More

    ರೈಲು ಡಿಕ್ಕಿ ಹೊಡೆದ ರಭಸಕ್ಕೆ ನದಿಗೆ ಬಿದ್ದ ಯುವತಿ: ಬಾಯ್​ಫ್ರೆಂಡ್​ ಜತೆಗಿನ ವೀಕೆಂಡ್​ ಮೋಜು ದುರಂತ ಅಂತ್ಯ

    ಕೊಯಿಕ್ಕೋಡ್​: ರೈಲು ಡಿಕ್ಕಿ ಹೊಡೆದ ಬೆನ್ನಲ್ಲೇ ನದಿಗೆ ಬಿದ್ದು ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ನಡೆದಿದೆ.

    ಮೃತ ಯುವತಿಯನ್ನು ನಫಾತ್​ ಫತಾಹ್​ ಎಂದು ಗುರುತಿಸಲಾಗಿದೆ. ಈಕೆ ಕರುವಂತುರುತಿ ನಿವಾಸಿ. ಹಳಿಯ ಮೇಲೆ ನಡೆದು ಹೋಗುವಾಗ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದು, ನಂತರ ನದಿಗೆ ಬಿದ್ದು ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.

    ಈ ಘಟನೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ಕೊಯಮತ್ತೂರು-ಮಂಗಳೂರು ಪ್ಯಾಸೆಂಜರ್​ ರೈಲು ಯುವತಿಗೆ ಡಿಕ್ಕಿ ಹೊಡೆದಿದೆ. ನದಿಗೆ ಬಿದ್ದ ಆಕೆ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೃತದೇಹವನ್ನು ಬೇಪೋರ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ಬಾಯ್​ಫ್ರೆಂಡ್​ ಜತೆ ವೀಕೆಂಡ್​ ಮೋಜಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಯುವತಿಯ ಜೊತೆಯಲ್ಲಿದ್ದ ಬಾಯ್​ಫ್ರೆಂಡ್​​ ಕೂಡ ಘಟನೆಯಲ್ಲಿ ಗಾಯಗೊಂಡಿದ್ದು, ಆತನನ್ನು ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ರಥೋತ್ಸವದ ವೇಳೆ ಅವಘಡ: ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

    VIDEO! ಶರದ್​ ಪವಾರ್​ ವಿರುದ್ಧ ಮಾತನಾಡಿದ ಬಿಜೆಪಿ ನಾಯಕನಿಗೆ ಎನ್​ಸಿಪಿ ಕಾರ್ಯಕರ್ತರಿಂದ ಕಪಾಳಮೋಕ್ಷ

    ಅಪಘಾತದಲ್ಲಿ ಪ್ರಿಯಕರ ಮೃತಪಟ್ಟ ನೋವಿನಿಂದ ಪ್ರೇಯಸಿ ಆತ್ಮಹತ್ಯೆ: ಒಂದೇ ಸ್ಥಳದಲ್ಲಿ ಪ್ರೇಮಿಗಳ ಅಂತ್ಯಕ್ರಿಯೆ

    VIDEO: ಆತ್ಮಹತ್ಯೆ ಮಾಡಿಕೊಳ್ಳಲು ಮೊಬೈಲ್‌ ಟವರ್‌ ಏರಿದವಳ ರಕ್ಷಿಸಿತು ಜೇನ್ನೊಣ! ಇದೆಂಥ ಅಚ್ಚರಿ ಅಂತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts