More

    ಮುಂಬರುವ ಸರಣಿಯಲ್ಲಿ ಭಾರತವನ್ನು ಕಾಡುವ ವಿಂಡೀಸ್​ ಆಟಗಾರನ ಹೆಸರೇಳಿದ ಡರೇನ್​ ಸಮಿ!

    ನವದೆಹಲಿ: ಟೀಮ್​ ಇಂಡಿಯಾ ಮತ್ತು ವೆಸ್ಟ್​ ಇಂಡೀಸ್​ ತಂಡದ ನಡುವಿನ ಏಕದಿನ ಮತ್ತು ಟಿ20 ಸರಣಿಗೆ ವೇದಿಕೆ ಸಿದ್ಧವಾಗುತ್ತಿದೆ. ಫೆಬ್ರವರಿ 6ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಫೆ. 16 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

    ಭಾರತದಲ್ಲೇ ಪಂದ್ಯಗಳು ನಡೆಯಲಿದೆ. ಎಲ್ಲ ಏಕದಿನ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದರೆ, ಟಿ20 ಪಂದ್ಯಗಳು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯದಲಿದೆ. ಪ್ರವಾಸಿ ವೆಸ್ಟ್​ ಇಂಡೀಸ್​ ತಂಡ ಕಠಿಣ ತರಬೇತಿಯಲ್ಲಿ ನಿರತವಾಗಿದ್ದು, ವಿಂಡೀಸ್​ ತಂಡವನ್ನು ಕೀರನ್​ ಪೊಲಾರ್ಡ್​ ಮುನ್ನೆಡೆಸಲಿದ್ದಾರೆ.

    ಈ ಬಾರಿ ಭಾರತವನ್ನು ಕಾಡುವ ಆಟಗಾರನ ಹೆಸರನ್ನು ವಿಂಡೀಸ್​ ಮಾಜಿ ನಾಯಕ ಡರೇನ್​ ಸಮಿ ಹೇಳಿದ್ದಾರೆ. ಬಲಿಷ್ಠ ಭಾರತ ತಂಡದ ವಿರುದ್ಧ ವೆಸ್ಟ್ ಇಂಡೀಸ್ ತಮ್ಮ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದಿರುವ ಸಮಿ, ಪೊಲಾರ್ಡ್​ ಅವರ ಅನುಭವ ವಿಂಡೀಸ್​ ತುಂಬಾ ಉಪಕಾರಿಯಾಗಲಿದೆ ಎಂದಿದ್ದಾರೆ.

    ಪೊಲಾರ್ಡ್​ ಖಂಡಿತ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ. ಅನೇಕ ವರ್ಷಗಳಿಂದ ಭಾರತದ ನೆಲದಲ್ಲಿ ಆಡಿರುವ ಅನುಭವ ಅವರಿಗಿದೆ. ಅಲ್ಲಿನ ಸ್ಥಿತಿಯ ಬಗ್ಗೆ ಪೊಲಾರ್ಡ್​ಗೆ ತುಂಬಾ ಅರಿವಿದೆ. ಹೀಗಾಗಿ ಭಾರತವನ್ನು ಕಾಡುವುದರಲ್ಲಿ ಅಚ್ಚರಿಯಿಲ್ಲ ಎಂದು ಸಮಿ ಹೇಳಿದ್ದಾರೆ. ಅಲ್ಲದೆ, ಕಳೆದ ಇಂಗ್ಲೆಂಡ್​ ಸರಣಿಯಲ್ಲಿ ಕೆಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಇದು ತಂಡಕ್ಕೆ ಮತ್ತಷ್ಟು ಬಲ ತಂದಿದ್ದು, ಭಾರತದಲ್ಲಿ ವಿಂಡೀಸ್​ ಉತ್ತಮ ನಿರ್ವಹಣೆ ತೋರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಭಾರತ ತಂಡ ಯಾವಾಗಲೂ ತವರಿನಲ್ಲಿ ಬಲಿಷ್ಠವಾಗಿದೆ ಮತ್ತು ಕೆಲವು ಉತ್ತಮ ಏಕದಿನ ಆಟಗಾರರ ಕಾರಣದಿಂದಾಗಿ ಭಾರತದ ವಿರುದ್ಧದ ಸೆಣಸಾಟ ಸುಲಭವೂ ಅಲ್ಲ ಎಂದು ಸಮಿ ಹೇಳಿದ್ದಾರೆ.

    ಇನ್ನು ಭಾರತ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಗಾಯದ ಸಮಸ್ಯೆಯಿಂದ ರೋಹಿತ್​ ಶರ್ಮ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನೆಡೆಸಿದ ಕೆ.ಎಲ್. ರಾಹುಲ್​ಗೆ ವಿಂಡೀಸ್​ ಟೂರ್ನಿ ಕಹಿ ಅನುಭವವಾಗಿ ಉಳಿದುಕೊಂಡಿದೆ. ಇದೀಗ ಸಂಪೂರ್ಣ ಫಿಟ್​ ಆಗಿರುವ ರೋಹಿತ್​, ತವರಿನಲ್ಲಿ ವಿಂಡೀಸ್​ ವಿರುದ್ಧ ಟೀಮ್​ ಇಂಡಿಯಾವನ್ನು ಮುನ್ನೆಡೆಸಲಿದ್ದಾರೆ. (ಏಜೆನ್ಸೀಸ್​)

    ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ರೊಮಾನ್ಸ್​ ಪ್ರಕರಣ: ಸೇವೆಯಿಂದ ಮುಖ್ಯಶಿಕ್ಷಕ ಖಾಯಂ ವಜಾ

    ಮತ್ತೊಂದು ದಾಖಲೆ ಬರೆದ ಜೈ ಭೀಮ್​ ಚಿತ್ರ: ಟೆಲಿವಿಷನ್​ ಪ್ರೀಮಿಯರ್​ನಲ್ಲಿ ಅತ್ಯಧಿಕ ಟಿಆರ್​ಪಿ

    ತಂದೆ-ತಾಯಿ ಮೇಲಿನ ಕೋಪಕ್ಕೆ ರೇಷ್ಮೆಗೂಡಿಗೆ ವಿಷ ಹಾಕಿದ ಮಗಳು! ಕೋಲಾರದಲ್ಲಿ ಅಮಾನವೀಯ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts