More

    ಅವಿಶ್ವಾಸ ನಿರ್ಣಯದಿಂದ ಪಾಕ್​ ಪಿಎಂ ಇಮ್ರಾನ್​ ಖಾನ್ ಸೇಫ್​ ಆಗ್ತಾರಾ? ಇಂದೇ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ​

    ಇಸ್ಲಮಾಬಾದ್​: ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ ಹಲವು ದಿನಗಳ ಬಳಿಕ ಇಂದು ಪಾಕ್​ನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಪರ-ವಿರೋಧ ಮತ ಚಲಾವಣೆ ಆಗಲಿದ್ದು, ಇಮ್ರಾನ್​ ಖಾನ್​ ಅವರ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

    ಇಮ್ರಾನ್​ ಖಾನ್​ ಸರ್ಕಾರ ಮುಂದುವರಿಯಬೇಕೇ? ಅಥವಾ ಬೇಡವೇ? ಎಂಬುದು ಇಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಧಾರವಾಗಲಿದೆ. ಪಾಕಿಸ್ತಾನ ಸಂಸತ್ತಿನ ಕೆಳಮನೆಯಲ್ಲಿ ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಲು ಪ್ರತಿಪಕ್ಷಕ್ಕೆ 172 ಮತಗಳ ಅಗತ್ಯವಿದೆ. ಹಾಗೇ ಪ್ರತಿಪಕ್ಷದ ಪ್ಲಾನ್​ ಅನ್ನು ತಲೆಕೆಳಗಾಗಿಸಲು ಇಮ್ರಾನ್​ಗೂ 172 ಮತಗಳ ಅವಶ್ಯಕತೆ ಇದೆ.

    ಶನಿವಾರ ಮಾತನಾಡಿದ್ದ ಇಮ್ರಾನ್​ ಖಾನ್​, ತಾವು ಮತಕ್ಕಾಗಿ ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ಹೊಂದಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದರು. ಇಂದು ರಾಷ್ಟ್ರೀಯ ಅಸೆಂಬ್ಲಿಗೆ ಪಾಕ್​ ಪ್ರಧಾನಿ ಇಮ್ರಾನ್​ ಭಾಗವಹಿಸಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮುನ್ನ ಅಂದರೆ, ಮಾರ್ಚ್ 30ರಂದು ಇಮ್ರಾನ್ ಖಾನ್ ತಮ್ಮ ಪಕ್ಷದ ರಾಷ್ಟ್ರೀಯ ಅಸೆಂಬ್ಲಿಯ (ಎಂಎನ್‌ಎ) ಸದಸ್ಯರಿಗೆ ಮತದಾನದಿಂದ ದೂರವಿರಲು ಅಥವಾ ಅಧಿವೇಶನಕ್ಕೆ ಹಾಜರಾಗದಂತೆ ಸೂಚಿಸಿದ್ದರು. ಇದೀಗ ಪಕ್ಷವು ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅಧಿವೇಶನಕ್ಕೆ ಹಾಜರಾಗಲು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತನ್ನ ಶಾಸಕರಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಇಲ್ಲಿಯವರೆಗೆ ಏನೇನು ನಡೆದಿದೆ?
    ಮಾರ್ಚ್​ 8: ರಾಷ್ಟ್ರದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಹೆಚ್ಚಳಕ್ಕೆ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವೇ ಕಾರಣ ಎಂದು ಆರೋಪಿಸಿ, ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಸೆಕ್ರೆಟರಿಯೇಟ್​ಗೆ ಮಾರ್ಚ್​ 8ರಂದು ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿವೆ.

    ಮಾರ್ಚ್ 25: ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ನಿರ್ಣಾಯಕ ಅಧಿವೇಶನವು ಪ್ರತಿಪಕ್ಷದ ಶಾಸಕರ ಗದ್ದಲದ ಪ್ರತಿಭಟನೆಯ ನಡುವೆ ನಿರ್ಣಯವನ್ನು ಮಂಡಿಸದೆ ಮುಂದೂಡಲ್ಪಟ್ಟಿತು.

    ಮಾರ್ಚ್​ 27: ಇಸ್ಲಾಮಾಬಾದ್‌ನ ಪರೇಡ್ ಮೈದಾನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.

    ಮಾರ್ಚ್​ 28: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಂತಿಮವಾಗಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಲಾಯಿತು. ಅವಿಶ್ವಾಸ ಮತ ಮಂಡನೆಯಾದ ತಕ್ಷಣ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

    ಮಾರ್ಚ್​ 30: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರದ ಪ್ರಮುಖ ಮೈತ್ರಿ ಪಕ್ಷ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (ಎಂಕ್ಯೂಎಂ-ಪಿ) ಪ್ರತಿಪಕ್ಷಕ್ಕೆ ಬೆಂಬಲ ನೀಡಿದ ನಂತರ ಇಮ್ರಾನ್ ಖಾನ್ ಅವರ ಪಕ್ಷವು ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಕಳೆದುಕೊಂಡಿತು.

    ಏಪ್ರಿಲ್​ 2: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವ ಕಾರಣ ಭಾನುವಾರ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದರು.

    ಇಂದು ಅವಿಶ್ವಾಸ ನಿರ್ಣಯದ ಮೇಲೆ ಮತದಾನ
    ಪಾಕಿಸ್ತಾನದಲ್ಲಿ ಪ್ರತಿಪಕ್ಷಗಳು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ ಒಂದು ತಿಂಗಳ ನಂತರ, ವಿಧಾನಸಭೆಯು ಇಂದು ಅದರ ಮೇಲೆ ಮತ ಚಲಾಯಿಸಲು ಸಿದ್ಧವಾಗಿದೆ. ಪಾಕ್​ ರಾಷ್ಟ್ರೀಯ ಅಸೆಂಬ್ಲಿ 342 ಸದಸ್ಯರ ಬಲವನ್ನು ಹೊಂದಿದೆ. ಇಮ್ರಾನ್​​ ಖಾನ್​ ಸರ್ಕಾರ ಕೆಡವಲು ಪ್ರತಿಪಕ್ಷಗಳಿಗೆ 172 ಮತಗಳ ಅವಶ್ಯಕತೆ ಇದೆ. ಆದರೆ, ನಮಗೆ 175 ಶಾಸಕರ ಬೆಂಬಲ ಇದೆ ಎಂದು ಹೇಳಿದರೆ, ನಮ್ಮ ಬಳಿ ಒಂದಕ್ಕಿಂತ ಹೆಚ್ಚು ಯೋಜನೆ ಇದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)

    ಥೂ ಇದೆಂಥಾ ನೀಚ ಕೃತ್ಯ? ಒಂದೇ ದಿನದಲ್ಲಿ 17 ಮಂದಿಯ ಜತೆ 16ರ ಹುಡುಗಿಯ ಒತ್ತಾಯದ ಲೈಂಗಿಕ ಕ್ರಿಯೆ

    ಚಾಯ್​-ಸ್ಯಾಮ್​ ಭವಿಷ್ಯ ನಿಜವಾಯ್ತು ಇದೀಗ ಪ್ರಭಾಸ್​ ಬಗ್ಗೆ ಭಯಾನಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

    ಪೆಟ್ರೋಲ್ ಬೆಲೆ ಏರಿಕೆ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ, ಹಿಂದಿನ ಸರ್ಕಾರದ ತಪ್ಪು ನೀತಿ ಕಾರಣವೆಂದ ಡಿವಿಎಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts