More

    ಕೋಲಾರಕ್ಕೆ ಸಿದ್ದರಾಮಯ್ಯ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಬೆನ್ನಲ್ಲೇ ವರ್ತೂರು ಪ್ರಕಾಶ್ ಆಡಿಯೋ ವೈರಲ್

    ಕೋಲಾರ: ಕೋಲಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ ಕೊಡುತ್ತಾರೆ ಎಂಬ ವಿಷಯ ಸುದ್ದಿಯಾದ ಬೆನ್ನಲ್ಲೇ ಮಾಜಿ ಸಚಿವ ವರ್ತೂರು ಪ್ರಕಾಶ್ ಆಡಿಯೋವೊಂದು ವೈರಲ್ ಆಗಿದೆ.

    ಆಡಿಯೋದಲ್ಲಿ ತಮ್ಮ ಮುಖಂಡರೊಬ್ಬರೊಂದಿಗೆ ವರ್ತೂರು ಪ್ರಕಾಶ್​ ಮಾತನಾಡಿದ್ದಾರೆ. ಆಡಿಯೋ ಕೇಳಿದ ಬೆನ್ನಲ್ಲೇ ಕಾಂಗ್ರೆಸ್​​ ನಾಯಕರು ಸಿದ್ದರಾಮಯ್ಯ ಬಳಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿರುವ ಜಿಲ್ಲೆಯ ಮುಖಂಡರು ಸಿದ್ದರಾಮಯ್ಯ ಮನವೊಲಿಸುವ ಕೆಲಸ ಮಾಡಿದ್ದಾರೆ.

    ಇನ್ನು ಪ್ರಕಾಶ್ ಮಾತನಾಡಿರುವ ಆಡಿಯೋದಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ, ನಾನು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತೇನೆ. ಸಾಯಲಿ, ಬದುಕಲಿ ಮುಸ್ಲಿಂ ಎಲ್ಲರೂ ಕಾಂಗ್ರೆಸ್​ಗೆ ಬೆಂಬಲ ನೀಡೋದು. ಹಾಗಂತ ಮುಸ್ಲಿಂ ಮತಗಳಿಂದ ಶಾಸಕರಾಗೋಕೆ ಆಗುತ್ತಾ? ಮುಸ್ಲಿಂ ಅಭ್ಯರ್ಥಿಯಾದ್ರೆ 90 ರಷ್ಟ ಮತ ಬೀಳುತ್ತೆ. ಅದೇ ಹಿಂದು ಅಭ್ಯರ್ಥಿಯಾದರೆ 20 ಪರ್ಸೆಂಟ್ ಬರುತ್ತೆ. ಚುನಾವಣೆಯಲ್ಲಿ ಗೆಲ್ಲಬೇಕಾದ್ರೆ ಪ್ರತಿ ಹಳ್ಳಿಯಲ್ಲೂ 50 ರಷ್ಟು ಮತ ಬರಬೇಕು, ಯಾವುದಾದ್ರು ಹಳ್ಳಿಯಲ್ಲಿ ಕಾಂಗ್ರೆಸ್​ ಪಕ್ಷ ಇದಿಯಾ? ಇಲ್ಲಿರುವ ನಾಯಕರು ಯಾರಾದರೂ 2 ಸಾವಿರ ಜನ ಸೇರಿಸ್ತಾರಾ? ಸೇರಿಸಿ ತೋರಿಸಲಿ ಎಂದು ವರ್ತೂರ್​ ಪ್ರಕಾಶ್​ ಸವಾಲು ಹಾಕಿದ್ದಾರೆ.

    ಸಿದ್ದರಾಮಯ್ಯರನ್ನ ದಿಕ್ಕು ತಪ್ಪಿಸಿ ಅವರಿಗೆ ಅವಮಾನ ಮಾಡಲು‌ ಮುಂದಾಗಿದ್ದಾರೆ. ಕೋಲಾರ ಕ್ಷೇತ್ರದ 220 ಹಳ್ಳಿಗಳಲ್ಲಿ ಕಾಂಗ್ರೆಸ್​​ ಇಲ್ಲ ಎಂದ ವರ್ತೂರು ಪ್ರಕಾಶ್​, ನೀವೇ ಒಮ್ಮೆ ಮನವಿ‌ ಮಾಡಿ, ಇಲ್ಲಿ ಬರೋದು ಬೇಡ ಅಂತಾ ಎಂದು ಮುಖಂಡರು ಹೇಳಿದ ಮಾತಿಗೆ ಉತ್ತರಿಸಿ, ನಾನ್ಯಾಕೆ ಅವರನ್ನ ಕೇಳಲಿ ನನಗೆ ಅಂತಹ ಅಗತ್ಯ ಇಲ್ಲ, ಈಗಾಗಲೇ ಕುರುಬ ಸಮುದಾಯದವರು ಬರಬೇಡಿ ಎಂದಿದ್ದಾರೆ. ಸಿದ್ದರಾಮಯ್ಯ ನೂರಕ್ಕೆ‌ ನೂರರಷ್ಟು ಕೋಲಾರಕ್ಕೆ ಬರೋದಿಲ್ಲ ಎಂದು ಮಾತನಾಡಿರುವ ಮೂರು ನಿಮಿಷದ ಆಡಿಯೋ ವೈರಲ್‌ ಆಗಿದೆ. (ದಿಗ್ವಿಜಯ ನ್ಯೂಸ್​)

    PHOTOS| ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಣ್ಸನ್ನೆ ಬೆಡಗಿ ಪ್ರಿಯಾ!

    ಸಲಿಂಗಕಾಮಕ್ಕಾಗಿ ಚೆನ್ನೈನಿಂದ ಬೆಂಗ್ಳೂರಿಗೆ ಬಂದಿದ್ದವನು ಲಾಡ್ಜ್​ನಲ್ಲಿ ಶವವಾಗಿ ಪತ್ತೆ: ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು

    ಬಿಬಿಎಂಪಿ ಲಾರಿಗೆ ದಂಪತಿ ಬಲಿ: ಇಬ್ಬರು ಹೆಣ್ಣು ಮಕ್ಕಳ ನೆರವಿಗೆ ನಿಂತ ಟ್ರಾಫಿಕ್ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts