಬರೋಬ್ಬರಿ 58.46 ಕೋಟಿ ರೂ. ವೆಚ್ಚದಲ್ಲಿ ಇದರ ಕಾಮಗಾರಿ ನಡೆಯಲಿದೆ. ಗುಜರಾತ್​ ಮೂಲದ ಡಿಆರ್​ಐಪಿ ಸಂಸ್ಥೆಗೆ ಇದರ ಗುತ್ತಿಗೆಯನ್ನು ನೀಡಲಾಗಿದೆ.

    ರಾಜಕೀಯ ಲಾಭಕ್ಕಾಗಿ ಭಾವನಾತ್ಮಕ ವಿಚಾರ ಕೆದಕಿದ್ರಾ ಸುಮಲತಾ?
    ಕಳೆದ ತಿಂಗಳು ಡ್ಯಾಂ ಬಿರುಕು ಬಿಟ್ಟಿದೆ ಎಂದು ಸುಮಲತಾ ಆರೋಪಿಸಿದ್ದರು. ಆದರೆ, ಈಗ ಏಕಾಏಕಿ ಉಲ್ಟಾ ಹೊಡೆದಿದ್ದಾರೆ. ಬಿರುಕು ಬಿಟ್ಟಿದೆಯೋ? ಇಲ್ಲವೋ? ಅಂತ ಪರಿಶೀಲಿಸಲಿ ಅಂತ ಹೇಳಿಕೆ ನೀಡಿದ್ದಾರೆ. ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯರನ್ನು ಹಣಿಯಲು ಪರೋಕ್ಷ ಆರೋಪ ಮಾಡಿದ್ರಾ ಸುಮಲತಾ ಎಂಬ ಮಾತುಗಳು ಕೇಳಿಬಂದಿವೆ. ಕಲ್ಲು ಕ್ವಾರಿ, ಕ್ರಷರ್​ಗಳಿಂದಲೇ ಡ್ಯಾಂಗೆ ಅಪಾಯ ಅಂತ ಬಿಂಬಿಸುವ ಯತ್ನ ನಡೆದಿದೆ ಎನ್ನಲಾಗುತ್ತಿದೆ.

    ಕ್ವಾರಿ‌ ಇರೋದು ಪಾಂಡವಪುರ ಮತ್ತು ಡ್ಯಾಂ ಇರೋದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ. ಡ್ಯಾಂ ಪರಿಶೀಲನೆ ಮಾಡಿಲ್ಲ, ಬಿರುಕು ಖಚಿತ ಪಡಿಸಿಕೊಂಡಿಲ್ಲ. ಸುಖಾಸುಮ್ಮನೆ ಆರೋಪ ಮಾಡಿ ಸುಮಲತಾ ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿದೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸುಮಲತಾ ಅಂಬರೀಷ್!

    ಮಗನ ಮೇಲೆಯೇ ತಾಯಿಯ ಲೈಂಗಿಕ ದೌರ್ಜನ್ಯ: ಪೊಲೀಸರು ಇಂತಹ ಕೀಳು ಮಟ್ಟಕ್ಕೆ ಇಳಿದರಾ?

    ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ: ಪುಲ್ವಾಮದಲ್ಲಿ ವಿಜಯಪುರ ಮೂಲದ ಯೋಧ ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts