More

    ಆಫ್ಘಾನ್​ನಲ್ಲಿ ಅಡಗಿದ್ದಾನೆ ಜಾಗತಿಕ ಉಗ್ರ ಮಸೂದ್​ ಅಜರ್: ಪಾಕ್​ ವಿದೇಶಾಂಗ ಸಚಿವರ ಹೇಳಿಕೆ

    ನವದೆಹಲಿ: ಜೈಷ್​ ಎ ಮೊಹಮ್ಮದ್​ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್​ ಅಜರ್ ಅಫ್ಘಾನಿಸ್ತಾನದಲ್ಲಿ ಇರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಾಲ್​ ಭುಟ್ಟೋ ಜರ್ದಾರಿ ಹೇಳಿದ್ದಾರೆ. ಮಸೂದ್​ ಅಜರ್​ ನಮ್ಮಲ್ಲಿ ಇಲ್ಲ ಎಂದು ತಾಲಿಬಾನ್​ ಸ್ಪಷ್ಟನೆ ನೀಡಿದ ದಿನದ ಬೆನ್ನಲ್ಲೇ ಪಾಕ್​ ಸಚಿವ ಹೇಳಿರುವ ಮಾತು ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ.

    ಇಂಡಿಯಾ ಟುಡೆ ಜೊತೆ ಮಾತನಾಡಿದ ಭುಟ್ಟೋ ಜರ್ದಾರಿ, ಅಜರ್ ಇನ್ನು ಮುಂದೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಯಾಗಿ ಉಳಿದಿಲ್ಲ. ಆತ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ತ್ರಿಪಕ್ಷೀಯ ಸಮಸ್ಯೆಯಾಗಿದ್ದಾರೆ ಎಂದು ಹೇಳಿದ್ದಾರೆ.

    ಆಫ್ಘಾನ್​ನಲ್ಲಿ ಮಸೂದ್ ಅಜರ್ ಇರುವಿಕೆಯ ಬಗ್ಗೆ ಪಾಕಿಸ್ತಾನದ ಮಾಧ್ಯಮ ವರದಿಗಳನ್ನು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಬುಧವಾರ (ಸೆ.14) ದೃಢವಾಗಿ ತಿರಸ್ಕರಿಸಿದರು. ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನೆಲದಲ್ಲಿ ಮತ್ತು ಅಧಿಕೃತ ಬೆಂಬಲದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಪಾಕ್​ಗೆ ತಿರುಗೇಟು ಸಹ ನೀಡಿದ್ದಾರೆ.

    ಇನ್ನೂ ಮಸೂದ್ ಅಜರ್‌ನನ್ನು ಇಸ್ಲಾಮಾಬಾದ್‌ಗೆ ಹಸ್ತಾಂತರಿಸುವಂತೆ ಪಾಕಿಸ್ತಾನವು ತಾಲಿಬಾನ್ ಸರ್ಕಾರಕ್ಕೆ ಪತ್ರವನ್ನೂ ಕಳುಹಿಸಿದೆ. ನಾವು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯಕ್ಕೆ ಒಂದು ಪುಟದ ಪತ್ರವನ್ನು ಬರೆದಿದ್ದೇವೆ. ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿ (ಪೂರ್ವ ನಂಗರ್‌ಹಾರ್ ಪ್ರಾಂತ್ಯ) ಎಲ್ಲೋ ಅಡಗಿದ್ದಾನೆ ಎಂದು ನಾವು ನಂಬಿದ್ದೇವೆ ಮತ್ತು ಆತನನ್ನು ಪತ್ತೆ ಮಾಡಿ, ವರದಿ ಮಾಡಿ, ಬಂಧಿಸುವಂತೆ ಕೇಳಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಉನ್ನತ ಅಧಿಕಾರಿ ನೀಡಿರುವ ಹೇಳಿಕೆಯನ್ನು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಆದರೆ, ಪಾಕಿಸ್ತಾನವು ಅಫ್ಘಾನಿಸ್ತಾನದ ಮುಂದೆ ಅಂತಹ ಯಾವುದೇ ಬೇಡಿಕೆಯನ್ನು ಮಂಡಿಸಿಲ್ಲ ಮತ್ತು ಪತ್ರ ಬರೆದಿದ್ದಾರೆ ಎನ್ನುವುದು ಸುಳ್ಳು ಎಂದು ಮುಜಾಹಿದ್ ಪಾಕಿಸ್ತಾನದ ಹೇಳಿಕೆಯನ್ನು ನಿರಾಕರಿಸಿದ್ದಾರೆ.

    ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಅಫ್ಘಾನಿಸ್ತಾನದಲ್ಲಿ ಇಲ್ಲ. ಅಂತಹ ಸಂಘಟನೆಗಳು ಪಾಕಿಸ್ತಾನದ ನೆಲದಲ್ಲಿ ಮತ್ತು ಅಧಿಕೃತ ಪ್ರೋತ್ಸಾಹದ ಅಡಿಯಲ್ಲಿಯೂ ಕಾರ್ಯನಿರ್ವಹಿಸಬಹುದು ಎಂದು ತಾಲಿಬಾನ್​ ವಕ್ತಾರ ಮುಜಾಹಿದ್ ಟೋಲೋ ನ್ಯೂಸ್‌ಗೆ ತಿಳಿಸಿದ್ದು, ಅಫ್ಘಾನಿಸ್ತಾನದ ಮಣ್ಣನ್ನು ಬೇರೆ ಯಾವುದೇ ದೇಶದ ವಿರುದ್ಧ ಬಳಸಲು ನಾವು ಯಾರಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

    ಅಂದಹಾಗೆ ಮಸೂದ್ ಅಜರ್ ಜಾಗತಿಕವಾಗಿ ಗೊತ್ತುಪಡಿಸಿದ ಅಥವಾ ಗುರುತಿಸಲ್ಪಟ್ಟ ಭಯೋತ್ಪಾದಕನಾಗಿದ್ದು, ಜೈಷ್​ ಎ ಮೊಹಮ್ಮದ್ ಸಂಘಟನೆಯ ಸಂಸ್ಥಾಪಕನಾಗಿದ್ದಾನೆ. ಭಾರತದಲ್ಲಿ ನಡೆದ ಅನೇಕ ಭಯೋತ್ಪಾದಕ ದಾಳಿಗಳ ಹಿಂದಿನ ಪ್ರಮುಖ ಸಂಚುಕೋರ ಈತನೆ ಆಗಿದ್ದು, ಭಾತರವು ಕೂಡ ಅಜರ್​ ಪತ್ತೆಗೆ ಬಲೆ ಬೀಸಿದೆ. (ಏಜೆನ್ಸೀಸ್​)

    ಮಾನ್ಸೂನ್​ನಲ್ಲೊಂದು ಪ್ರೇಮರಾಗ…; ವಿಜಯವಾಣಿ ಸಿನಿಮಾ ವಿಮರ್ಶೆ

    ಬ್ರೇಕ್ ಇನ್​ಸ್ಪೆಕ್ಟರ್​ಗಳಿಗೆ ಕೊನೆಗೂ ಮುಂಬಡ್ತಿ ಭಾಗ್ಯ; 15 ವರ್ಷಗಳ ಕಾನೂನು ಹೋರಾಟಕ್ಕೆ ಜಯ

    ಮೃತ ವೈದ್ಯರ ಹೆಸರಲ್ಲಿ ಕ್ಲಿನಿಕ್!; ವಿದೇಶಕ್ಕೆ ಹೋದವರ ಹೆಸರೂ ದುರ್ಬಳಕೆ, ರಿಜಿಸ್ಟ್ರಾರ್​ರಿಂದಲೇ ಅಕ್ರಮ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts