More

    ಒಂದೇ ಸಿರಿಂಜ್​ನಿಂದ 39 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿ ಪರಾರಿಯಾಗಿದ್ದ ಆರೋಪಿ ಅಂದರ್​!

    ಭೋಪಾಲ್​: ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಲಸಿಕೆ ನೀಡಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರನ್ನು ನೀಡಿದ್ದ ಚುಚ್ಚುಮದ್ದುಗಾರನನ್ನು ಮಧ್ಯಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅಲ್ಲದೆ, ಓರ್ವ ಮುಖ್ಯ ಲಸಿಕಾಧಿಕಾರಿಯನ್ನು ಸಹ ಅಮಾನತು ಮಾಡಲಾಗಿದೆ.

    ಬಂಧಿತ ಚುಚ್ಚುಮದ್ದುಗಾರನ ಹೆಸರು ಜೀತೇಂದ್ರ. ಮಧ್ಯ ಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಅಧಿಕಾರಿಗಳು ಒಂದೇ ಒಂದು ಸಿರಿಂಜ್​ ಕಳುಹಿಸಿಕೊಟ್ಟಿದ್ದರು ಮತ್ತು ಅದರಲ್ಲೇ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವಂತೆ ವಿಭಾಗದ ಮುಖ್ಯಸ್ಥರು ಆದೇಶಿಸಿದರು ಎಂದು ಜೀತೇಂದ್ರ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಮಧ್ಯಪ್ರದೇಶದ ಆರೋಗ್ಯ ಇಲಾಖೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸಾಗರ್​ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಜೀತೇಂದ್ರ ಲಸಿಕೆ ನೀಡಿದ್ದ. ಒಂದು ಸಿರಿಂಜ್ ಅನ್ನು ಹಲವಾರು ಜನರಿಗೆ ಚುಚ್ಚುಮದ್ದು ಮಾಡಲು ಬಳಸಬಾರದು ಎಂದು ನಿಮಗೆ ತಿಳಿದಿದೆಯೇ ಎಂದು ಜೀತೇಂದ್ರನನ್ನು ಪ್ರಶ್ನಿಸಿದಾಗ, ಆತ ನನಗೆ ಅದು ತಿಳಿದಿದೆ. ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ಆರೋಗ್ಯ ಅಧಿಕಾರಿಗಳನ್ನು ಕೇಳಿದೆ. ಅದಕ್ಕೆ ಅವರು ‘ಹೌದು’ ಎಂದು ಹೇಳಿದರು. ಹೀಗಿರುವಾಗ ಇದು ನನ್ನ ತಪ್ಪು ಹೇಗಾಗುತ್ತದೆ? ನಾನು ಏನು ಮಾಡಬೇಕೆಂದು ಕೇಳಿಕೊಂಡೆನೋ ಅದನ್ನು ಮಾಡಿದ್ದೇನೆ ಎಂದು ಉಡಾಫೆಯ ಉತ್ತರ ನೀಡಿದ್ದ.

    ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಸಾಗರ್​ ಜಿಲ್ಲಾಡಳಿತ ಜಿತೇಂದ್ರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್​ಐಆರ್​)ಯನ್ನು ದಾಖಲಿಸಿದೆ. ಕೇಂದ್ರ ಸರ್ಕಾರದ “ಒಂದು ಸೂಜಿ, ಒಂದು ಸಿರಿಂಜ್, ಒಂದು ಬಾರಿ” ಪ್ರತಿಜ್ಞೆಯನ್ನು ನಿರ್ಲಕ್ಷ ಮತ್ತು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಘಟನೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆ ಜೀತೇಂದ್ರ ಪರಾರಿಯಾಗಿದ್ದು, ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, 19 ಮಕ್ಕಳ ವರದಿ ನಾರ್ಮಲ್​ ಎಂದು ಬಂದಿದೆ. ಉಳಿದ ಮಕ್ಕಳ ಆರೋಗ್ಯ ತಪಾಸಣಾ ವರದಿ ಬರಬೇಕಿದೆ. ಇನ್ನು ಒಂದೇ ಸಿರಿಂಜ್​ನಲ್ಲಿ ಲಸಿಕೆ ಪಡೆದ 39 ಮಕ್ಕಳು 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಇವರಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿದ್ದಾರೆ.

    ಭಾರತದಲ್ಲಿ 2021ರ ಜನವರಿಯಲ್ಲಿ ಕೋವಿಡ್​ ಲಸಿಕೀಕರಣ ಪ್ರಾರಂಭವಾಗುವ ಒಂದು ತಿಂಗಳ ಮೊದಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಟ್ಟುನಿಟ್ಟಾದ “ಒಂದು ಸೂಜಿ, ಒಂದು ಸಿರಿಂಜ್, ಒಂದೇ ಬಾರಿ” ಶಿಷ್ಟಾಚಾರವನ್ನು ಜಾರಿ ಮಾಡಿದೆ. ಇದೇ ರೀತಿಯ ಶಿಷ್ಟಾಚಾರವನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಹ ಜಾರಿ ಮಾಡಿದೆ. (ಏಜೆನ್ಸೀಸ್​)

    VIDEO| ಒಂದೇ ಸಿರಿಂಜ್​ನಲ್ಲಿ 30 ವಿದ್ಯಾರ್ಥಿಗಳಿಗೆ ಲಸಿಕೆ: ಕಾರಣ ಕೇಳಿದ್ದಕ್ಕೆ ಈ ರೀತಿನಾ ಮಾತಾಡೋದು…

    ಒಂದು ಚಪಾತಿ ಕೊಟ್ಟ ಮೇಲೂ ಇನ್ನೊಂದು ಕೇಳಿದ, ಕೊಡದಿದ್ದಕ್ಕೆ ನಡೆಯಿತು ಭೀಕರ ಹತ್ಯೆ!

    ಇವರೇ ನೋಡಿ ಪಾಕ್​ ಪೊಲೀಸ್​ ಇಲಾಖೆಯಲ್ಲಿ ಉನ್ನತ ಹುದ್ದೆಗೇರಿದ ಮೊದಲ ಹಿಂದು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts