More

    ಎಚ್ಚರಿಕೆಗೂ ಕ್ಯಾರೆ ಎನ್ನದೆ ಮುಂದೆ ಸಾಗಿದ ಚಾಲಕ: ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದ ಗೂಡ್ಸ್​ ವಾಹನ

    ಮಂಡ್ಯ: ಭಾರಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಬೊಲೆರೋ ಗೂಡ್ಸ್​ ವಾಹನವೊಂದು ಬ್ರಿಡ್ಜ್ ಮೇಲಿಂದ ಕೊಚ್ಚಿಹೋದ ಘಟನೆ ನಾಗಮಂಗಲ ತಾಲೂಕಿನ ಅಣೆಚನ್ನಾಪುರ-ಗುಳಕಾಯಿ ಹೊಸಹಳ್ಳಿ ನಡುವೆ ಸೇತುವೆ ಮೇಲೆ ನಡೆದಿದೆ.

    ಈಗಾಗಲೇ ಪೊಲೀಸ್ ಇಲಾಖೆ ಬ್ಯಾರಿಕೇಡ್​ಗಳನ್ನು ಅಡ್ಡಲಾಗಿ ಇಟ್ಟು ಬ್ರಿಡ್ಜ್ ಮೇಲೆ ವಾಹನ ಸಂಚಾರ ನಿಷೇಧಿಸಿದೆ. ಅಲ್ಲದೆ, ಸೇತುವೆಯ ಎರಡು ಭಾಗದಲ್ಲೂ ಬಿಂಡಿಗನವಿಲೆ ಪೊಲೀಸರು ಎಚ್ಚರಿಕೆಯ ನಾಮಫಲಕವನ್ನು ಹಾಕಿದ್ದಾರೆ. ಆದರೆ, ಅದಕ್ಕೆ ಕ್ಯಾರೆ ಎನ್ನದ ವಾಹನ ಚಾಲಕ ಬ್ರಿಡ್ಜ್ ಮೇಲೆ ವಾಹನ ಸಂಚರಿಸಲು ಮುಂದಾದಾಗ ನೀರಿನ ರಭಸಕ್ಕೆ ಸಿಲುಕಿ ಹಳ್ಳಕ್ಕೆ ಕೊಚ್ಚಿಕೊಂಡು ಹೋಗಿ ಬಿದ್ದಿದೆ.

    ನೀರಿನ ರಭಸಕ್ಕೆ ವಾಹನ ಕೊಚ್ಚಿ ಹೋಗುತ್ತಿದ್ದಂತೆ ಚಾಲಕ ತನ್ನ ವಾಹನವನ್ನು ಬಿಟ್ಟು ಪ್ರಾಣ ಉಳಿಸಿಕೊಂಡಿದ್ದಾನೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈಗಾಗಲೇ 40ಕ್ಕೂ ಹೆಚ್ಚು ಮಂದಿ ಭೀಕರ ಮಳೆಗೆ ಬಲಿಯಾಗಿದ್ದಾರೆ. ಸಾಕಷ್ಟು ಆಸ್ತಿ-ಪಾಸ್ತಿ ಹಾಗೂ ಬೆಳೆ ನಷ್ಟವಾಗಿದೆ. ಮಳೆ ಹೀಗೆ ಮುಂದುವರಿದರೆ, ಮತ್ತಷ್ಟು ಹಾನಿಯುಂಟಾಗುವ ಸಾಧ್ಯತೆ ಇದೆ.

    ಕೈದಿ 2ನೇ ಭಾಗದಲ್ಲಿ ದಿಲ್ಲಿ ಎದುರು ಅಬ್ಬರಿಸಲಿದ್ದಾರಾ ರೋಲೆಕ್ಸ್ ಸರ್​? ನಟ ಸೂರ್ಯ ಉತ್ತರ ಹೀಗಿತ್ತು….

    ಮಂಡ್ಯದಲ್ಲಿ ರುಂಡವಿಲ್ಲದ ಮೃತದೇಹ ಪತ್ತೆ ಕೇಸ್​: 2 ತಿಂಗಳ ನಂತ್ರ ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ ಬಯಲು

    ಯಾದಗಿರಿಯಲ್ಲಿ ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts