More

    ಪ್ರತಿ 12 ವರ್ಷಕ್ಕೊಮ್ಮೆ ನಿಗದಿತವಾಗಿ ಕುಂಭಮೇಳ ಮಾಡಲು ಸರ್ಕಾರಿ ಆದೇಶ ಮಾಡಿಸುತ್ತೇನೆ: ಸಿಎಂ ಬೊಮ್ಮಾಯಿ

    ಮಂಡ್ಯ: ಪ್ರತಿ 12 ವರ್ಷಕ್ಕೆ ಒಮ್ಮೆ ನಿಗದಿತವಾಗಿ ಕುಂಭಮೇಳ ಮಾಡಲು ಸರ್ಕಾರಿ ಆದೇಶ ಮಾಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

    ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆದ ಮಹಾ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಸಿಎಂ ಬೊಮ್ಮಾಯಿ ಅವರು ಮಾತನಾಡಿದರು.

    ಬದುಕು ಕೂಡ ನದಿ ರೀತಿ. ನಿಂತ ನೀರಿನಿಂದ ಸಾಧನೆ ಆಗುವುದಿಲ್ಲ. ಚಲನೆಯಿಂದ ಮಾತ್ರ ಸಾಧನೆ ಸಾಧ್ಯ. ಹತ್ತಾರು ಅಲೋಚನೆಗಳನ್ನು ಮಾಡುತ್ತಾ ಸರಿ ಯಾವುದು? ತಪ್ಪು ಯಾವುದು? ಎಂಬುದನ್ನು ನಿರ್ಧರಿಸಿ ಮುಂದೆ ಸಾಗಬೇಕು. ಸದೃಢ ಸಂಕಲ್ಪ ಇರುವ ವ್ಯಕ್ತಿ ಯಾವತ್ತೂ ತಪ್ಪು ಮಾಡುವುದಿಲ್ಲ. ಅಧ್ಯಾತ್ಮಿಕ ಶಕ್ತಿ ನಮ್ಮನ್ನು ಸರಿ ದಾರಿಯಲ್ಲಿ ನಡೆಸುತ್ತದೆ. ಭಕ್ತಿ ಎಂಬುದು ಉತ್ಕೃಷ್ಟ ಪ್ರೀತಿ. ಕರಾರು ಇಲ್ಲದ ಶುದ್ಧ ಅಂತಃಕರಣದ ಪ್ರೀತಿಯೆ ಭಕ್ತಿ. ಗುರುವಿನೊಳಗೆ ಸಂಪೂರ್ಣ ವಿಶ್ವಾಸವಿಟ್ಟು ಅದರೊಳಗೆ ಕರಗಬೇಕು, ಆಗ ಸಾಕ್ಷಾತ್ಕಾರ ಸಿಗುತ್ತದೆ ಎಂದರು.

    ಶಂಕರಾಚಾರ್ಯರು ಬಹಳ ದೊಡ್ಡ ವೈಚಾರಿಕತೆ ಹಿನ್ನೆಲೆಯಲ್ಲಿ ನದಿಯ ಸಂಗಮ ಸ್ಥಳಗಳಲ್ಲಿ ಕುಂಭಮೇಳ ಆಯೋಜಿಸಲು ಶುರು ಮಾಡಿದರು. ಶಂಕರಾಚಾರ್ಯರು ಅವತ್ತು ಹಿಂದು ಧರ್ಮಕ್ಕೆ ಭದ್ರ ಬುನಾದಿ ಹಾಕದೆ ಇದ್ದರೆ, ಇವತ್ತು ಹಿಂದು ಧರ್ಮಕ್ಕೆ ಕಷ್ಟ ಎದುರಾಗುತ್ತಿತ್ತು. ಹತ್ತು ಹಲವರು ವೈಚಾರಿಕತೆಯ ಶ್ರೀಮಂತಿಕೆಯ ದೇಶ ನಮ್ಮದ್ದು. ಆರ್ಥಿಕವಾಗಿ ಬೇರೆ ದೇಶಗಳು ನಮಗಿಂತಾ ಶ್ರೀಮಂತವಾಗಿವೆ. ಆದರೆ, ಆ ದೇಶಗಳಲ್ಲಿ ಭಾರತದಲ್ಲಿ ಇದ್ದಷ್ಟು ಬದುಕುಗಳು ಶ್ರೀಮಂತವಾಗಿಲ್ಲ. ಈ ದೇಶದ ಮೇಲೆ ಎಂಥೆಂಥವರೋ ದಂಡೆತ್ತಿ ಬಂದರೂ ನಮ್ಮ ಸಂಸ್ಕೃತಿ, ಸಂಸ್ಕಾರ ನಾಶವಾಗಲಿಲ್ಲ. ಇದೇ ಹಿಂದು ಧರ್ಮದ ಶಕ್ತಿ ಎಂದು ಹೇಳಿದರು.

    ಕುಂಭಮೇಳ ಮಾಡಲು ಸರ್ಕಾರಿ ಆದೇಶ
    ನಮ್ಮ ಹಿಂದೂ ಧರ್ಮದಲ್ಲಿ ಸಹಿಷ್ಣುತೆ ಇದೆ. ವೈಚಾರಿಕತೆ ಕ್ರಾಂತಿ ಇದೆ. ಇಡೀ ಮನುಕುಲವೇ ಒಂದು ಎಂಬ ಜೀವನ ಪದ್ಧತಿ ಹಿಂದು ಧರ್ಮದಲ್ಲಿದೆ. ವಿಶ್ವದ ಮನುಕುಲದ ಮೌಲ್ಯ ಉಳಿಯಬೇಕಾದರೆ, ಹಿಂದು ಧರ್ಮದ ಸಂಸ್ಕೃತಿ ಉಳಿಯಬೇಕು. ಪ್ರತಿ 12 ವರ್ಷಕ್ಕೆ ಒಮ್ಮೆ ನಿಗದಿತವಾಗಿ ಕುಂಭಮೇಳ ಮಾಡಲು ಸರ್ಕಾರಿ ಆದೇಶ ಮಾಡಿಸುತ್ತೇನೆ. ಸಂಗಮ ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುತ್ತೇನೆ ಎಂದು ಭರವಸೆ ನೀಡಿದರು.

    ಬೆಳೆ ನಷ್ಟದ ಪರಿಹಾರ ಎರಡು ಪಟ್ಟು ಹೆಚ್ಚು‌
    ಇಡೀ ರಾಜ್ಯಾದ್ಯಂತ ಮಳೆ ಆಗುತ್ತಿದೆ. ಅಕ್ಟೋಬರ್ ಬಂದರು ಮಳೆ ನಿಲ್ಲುತ್ತಿಲ್ಲ. ಕೆಲವು ಕಡೆ ಪ್ರವಾಹವಾಗಿದೆ. ನಾನು ಸಿಎಂ ಆದ ಮೇಲೆ ಬೆಳೆ ನಾಶದ ಪರಿಹಾರ ಒಂದು ತಿಂಗಳ ಒಳಗೆ ಕೊಡುತ್ತಿದ್ದೇನೆ. ಮೊದಲು ಬೆಳೆ ನಷ್ಟದ ಪರಿಹಾರ ಹಣ ರೈತರಿಗೆ ತಲುಪಲು ಒಂದೂವರೆ ವರ್ಷ ಬೇಕಾಗಿತ್ತು. ಬೆಳೆ ನಷ್ಟದ ಪರಿಹಾರ ಹಣವನ್ನು ಎರಡು ಪಟ್ಟು ಹೆಚ್ಚಿಸಿದ್ದೇನೆ‌. ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ವಹಿಸಲಾಗುವುದು ಎಂದರು.

    ಮನುಷ್ಯತ್ವ ಇಲ್ಲದವರು ಮಾತ್ರ ಈ ಕೆಲಸ ಮಾಡಲು ಸಾಧ್ಯ
    ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಸಿಎಂ, ಮನುಷ್ಯತ್ವ ಇಲ್ಲದವರು ಮಾತ್ರ ಈ ಕೆಲಸ ಮಾಡಲು ಸಾಧ್ಯ. ಈ ಘಟನೆಯನ್ನು ಎಷ್ಟೆ ಕಠಿಣ ಪದಗಳಲ್ಲಿ ಖಂಡಿಸಿದರು ಅದು ಕಡಿಮೆ. ಆರೋಪಿ ಮೇಲೆ ಎಲ್ಲ ಸೆಕ್ಷನ್ ಹಾಕಲಾಗಿದೆ. ಆರೋಪಿ ಬಂಧನವಾದರೆ ಸಾಲದು ಆರೋಪಿಗೆ ಶಿಕ್ಷೆ ಆಗಲೇಬೇಕು. ಅತಿ ಕಡಮೆ ಸಮಯದಲ್ಲಿ ಉಗ್ರವಾದ ಶಿಕ್ಷೆ ಕೊಡುತ್ತೇವೆ ಎಂಬ ಸಂದೇಶ ರವಾನೆ ಮಾಡುತ್ತೇನೆ. ಅತ್ಯಂತ ಉಗ್ರ ಶಿಕ್ಷೆ ಆಗಬೇಕು. ಉಗ್ರ ಶಿಕ್ಷೆ ಏನೂ ಎಂಬುದನ್ನು ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ನಾನು ಈ ವಿಚಾರದಲ್ಲಿ ಭಾವುಕನಾಗಿದ್ದೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಟಿ20 ವಿಶ್ವಕಪ್​: ಇಂಡೋ-ಪಾಕ್​ ಹೈವೋಲ್ಟೇಜ್​ ಪಂದ್ಯಕ್ಕೆ ಎದುರು ನೋಡ್ತಿದ್ದೀರಾ? ಇಲ್ಲಿದೆ ಬ್ಯಾಡ್​ ನ್ಯೂಸ್​…

    ಹಾಸನ ಭೀಕರ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ

    ಭಾರಿ ಮಳೆಯಿಂದ ರಸ್ತೆಗೆ ಹಾನಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts