More

    ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ನಂಬಿಸಿ ಹಣ ದೋಚುತ್ತಿದ್ದ ಖತರ್ನಾಕ್​ ಗ್ಯಾಂಗ್ ಬಂಧನ​

    ಕೊಪ್ಪಳ: ಕಡಿಮೆ ದರಕ್ಕೆ ಚಿನ್ನ ಕೊಡುವುದಾಗಿ ನಂಬಿಸಿ ಹಣ ದೋಚುವ ಖತರ್ನಾಕ್​ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಡಿಪಾಯ ತೆಗೆಯುವಾಗ ಚಿನ್ನ ಸಿಕ್ಕಿದೆ. ಅದನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸಿ ಆರೋಪಿಗಳು ವಂಚನೆ ಮಾಡುತ್ತಿದ್ದರು.

    ಯಲಬುರ್ಗಾ ತಾಲೂಕಿನ ವಣಗೇರಿಯ ವೆಂಕಟೇಶ ಎಂಬುವರನ್ನ ನಂಬಿಸಿ 5 ಲಕ್ಷ ಹಣ ದೋಚಿದ್ದರು. ನನ್ನ ಹೆಸರು ರಮೇಶ. ಚಿಕ್ಕಮಗಳೂರಿನ ನಿವಾಸಿ ಎಂದು ಹೇಳಿ ವೆಂಕಟೇಶ್​ಗೆ ಆರೋಪಿಗಳು ಫೋನು‌ ಮಾಡಿದ್ದರು. ಹಲಗೇರಿ ಬಳಿ ಹಣ ತಂದರೆ ನಿಮಗೆ ಚಿನ್ನವನ್ನು ಕೊಡುತ್ತೇವೆ ಎಂದು ಹೇಳಿದ್ದರು.

    ಆರೋಪಿಗಳ ಮಾತನ್ನು ನಂಬಿ ವೆಂಕಟೇಶ್​ ಹಲಗೇರಿಗೆ ಬಂದಾಗ ಅವರಿಂದ 5 ಲಕ್ಷ ರೂ. ಹಣವನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು. ಫೆ.1 ರಂದು 6 ಜನರ ಗ್ಯಾಂಗ್​ನಿಂದ ಈ ಕೃತ್ಯ ನಡೆದಿತ್ತು. ಪರಾರಿಯಾಗಿದ್ದ 6 ಜನರ ಪೈಕಿ 4 ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಕೊಪ್ಪಳ ತಾಲೂಕು ಅಳವಂಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದಿದೆ. (ದಿಗ್ವಿಜಯ ನ್ಯೂಸ್​)

    ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವಿಡಿಯೋ ಲೀಕ್​ ಆಗಿದೆ ಎಂದು ಸುಪ್ರೀಂ ಮೆಟ್ಟಿಲೇರಿದ ಸಂತ್ರಸ್ತೆ

    ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಮಾಡಿದ ಆರೋಪಿ ಪೊಲೀಸ್​ ವಿಚಾರಣೆಯಲ್ಲಿ ಹೇಳಿದ್ದು ಹೀಗೆ…

    ಅನುಮಾನಾಸ್ಪದವಾಗಿ ಓಡಾಡುತ್ತಿದೆ ಅಂತಾ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts