More

    ಪ್ರಧಾನಿ ಮೋದಿ 4 ಗಂಟೆಗಳ ಭೇಟಿಗೆ ಮಧ್ಯಪ್ರದೇಶ ಸರ್ಕಾರ ಖರ್ಚು ಮಾಡ್ತಿರೋ ಹಣ ಕೇಳಿದ್ರೆ ಬೆರಗಾಗ್ತೀರಾ!

    ಭೋಪಾಲ್​​: ಭಗವಾನ್​ ಬಿರ್ಸಾ ಮುಂಡ ಸ್ಮರಣಾರ್ಥ ನವೆಂಬರ್​ 15ರಂದು ಮಧ್ಯಪ್ರದೇಶ ಸರ್ಕಾರ ಜಂಜತಿಯ ಗೌರವ ದಿವಸವನ್ನು ಆಚರಿಸಲಿದೆ. ಬುಡಕಟ್ಟು ಜನಾಂಗದ ಹೋರಾಟಗಾರರಿಗೆ ಈ ಕಾರ್ಯಕ್ರಮವನ್ನು ಸಮರ್ಪಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಭೋಪಾಲ್‌ನ ಜಂಬೂರಿ ಮೈದಾನದಲ್ಲಿ ದೇಶದ ಮೊದಲ ಬಾರಿಗೆ ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.

    ಜಂಜತಿಯ ಗೌರವ ದಿವಸದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಸಂಪುಟ ಕೂಡ ನಿರ್ಧಾರ ಮಾಡಿದೆ. ನ.15 ರಿಂದ 22ರವೆಗೆ ಒಂದು ವಾರಗಳ ಕಾಲ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿವೆ. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಬಿರ್ಸಾ ಮುಂಡ ಅವರ ಕೊಡುಗೆಗಳನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಲಾಗುವುದು. ಪ್ರಧಾನಿ ಮೋದಿ ಆಗಮಿಸುವ ದಿನ ಸುಮಾರು 2 ಲಕ್ಷ ಬುಡಕಟ್ಟು ಜನಾಂಗದವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಇಡೀ ಸ್ಥಳವನ್ನು ಈಗಾಗಲೇ ಬುಡಕಟ್ಟು ಕಲೆ ಮತ್ತು ಬುಡಕಟ್ಟು ದಂತಕಥೆಗಳ ಚಿತ್ರಗಳಿಂದ ಅಲಂಕರಿಸಲಾಗಿದೆ.

    ಪ್ರಧಾನಿ ಮೋದಿ ಅವರು ಕಾರ್ಯಕ್ರಮ ನಡೆಯುವ ದಿನ 4 ಗಂಟೆಗಳ ಕಾಲ ಭೋಪಾಲ್​ನಲ್ಲಿ ಇರುತ್ತಾರೆ. 1 ಗಂಟೆ 15 ನಿಮಿಷಗಳ ಕಾಲ ವೇದಿಕೆಯಲ್ಲಿ ಇರಲಿದ್ದಾರೆ. ಈಗಾಗಲೇ ಬೃಹತ್​ ವೇದಿಕೆ ಸಿದ್ಧವಾಗಿದೆ. ಕಾರ್ಯಕ್ರಮಕ್ಕೆ ಬರುವ ಬುಡಕಟ್ಟು ಜನಾಂಗದವರಿಗೆ ದೊಡ್ಡ ದೊಡ್ಡ ಪೆಂಡಾಲ್​ಗಳನ್ನು ಅಳವಡಿಸಲಾಗಿದೆ. 300 ಕೆಲಸಗಾರರು ಕಳೆದ ಒಂದು ವಾರದಿಂದ ಸಿದ್ಧತೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶ ಸರ್ಕಾರ ಖರ್ಚು ಮಾಡುತ್ತಿರುವ ಹಣ ಕೇಳಿದ್ರೆ ನಿಜಕ್ಕೂ ಶಾಕ್​ ಆಗುತ್ತದೆ. ಬರೋಬ್ಬರಿ 23 ಕೋಟಿ ರೂ. ಕಾರ್ಯಕ್ರಮಕ್ಕೆ ವ್ಯಯಿಸಲಾಗುತ್ತಿದೆ. ಇದರಲ್ಲಿ 13 ಕೋಟಿ ರೂ. ಅನ್ನು ಕಾರ್ಯಕ್ರಮ ನಡೆಯುವ ಜಂಬೊರೀ ಮೈದಾನಕ್ಕೆ ಜನರನ್ನು ಕರೆತರಲು ಖರ್ಚು ಮಾಡಲಾಗುತ್ತಿದೆ.

    ರಾಜ್ಯದ 52 ಜಿಲ್ಲೆಗಳಿಂದ ಬರುವ ಜನರಿಗೆ ಸಾರಿಗೆ, ಆಹಾರ ಮತ್ತು ವಸತಿಗಾಗಿ 12 ಕೋಟಿ ರೂ. ಮತ್ತು ಐದು ಗುಮ್ಮಟಗಳು, ಟೆಂಟ್‌ಗಳು, ಅಲಂಕಾರ ಮತ್ತು ಪ್ರಚಾರಕ್ಕಾಗಿ 9 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚವಾಗಿದೆ. ಮಧ್ಯಪ್ರದೇಶದಲ್ಲಿ ಪರಿಶಿಷ್ಟ ಪಂಗಡಕ್ಕೆ 47 ಸ್ಥಾನಗಳನ್ನು ಮೀಸಲಿಡಲಾಗಿದೆ. 2008ರಲ್ಲಿ ಬಿಜೆಪಿ 29ರಲ್ಲಿ ಗೆದ್ದಿತ್ತು, 2013 ರಲ್ಲಿ ಈ ಸಂಖ್ಯೆ 31 ರಷ್ಟು ಹೆಚ್ಚಾಯಿತು, ಆದರೆ 2018 ರಲ್ಲಿ 47ರಲ್ಲಿ ಬಿಜೆಪಿ ಕೇವಲ 16 ಸ್ಥಾನಗಳನ್ನು ಗಳಿಸಿತು.

    ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಅಥವಾ ಎನ್‌ಸಿಆರ್‌ಬಿ ಡೇಟಾ ಪ್ರಕಾರ, ಮಧ್ಯಪ್ರದೇಶವು ಪರಿಶಿಷ್ಟ ಪಂಗಡಗಳ ವಿರುದ್ಧ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳನ್ನು 2,401 ಎಂದು ವರದಿ ಮಾಡಿದೆ. 2019ರಲ್ಲಿ ಈ ಸಂಖ್ಯೆ 1,922 ಆಗಿದ್ದರೆ, 2018 ರಲ್ಲಿ ಇದು 1,868 ಆಗಿತ್ತು. ಎರಡು ವರ್ಷಗಳ ಅವಧಿಯಲ್ಲಿ, ಬುಡಕಟ್ಟು ಜನರ ಮೇಲಿನ ದೌರ್ಜನ್ಯಗಳಲ್ಲಿ ರಾಜ್ಯವು ಶೇ 28 ರಷ್ಟು ಜಿಗಿತವನ್ನು ತೋರಿಸಿದೆ. (ಏಜೆನ್ಸೀಸ್​)

    ದೇವೇಗೌಡರು, ಕುಮಾರಸ್ವಾಮಿ ಹೆಸರು ಹೇಳಿದ್ರೆ ಜನ ವೋಟ್​ ಹಾಕಲ್ಲ: ಶಾಸಕ ಶಿವಲಿಂಗೇಗೌಡ ಅಸಮಾಧಾನ

    ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಹ್ಯಾಕರ್​ ಶ್ರೀಕಿ ಪುರಾಣ

    ಆರ್​ಬಿಐ ಯೋಜನೆ, ಪ್ರಧಾನಿ ಲೋಕಾರ್ಪಣೆ; ಚಿಲ್ಲರೆ ಹೂಡಿಕೆ ದಾರರಿಗೆ ರಿಟೇಲ್ ಡೈರೆಕ್ಟ್ ಸ್ಕೀಮ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts